ದ್ವಾರಕಾ: ಬಿಪರ್ಜಾಯ್ ಚಂಡಮಾರುತ ತೀವ್ರವಾಗಿರುವ ಹಿನ್ನೆಲೆಯಲ್ಲಿ 90 ಮೀಟರ್ ಎತ್ತರದ ಆಕಾಶವಾಣಿ ಗೋಪುರವನ್ನು ಮುಂಜಾಗ್ರತಾ ಕ್ರಮವಾಗಿ ಕಿತ್ತು ಹಾಕಲಾಗಿರುವ ಘಟನೆ ಗುಜರಾತ್‌ನ ದ್ವಾರಕಾದಲ್ಲಿ ನಡೆದಿದೆ.
ಇದನ್ನೂ ಓದಿ: ಮಾರಿಗೆ ದಾರಿಬಿಡಿ; ರಾಜ್ ನಿರ್ದೇಶನದ ಹೊಸ ಚಿತ್ರದ ಸ್ಟ್ ಲುಕ್
ಬಿಪರ್ಜಾಯ್ ಚಂಡಮಾರುತ ಗುರುವಾರದಂದು ಕಚ್ ಮತ್ತು ಸೌರಾಷ್ಟ್ರ ಪ್ರದೇಶಗಳಿಗೆ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಗುಜರಾತ್‌ನ ದ್ವಾರಕಾದಲ್ಲಿ ಉಕ್ಕಿನ ಹಗ್ಗಗಳಿಂದ ಬೆಂಬಲದಿಂದ ಅಲುಗಾಡದೇ ನಿಂತಿದ್ದ 90 ಮೀಟರ್ ಎತ್ತರದ ಪ್ರಸರಣ ಗೋಪುರವನ್ನು ಕೆಡವಿದ್ದೇವೆ. ದುರ್ಘಟನೆಯನ್ನು ತಡೆಗಟ್ಟಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೀವ, ಆಸ್ತಿ-ಪಾಸ್ತಿ ಹಾನಿಯನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಕಾಶವಾಣಿ ತಿಳಿಸಿದೆ.
ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ದ್ವಾರಕಾದಿಂದ ಆಕಾಶವಾಣಿ ಸೇವೆಗಳನ್ನು ಮರುಸ್ಥಾಪಿಸುವ ಕಾರ್ಯವನ್ನು ಮಾಡಲಾಗುತ್ತಿದ್ದು, ಕಳೆದ ಜನವರಿಯಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸೂರತ್‌ನ ರಚನಾತ್ಮಕ ತಜ್ಞರು ಮತ್ತು ಪ್ರಸಾರ ಭಾರತಿಯ ನಾಗರಿಕ ನಿರ್ಮಾಣ ವಿಭಾಗವು, ಈ ಗೋಪುರದ ರಚನೆಯ ಸುರಕ್ಷತಾ ಲೆಕ್ಕಪರಿಶೋಧನೆಯ ನಂತರ 35 ವರ್ಷಗಳಷ್ಟು ಹಳೆಯದಾದ ಗೋಪುರವನ್ನು ಕೆಡವಲು ಶಿಫಾರಸು ಮಾಡಿತ್ತು.
ಗುರುವಾರ ದ್ವಾರಕಾ, ಕಚ್, ಪೋರಬಂದರ್, ಜಾಮ್‌ನಗರ, ರಾಜ್‌ಕೋಟ್, ಜುನಾಗಢ್ ಮತ್ತು ಗುಜರಾತ್‌ನ ಮೊರ್ಬಿ ಜಿಲ್ಲೆಗಳಲ್ಲಿ ಗಂಟೆಗೆ 125-135 ಕಿಮೀ ವೇಗದಲ್ಲಿ ಮತ್ತು ಗಂಟೆಗೆ 150 ಕಿಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ.(ಏಜೆನ್ಸೀಸ್)