ನ್ಯೂಸ್

ವೀರಶೈವ ಮಹಾಸಭೆ ಚುನಾವಣಾ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ, ಜಿಲ್ಲಾ, ತಾಲೂಕು ಮತ್ತು ಇತರ ಘಟಕಗಳಿಗೆ ಇದೇ ಡಿಸೆಂಬರ್ 27ರಂದು ಚುನಾವಣೆ ನಡೆಯಲಿದೆ. ಮಾರ್ಚ್‌ನಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ಕರೊನಾ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.

ಹೊಸದಾಗಿ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ, ಸದಸ್ಯರಾಗಲು ಕೊನೆಯ ದಿನ ನವೆಂಬರ್ 10. ಮತದಾರರ ಅಂತಿಮ ಪಟ್ಟಿ ನ.30ರಂದು ಪ್ರಕಟವಾಗುತ್ತದೆ.

ನಾಮಪತ್ರ ಸ್ವೀಕಾರ ಡಿ. 9ರಂದು ಆರಂಭ. ನಾಮಪತ್ರ ಸಲ್ಲಿಕೆ ಅವಧಿ ಡಿ. 15ರ ಮಧ್ಯಾಹ್ನ 3 ಗಂಟೆಗೆ ಕೊನೆಗೊಳ್ಳುತ್ತದೆ. ಮರುದಿನ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಹಿಂಪಡೆಯಲು ಡಿ.19 ಕೊನೇ ದಿನ. ಮತದಾನ 27ರಂದು ನಡೆಯಲಿದ್ದು, ಅದೇ ದಿನ ಮತಗಳ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.

ಸಂಘಟನೆಯ ಕಾರ‌್ಯದರ್ಶಿ ಎಚ್.ಎಂ. ರೇಣುಕಪ್ರಸನ್ನ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮಹಾಸಭಾ ಅಧ್ಯಕ್ಷ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.