ವಿಜಯಲಕ್ಷ್ಮಿ ಅರಸು 
ನ್ಯೂಸ್

ರಾಜ್ಯದಲ್ಲಿ ಅಹಿಂದ ಇನ್ನಷ್ಟು ಸಂಘಟಿತವಾಗಲಿ : ವಿಜಯಲಕ್ಷ್ಮಿ ಅರಸು ಹೇಳಿಕೆ- 'Ahinda' should become more organized

ಯುವ ಪೀಳಿಗೆಯ ಮೇಲೆ ತಪ್ಪು ಪ್ರಭಾವ ಬೀರಿ ಧರ್ಮ ಮತ್ತು ಜಾತಿಗಳ ನಡುವೆ ಒಡಕು ಉಂಟುಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಡಿ.ದೇವರಾಜ ಅರಸು ಅವರ ಅಣ್ಣನ ಮಗಳು ವಿಜಯಲಕ್ಷ್ಮಿ ಅರಸು ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು: ('Ahinda' should become more organized) ಗಾಂಧಿ ಜಯಂತಿ ಅಂಗವಾಗಿ ಅಹಿಂದ ಚಳುವಳಿ ಸಂಸ್ಥೆ, ಲಿಡ್ಕರ್ ಭವನದಲ್ಲಿ ‘ಅಲ್ಪಸಂಖ್ಯಾತರು, ಅತಿ ಹಿಂದುಳಿದ ವರ್ಗಗಳು ಮತ್ತು ದಲಿತರು ಸಂಘಟಿತರಾಗಬೇಕಿದೆ. ಏಕೆ? ಎಂಬ ವಿಷಯ ಕುರಿತು ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಹಿಂದ ಸಮುದಾಯಗಳ ಒಗ್ಗಟ್ಟು, ಸಾಮಾಜಿಕ ಸಾಮರಸ್ಯ ಮತ್ತು ಪ್ರಸ್ತುತ ರಾಜಕೀಯ-ಸಾಮಾಜಿಕ ಪರಿಸ್ಥಿತಿಗಳ ಕುರಿತು ಚರ್ಚಿಸಲಾಯಿತು.

ಚುನಾವಣೆಯಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಕೋಮುವಾದಿ ಮತ್ತು ಜಾತಿವಾದಿ ರಾಜಕಾರಣಿಗಳು ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಧರ್ಮೀಯರ ನಡುವೆ ದ್ವೇಷ, ಅಪಪ್ರಚಾರ ಸೃಷ್ಟಿಸುತ್ತಿದ್ದಾರೆ. ಯುವ ಪೀಳಿಗೆಯ ಮೇಲೆ ತಪ್ಪು ಪ್ರಭಾವ ಬೀರಿ ಧರ್ಮ ಮತ್ತು ಜಾತಿಗಳ ನಡುವೆ ಒಡಕು ಉಂಟುಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಡಿ.ದೇವರಾಜ ಅರಸು ಅವರ ಅಣ್ಣನ ಮಗಳು ವಿಜಯಲಕ್ಷ್ಮಿ ಅರಸು ಕಳವಳ ವ್ಯಕ್ತಪಡಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 78 ವರ್ಷ ಕಳೆದರೂ ಅಲ್ಪಸಂಖ್ಯಾತರು, ಅತಿ ಹಿಂದುಳಿದ ವರ್ಗಗಳು, ದಲಿತ ಸಮುದಾಯಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಸ್ಥಿತಿಗತಿಗಳು ನಿರೀಕ್ಷಿತ ಮಟ್ಟದಲ್ಲಿ ಸುಧಾರಿಸಿಲ್ಲ. ವೈವಿಧ್ಯತೆಯಲ್ಲಿ ಏಕತೆ, ಜಾತ್ಯತೀತ ತತ್ವ ಎತ್ತಿಹಿಡಿಯಲು ಹಾಗೂ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮೂಡಿಸಲು ಅಹಿಂದ ಸಂಘಟಿತರಾಗಬೇಕಿದೆ ಎಂದು ಅಹಿಂದ ಚಳವಳಿಯ ಸಂಚಾಲಕ ಗೋವಿಂದರಾಜು ಎಂ.ಸಾರಕ್ಕಿ ಹೇಳಿದರು.

ಮಾಜಿ ಎಂಎಲ್ಸಿ ಪ್ರಪುಲ್ಲಾ ಮಧುಕರ್, ಅಹಿಂದ ಸಂಘಟನೆಯ ರಾಜ್ಯ ಮುಖ್ಯ ಸಂಚಾಲಕ ಎಸ್.ಮೂರ್ತಿ, ತಿ.ನ.ಶ್ರೀನಿವಾಸ್ ಮತ್ತು ತಿಗಳ ಸಮುದಾಯದ ಎಂ.ವೆಂಕಟೇಶ್ ಸೇರಿ ಹಿಂದುಳಿದ ವರ್ಗಗಳ ಅನೇಕ ಮುಖಂಡರು ಉಪಸ್ಥಿತರಿದ್ದರು.