ನ್ಯೂಸ್

Airtel ಮಹತ್ವದ ಮೈಲುಗಲ್ಲು; ಭಾರತಕ್ಕೆ ಹೈಸ್ಪೀಡ್​ Internet ತರಲು ಎಲಾನ್​ ಮಸ್ಕ್​ನ ಸ್ಪೇಸ್​ ಎಕ್ಸ್​​ ಜತೆ ಒಪ್ಪಂದ​

Airtel: ಭಾರತಕ್ಕೆ ಹೈಸ್ಪೀಡ್​ ಇಂಟರ್​ನೆಟ್(ಸ್ಟಾರ್​ಲಿಂಕ್)​ ತರುವ ಉದ್ದೇಶದಿಂದ ಭಾರ್ತಿ ಏರ್​ಟೆಲ್ ಕಂಪನಿಯು​ ಎಲಾನ್​ ಮಸ್ಕ್​ ಒಡೆತನದ ಸ್ಪೇಸ್​ ಎಕ್ಸ್​ ​ ಜತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಮಂಗಳವಾರ(ಮಾ.11) ಅಧಿಕೃತ ಘೋಷಣೆ ಹೊರಡಿಸಿದೆ.

''ಈ ಒಪ್ಪಂದೊಂದಿಗೆ ಏರ್​ಟೆಲ್​ ಮತ್ತು ಸ್ಪೇಸ್​ ಎಕ್ಸ್​ ಒಟ್ಟಾಗಿ ಭಾರತದಲ್ಲಿ ಕೆಲಸ ಮಾಡುವ ಗಳಿಗೆ(ಸಮಯ)ಯನ್ನು ಎದುರು ನೋಡುತ್ತಿದೆ. ​ಭಾರತಲ್ಲಿ ಏರ್​ಟೆಲ್​ ಗ್ರಾಹಕರಿಗೆ ಸುಲಭ ಮತ್ತು ಹೈಸ್ಪೀಡ್​​ ಇಂಟರ್ನೆಟ್​ ಓದಗಿಸುವ ಸ್ಟಾರ್​ಲಿಂಕ್​ ನೀಡಲು ಸ್ಪೇಸ್​ ಎಕ್ಸ್​​ ಜತೆ ಕೆಲಸ ಮಾಡಲು ತುಂಬಾ ಉತ್ಸುಕವಾಗಿದೆ. ಅಲ್ಲದೆ, ಮುಂದಿನ ಪೀಳಿಗೆಗೆ ಉಪಗ್ರಹ ಸುಲಭ ಸಂಪರ್ಕಕ್ಕೆ ನಾವು ನಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತೇವೆ'' ಭಾರ್ತಿ ಏರ್‌ಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಉಪಾಧ್ಯಕ್ಷ ಗೋಪಾಲ್ ವಿಟ್ಟಲ್ ಹೇಳಿದರು.

ಒಪ್ಪಂದದ ಪ್ರಕಾರ, ಸ್ಪೇಸ್‌ಎಕ್ಸ್ ಮತ್ತು ಏರ್‌ಟೆಲ್ ಒಟ್ಟಾಗಿ ಸ್ಟಾರ್‌ಲಿಂಕ್‌ನ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗಳನ್ನು ವ್ಯವಹಾರಗಳು, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಕೇಂದ್ರಗಳು ಮತ್ತು ದೂರದ ಪ್ರದೇಶಗಳಿಗೆ ಒದಗಿಸಲು ಕೆಲಸ ಮಾಡುತ್ತವೆ ಎಂದು ವರಿಯಾಗಿದೆ.(ಏಜೆನ್ಸೀಸ್​)