ನ್ಯೂಸ್

PHOTOS | ಸ್ಕೇಟಿಂಗ್ ಬೋರ್ಡ್ ಮೇಲೆ ಅಜ್ಜಿಯಂದಿರ ಸಾಹಸ! ಫೋಟೋ ನೋಡಿ ಗೊಂದಲಕ್ಕೊಳಗಾದ ನೆಟ್ಟಿಗರು…

ನವದೆಹಲಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕಲೆಯನ್ನು ಬಳಸಿಕೊಂಡು 'ವಾವ್' ಎಂದೆನಿಸುವಂತಹ ಸೃಜನಶೀಲ ಚಿತ್ರಗಳನ್ನು ಸೃಷ್ಟಿಸಲು ಸಾಧ್ಯವಿದೆ. ಇಂತಹ ಕಲಾಕೃತಿಗಳು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿವೆ. ಇದೀಗ ಕಲಾವಿದರೊಬ್ಬರು ರಚಿಸಿರುವ ವಿಭಿನ್ನ ಕಲಾಕೃತಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಟ್ರೆಂಡಿಂಗ್​ನಲ್ಲಿದೆ.

ಆಶಿಶ್ ಜೋಸ್ ಎಂಬ ಕಲಾವಿದರೊಬ್ಬರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ವಯಸ್ಸಾದ ಮಹಿಳೆಯರು ಸ್ಕೇಟಿಂಗ್ ಮಾಡುತ್ತಿರುವ ಚಿತ್ರಗಳನ್ನು ರಚಿಸಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. AI ಅಪ್ಲಿಕೇಶನ್‌ ಸಹಾಯದಿಂದ ತನ್ನ ಕಲ್ಪನೆಯ ಚಿತ್ರಗಳನ್ನು ರಚಿಸಿದ್ದಾರೆ.

AI ಅಪ್ಲಿಕೇಶನ್‌ ಬಳಿಸಿಕೊಂಡು ಆಶಿಶ್ ಜೋಸ್ ರಚಿಸಿರುವ ವಯಸ್ಸಾದ ಮಹಿಳೆಯರು ಸ್ಕೇಟ್​​ ಬೋರ್ಡ್​ ಮೇಲೆ ಸಾಹಸ ಪ್ರದರ್ಶಿಸುತ್ತಿರುವ ಚಿತ್ರಗಳು ಇದೀಗ ಮೆಚ್ಚುಗೆ ಪಡೆಯುತ್ತಿವೆ. ಈ ಚಿತ್ರಗಳನ್ನು ನೋಡಿದರೆ ಒಂದು ಕ್ಷಣ ಈ ಅಜ್ಜಿಯಂದಿರು ನಿಜವಾಗಿಯೂ ಸ್ಕೇಟಿಂಗ್ ಮಾಡುತ್ತಿದ್ದಾರೆ ಎಂದುಕೊಳ್ಳಬಹದು. ಅಷ್ಟೊಂದು ನಾಜೂಕಾಗಿ ಈ ಚಿತ್ರಗಳು ರಚನೆಯಾಗಿವೆ.