ನ್ಯೂಸ್

ಇದಕ್ಕಿಂತ ಇನ್ನೇನು ಬೇಕು ನಿಮಗೆ? ದಯವಿಟ್ಟು ಹೀಗಂತೂ ಮಾಡಬೇಡಿ! ನಟನ ಪರ ಫ್ಯಾನ್ಸ್​ ಮನವಿ

ಮುಂಬೈ: ಬಾಲಿವುಡ್​ ಚಿತ್ರರಂಗಕ್ಕೆ ತಮ್ಮ ಸಿನಿಮಾಗಳ ಮೂಲಕ ದೊಡ್ಡ ಮಟ್ಟದ ಹಿಟ್​ ತಂದುಕೊಟ್ಟಿರುವ ಸ್ಟಾರ್​ ನಟ ಅಕ್ಷಯ್​ ಕುಮಾರ್​, ಕಳೆದ 20 ವರ್ಷಗಳಿಂದ ಹಿಂದಿ ಚಿತ್ರೋದ್ಯಮದಲ್ಲಿ ತಮ್ಮದೇ ವಿಶೇಷ ಛಾಪನ್ನು ಮೂಡಿಸುವ ಮುಖೇನ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಚಿತ್ರ ಗೆದ್ದಾಗ ಅದನ್ನು ಕೊಂಡಾಡಿದ್ದ ಸಿನಿಪ್ರೇಕ್ಷಕರು, ಸಿನಿಮಾ ಸೋತಾಗ ಅದರಲ್ಲಿ ಆಗಿರುವ ತಪ್ಪುಗಳನ್ನು ಮುಂದಿನ ಚಿತ್ರಗಳಲ್ಲಿ ಸರಿಪಡಿಸಿಕೊಳ್ಳುವಂತೆ ಸಲಹೆ ನೀಡುತ್ತಿದ್ದರು. ಆದ್ರೆ, ಇದೀಗ ಜನರ ವಿರುದ್ಧ ಅಕ್ಷಯ್​ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಮಿಡಿ, ಆ್ಯಕ್ಷನ್​, ಲವ್​, ಡ್ರಾಮಾ ಜಾನರ್​​ಗಳ ಮೂಲಕವೇ ತಮ್ಮ ಅಭಿಮಾನಿಗಳನ್ನು ರಂಜಿಸಿರುವ ಅಕ್ಷಯ್ ಕುಮಾರ್​ ಇದೀಗ ಮತ್ತೊಂದು ಸಿನಿಮಾ ಮೂಲಕ ಸಿನಿಪ್ರೇಕ್ಷಕರನ್ನು ಮನರಂಜಿಸಲು 'ಸರ್ಫಿರಾ' ಮುಖೇನ ತೆರೆಗೆ ಬಂದಿದ್ದಾರೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ವಾರದಲ್ಲೇ ಬಾಕ್ಸ್​ ಆಫೀಸ್​ನಲ್ಲಿ 500 ಕೋಟಿ ರೂ. ಗಳಿಸುತ್ತಿದ್ದ ಅಕ್ಷಯ್ ಕುಮಾರ್ ಸಿನಿಮಾಗಳ ಪೈಕಿ ಸರ್ಫಿರಾ ಮಾತ್ರ ಕೇವಲ 50 ಕೋಟಿ ರೂ. ಗಳಿಕೆ ಕಾಣಲು ಹೆಣಗಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಜುಲೈ 12ರಂದು ತೆರೆಗೆ ಅಪ್ಪಳಿಸಿದ ಅಕ್ಷಯ್ ಕುಮಾರ್​ ನಟನೆಯ 'ಸರ್ಫಿರಾ' ಚಿತ್ರವು ಸದ್ಯ ಬಿಡುಗಡೆಗೊಂಡ ಒಂದು ವಾರದಿಂದಲೂ ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡುತ್ತಿಲ್ಲ. ಮೊದಲ ದಿನದಿಂದ ಇವತ್ತಿನವರೆಗೂ ಗಲ್ಲಾಪೆಟ್ಟಿಗೆಯಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ಅಕ್ಷಯ್​ ಚಿತ್ರಕ್ಕೆ ಫ್ಯಾನ್ಸ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಚಿತ್ರವನ್ನು ನೋಡಲು ಜನರು ಚಿತ್ರಮಂದಿರಗಳಿಗೆ ಏಕೆ ಬರುತ್ತಿಲ್ಲ? ಇಂತಹ ಒಳ್ಳೆಯ ಸಿನಿಮಾಗೆ ಬರದಿರಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಪ್ರಶಸ್ತಿ ಪಡೆದ ನಟ, ನಿರ್ದೇಶಕರು ಹಾಗೂ ಸಂಗೀತ ಸಂಯೋಜಕರು ಇರುವ ಇಂತಹ ಅದ್ಭುತ ಸಿನಿಮಾವನ್ನು ಏಕೆ ನೋಡುತ್ತಿಲ್ಲ? ಇದಕ್ಕಿಂತ ಇನ್ನೇನು ಬೇಕು ಎಂದು ಫ್ಯಾನ್ಸ್​ ಜನರನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ. ವರದಿಗಳ ಪ್ರಕಾರ, ಚಿತ್ರ ಮೊದಲ ದಿನ 2.5 ಕೋಟಿ ರೂ, ಎರಡು ದಿನ 4.25 ಕೋಟಿ ರೂ., ಮೂರು ದಿನ 5.25 ಕೋಟಿ ರೂ., ನಾಲ್ಕನೇ ದಿನ 1.45 ಕೋಟಿ ರೂ. ಗಳಿಸಿದ್ದು, ಇಲ್ಲಿಯವರೆಗೆ 15.4 ಕೋಟಿ ರೂಪಾಯಿ ಕಲೆಕ್ಷನ್ ಕಾಣುವಲ್ಲಿ ಸಫಲವಾಗಿದೆ,(ಏಜೆನ್ಸೀಸ್).