ಬ್ಲೂಮ್ಬರ್ಗ್ನ ಏಷ್ಯಾದ ಅತಿಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಮತ್ತೆ ನಂಬರ್ 1 ಪಟ್ಟಕ್ಕೇರಿದ್ದಾರೆ. ನಂಬರ್ 1 ಸ್ಥಾನದಲ್ಲಿದ್ದ ಗೌತಮ್ ಅದಾನಿ 9ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅದಾನಿ ಅವರ ಸಂಪತ್ತಿನ ಮೌಲ್ಯ 98.7 ಶತಕೋಟಿ ಡಾಲರ್ಗೆ ಇಳಿಕೆಯಾಗಿದೆ.
- ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಸಂಪತ್ತಿನ ಒಟ್ಟು ಮೌಲ್ಯ 99.7 ಶತಕೋಟಿ ಡಾಲರ್ ಇದ್ದು, ಏಷ್ಯಾದ ಅತಿಶ್ರೀಮಂತರ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಿದ್ದಾರೆ.
- ಅದಾನಿ ಗ್ರೂಪ್ ಚೇರ್ಮನ್ ಅವರ ಸಂಪತ್ತು ಕಳೆದ ಕೆಲವು ವಾರಗಳಲ್ಲಿ 98.7 ಶತಕೋಟಿ ಡಾಲರ್ಗೆ ಇಳಿಕೆಯಾಗಿದೆ. ಕಂಪನಿಯ ಷೇರು ಮೌಲ್ಯ ಕುಸಿದುದೇ ಇದಕ್ಕೆ ಕಾರಣ.
- ಜಗತ್ತಿನ ಅತಿಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಎಂಟನೇ ಸ್ಥಾನದಲ್ಲಿದ್ದಾರೆ. ಅದಾನಿ ಕಳೆದ ಕೆಲವು ವಾರಗಳ ಹಿಂದೆಯೇ 4ನೇ ಸ್ಥಾನದಿಂದ ಒಂಬತ್ತನೇ ಸ್ಥಾನಕ್ಕೆ ಕುಸಿದಿದ್ದಾರೆ.
- ಈ ವರ್ಷ ಏಪ್ರಿಲ್ನಲ್ಲಿ ಅತಿಶ್ರೀಮಂತರ ಪಟ್ಟಿಯಲ್ಲಿ ಅದಾನಿ ನಾಲ್ಕನೇ ಸ್ಥಾನಕ್ಕೇರಿದ್ದರು. ಬಿಲ್ ಗೇಟ್ಸ್ ಸಂಪತ್ತಿಗೆ ಸರಿಸಮವಾದ ಸಂಪತ್ತು ಹೊಂದಿದ್ದರು.
- ಜಾಗತಿಕ ಪಟ್ಟಿಯಲ್ಲಿ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ನಂಬರ್ 1 ಸ್ಥಾನದಲ್ಲಿದ್ದಾರೆ. ಇವರ ಸಂಪತ್ತಿನ ಮೌಲ್ಯ 227 ಶತಕೋಟಿ ಡಾಲರ್. ಎರಡನೇ ಸ್ಥಾನದಲ್ಲಿ ಅಮೆಜಾನ್ನ ಜೆಫ್ ಬೆಜೋಸ್ ಇದ್ದು, 149 ಶತಕೋಟಿ ಡಾಲರ್ ಸಂಪತ್ತು ಹೊಂದಿದ್ದಾರೆ.
- ಜಗತ್ಪ್ರಸಿದ್ಧ ಹೂಡಿಕೆದಾರ ವಾರೆನ್ ಬಫೆಟ್ ಐದನೇ ಸ್ಥಾನದಲ್ಲಿದ್ದು 114 ಶತಕೋಟಿ ಡಾಲರ್ ಸಂಪತ್ತು ಹೊಂದಿದ್ದಾರೆ.