ಮುಂಬೈ: ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ಗಾಯಕಿ ಅಲ್ಕಾ ಯಾಗ್ನಿಕ್(Alka Yagnik), 1980-90ರ ದಶಕದ ತಾರೆ. ಮಾಧುರಿ ದೀಕ್ಷಿತ್ ಮತ್ತು ಅನಿಲ್ ಕಪೂರ್ ಅಭಿನಯದ 'ತೇಜಾಬ್' ಚಿತ್ರದ 'ಏಕ್ ದೋ ತೀನ್' ಹಾಡಿನೊಂದಿಗೆ ಯಶಸ್ಸನ್ನು ಗಳಿಸಿದರು. ಅವರಿಗೆ ಅಂದು ಮತ್ತು ಇಂದಿಗೂ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇದರಲ್ಲಿ ಒಂದು ಹೆಸರು ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್.
ಒಸಾಮಾ ಬಿನ್ ಲಾಡೆನ್ ಗಾಯಕಿ ಅಲ್ಕಾ ಯಾಗ್ನಿಕ್ ಅವರ ನಂಬರ್ 1 ಅಭಿಮಾನಿಯಾಗಿದ್ದರು ಎಂದು ವರದಿಯಾಗಿದೆ. 2011ರಲ್ಲಿ ಅಬೋಟಾಬಾದ್‌ನಲ್ಲಿರುವ ಒಸಾಮ ಬಿನ್ ಲಾಡೆನ್ನ ಅಡಗುತಾಣವನ್ನು ಸಿಐಎ ದಾಳಿ ಮಾಡಿದಾಗ, ಅವನ ಕಂಪ್ಯೂಟರ್‌ನಲ್ಲಿ ಅನೇಕ ಜನಪ್ರಿಯ ಬಾಲಿವುಡ್ ಹಾಡುಗಳು ಕಂಡುಬಂದವು. ಇದರಲ್ಲಿ ಉದಿತ್ ನಾರಾಯಣ್, ಕುಮಾರ್ ಸಾನು ಮತ್ತು ಅಲ್ಕಾ ಯಾಗ್ನಿಕ್ ಅವರ ಹಾಡುಗಳು ಸೇರಿದ್ದವು.
ಅಲ್ಕಾ ಯಾಗ್ನಿಕ್ ಅವರ ಹಾಡುಗಳು ಒಸಾಮಾ ಬಿನ್ ಲಾಡೆನ್ ಅವರ ಸಂಗ್ರಹದಲ್ಲಿವೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸಂದರ್ಶನವೊಂದರ ಕ್ಲಿಪ್ ಸಾಮಾಳಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಸಾಮಾ ಬಿನ್ ಲಾಡೆನ್ ನಿಮ್ಮ ನನ್ನ ನಂಬರ್ 1 ಅಭಿಮಾನಿಯಾಗಿದ್ದರು ಎಂದು ಕೇಳಿದಾ ಅದು ನನ್ನ ತಪ್ಪೇ? ಎಂದಿದ್ದಾರೆ. ಅಲ್ಲದೆ 'ಒಸಾಮಾ ಬಿನ್ ಲಾಡೆನ್ ಯಾರೇ ಆಗಿರಲಿ, ಅವನು ಹೇಗೇ ಇರಲಿ, ಅವನ ಸುತ್ತಲೂ ಎಲ್ಲೋ ಒಂದು ಸಣ್ಣ ಕಲಾವಿದ ಇರಬೇಕು. ನಿಮಗೆ ಇಷ್ಟವಾದರೆ ಅದು ಒಳ್ಳೆಯದು, ಅಲ್ಲವೇ? ಎಂದು ಉತ್ತರಿಸಿದ್ದಾರೆ.
ಒಸಾಮಾ ಬಿನ್ ಲಾಡೆನ್ ಅವರ ಸಂಗ್ರಹದಲ್ಲಿ "ದಿಲ್ ತೇರಾ ಆಶಿಕ್" ಚಿತ್ರದ ಶೀರ್ಷಿಕೆ ಗೀತೆ "ಅಜ್ನಬಿ ಮುಜ್ಕೋ ಇತ್ನಾ ಬಾಟಾ" ಮತ್ತು 1994ರ "ಜಾನೆ ತಮನ್ನಾ" ಚಿತ್ರದ ಉದಿತ್ ನಾರಾಯಣ್ ಅವರ "ತು ಚಾಂದ್ ಹೈ ಪೂನಂ ಕಾ" ನಂತಹ ಹಾಡುಗಳು ಸೇರಿವೆ.(ಏಜೆನ್ಸೀಸ್)