ಆಗ್ರಾ: ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಮಹಿಳೆಯೊಬ್ಬರು ಕೈಯಲ್ಲಿ ರಿವಾಲ್ವರ್ ಹಿಡಿದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, ವಿಡಿಯೋ ಬ್ಯಾಕ್ಗ್ರೌಂಡ್ನಲ್ಲಿ ಹಾಡು ಕೂಡ ಕೇಳಿಬರುತ್ತಿದೆ. ಈ ವಿಚಾರವನ್ನು ಸದ್ಯ ಪೊಲೀಸರ ಗಮನಕ್ಕೆ ತರಲಾಗಿದೆ.
ಕೈಯಲ್ಲಿ ರಿವಾಲ್ವರ್ ಇರುವ ವಿಡಿಯೋ ವೈರಲ್ ಮಹಿಳೆ ರಿವಾಲ್ವರ್‌ನೊಂದಿಗಿರುವ ಎರಡು ವಿಡಿಯೋಗಳು ಮಂಗಳವಾರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಒಂದು ವಿಡಿಯೋ 10 ಸೆಕೆಂಡುಗಳು. ಇದರಲ್ಲಿ ಬ್ಯಾಕ್ಗ್ರೌಂಡ್ನಲ್ಲಿ ಹಾಡೊಂದು ಕೇಳಿಬರುತ್ತಿದೆ. "ಹಮ್ ಪಿಸ್ತೂಲ್ ಹಾತ್ ಮೆ ರಕ್ತೇ ಹೈ, ನಾ ಕಿಸಿ ಕೆ ಬಾಪ್ ಸೆ ಡರ್ತೆ ಹೈ......'' ಇಲ್ಲಿ ಮಹಿಳೆ ಕೈಯಲ್ಲಿ ರಿವಾಲ್ವರ್ ಹಿಡಿದು ಮನೆಯ ಛಾವಣಿಯ ಮೇಲೆ ನಿಂತಿದ್ದಾಳೆ.
ಎರಡನೇ ವಿಡಿಯೋ 12 ಸೆಕೆಂಡುಗಳು. ಇದರಲ್ಲಿಯೂ ಮಹಿಳೆ ರಿವಾಲ್ವರ್ ಹಿಡಿದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಬ್ಯಾಕ್ಗ್ರೌಂಡ್ನಲ್ಲಿ ಡೈಲಾಗ್ ಹೀಗಿದೆ "ಆ ಗನ್ ಕೂಡ ನಮ್ಮದೇ ಆಗಿರುತ್ತದೆ, ಬುಲೆಟ್ ಕೂಡ ನಮ್ಮದೇ ಆಗಿರುತ್ತದೆ, ಸಮಯವೂ ನಮ್ಮದೇ ಆಗಿರುತ್ತದೆ''. ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್‌ಗಾಗಿ ವೀಡಿಯೊ ಮಾಡಿದ್ದಾಳೆ ಎಂದು ಹೇಳಲಾಗುತ್ತಿದೆ. ಆದರೂ ವಿಡಿಯೋ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ಸೂರಜ್ ಕುಮಾರ್ ರೈ ತಿಳಿಸಿದ್ದಾರೆ.