ನ್ಯೂಸ್

ಮಗುವಿನ ನಿರೀಕ್ಷೆಯಲ್ಲಿ 83 ವರ್ಷದ ನಟ, ಗೆಳತಿಯ ವಯಸ್ಸು 29!

ದೆಹಲಿ: ಬೆಳ್ಳಿತೆರೆಯ ಮೇಲೆ ಏನೆನೋ ವಿಚಿತ್ರಗಳು, ಅದ್ಭುತಗಳು ನಡೆಯುತ್ತವೆ. ಅವೆಲ್ಲವೂ ಕಾಲ್ಪನಿಕ ಅಥವಾ ಗ್ರಾಫಿಕ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇಂತಹ ವಿಚಿತ್ರವೊಂದು ನಿಜವಾಗಿ ಬಿಟ್ಟರೇ? ಹೌದು, ಸಿನಿಮಾದ ನಟನೊಬ್ಬ ತನ್ನ 82ನೇ ವಯಸ್ಸಿನಲ್ಲಿ ತಂದೆಯಾಗುತ್ತಿದ್ದಾರೆ.

ಹಾಲಿವುಡ್​ನ ದಿಗ್ಗಜ ನಟ ಹಾಗೂ ಆಸ್ಕರ್​ ಪ್ರಶಸ್ತಿ ವಿಜೇತ ಅಲ್ ಪಸಿನೋ ತಮ್ಮ 82ನೆ ವಯಸ್ಸಿನಲ್ಲಿ ತಂದೆಯಾಗಲಿದ್ದಾರೆ. 29 ವರ್ಷದ ಸಿನಿಮಾ ನಿರ್ಮಾಪಕಿ ನೂರ್ ಅಲ್ಫಲ್ಲಾಹ್ ಹಾಗೂ ಪಸಿನೋ ಮಗುವಿನ ನಿರೀಕ್ಷೆಯಲ್ಲಿದ್ದಾರೆಂದು ವಿದೇಶಿ ಪತ್ರಿಕೆಯೊಂದು ಈ ಕುರಿತು ವರದಿ ಮಾಡಿದೆ.

ಅಲ್ ಪಸಿನೋ ಈಗಾಗಲೇ ಮೂರು ಮಕ್ಕಳ ತಂದೆಯಾಗಿದ್ದರೂ, ನೂರ್​ ಜತೆಗೆ ಕಳೆದ ಒಂದು ವರ್ಷದಿಂದ ಡೇಟಿಂಗ್​ ಮಾಡುತ್ತಿದ್ದಾರೆ. ಕಳೆದ ತಿಂಗಳು, ಅಲ್ ಪಸಿನೊ ಅವರ ಸಹ ನಟ ರಾಬರ್ಟ್ ಡಿ ನಿರೋ ತಮ್ಮ 79ನೇ ವಯಸ್ಸಿನಲ್ಲಿ ಗೆಳತಿ ಟಿಫಾನಿ ಚೆನ್​ರೊಂದಿಗೆ 7ನೇ ಮಗುವನ್ನು ಸ್ವಾಗತಿಸಿದ್ದರು.(ಏಜೆನ್ಸೀಸ್​)