ನವದೆಹಲಿ: ಜೈಸಲ್ಮೇರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅರ್ಜುನ್ ಟ್ಯಾಂಕ್ನಲ್ಲಿ ಸವಾರಿ ಮಾಡಿದ್ದು, ಸೇನೆಯಿಂದ ಸುಧಾರಿತ ಸ್ವದೇಶಿ ಟ್ಯಾಂಕ್ನ ಆರ್ಡರ್ ಪಡೆದುಕೊಳ್ಳುವ ಡಿಆರ್ಡಿಒ (ಡಿಫೆನ್ಸ್ ರಿಸರ್ಚ್ ಡೆವಲಪ್ಮೆಂಟ್ ಆರ್ಗನೈಸೇಷನ್) ನಿರೀಕ್ಷೆ ಹೆಚ್ಚಾಗಿದೆ. ಅಲ್ಲದೆ, ಈಗ ಬಳಕೆಯಲ್ಲಿರುವ ಅರ್ಜುನ್ ಟ್ಯಾಂಕ್ಗಿಂತ ಹೆಚ್ಚು ಸುಧಾರಿತ ಅರ್ಜುನ್ ಮಾರ್ಕ್ 1ಎ ಟ್ಯಾಂಕ್ಗಳನ್ನು ಪೂರೈಸುವುದಕ್ಕೆ ಡಿಆರ್ಡಿಎ ಸಜ್ಜಾಗಿದೆ.
ಡಿಆರ್ಡಿಒ ಸೈಂಟಿಸ್ಟ್ ವಿ ಬಾಲಗುರು ಎಎನ್ಐ ಜತೆಗೆ ಮಾತನಾಡಿದ್ದು, ಜೈಸಲ್ಮೇರ್ನ ಮರಳುಗಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅರ್ಜುನ್ ಟ್ಯಾಂಕ್ ಸವಾರಿ ದೃಶ್ಯ ನಮಗೆ ಹೆಮ್ಮೆ ತರುವಂಥದ್ದು. ಇನ್ನೆರಡು ರೆಜಿಮೆಂಟ್ಗೆ ಬೇಕಾದಷ್ಟು ಅರ್ಜುನ್ ಮಾರ್ಕ್ 1ಎ ಟ್ಯಾಂಕ್ಗಳನ್ನು ಖರೀದಿಸುವುದಕ್ಕೆ ಸೇನೆಯಿಂದ ಆರ್ಡರ್ ಲಭಿಸುವ ನಿರೀಕ್ಷೆಯಲ್ಲಿದ್ದೇವೆ ನಾವು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಓದುವ ಬೆಳಕು ಅಭಿಯಾನಕ್ಕೆ ಚಾಲನೆ ಸಿಇಒ ಚಾಲನೆ
ಅರ್ಜುನ್ ಮಾರ್ಕ್ 1ಎ ಟ್ಯಾಂಕ್ನಲ್ಲಿ 72 ಹೊಸ ಫೀಚರ್ಗಳನ್ನು ಸೇರಿಸಲಾಗಿದೆ. ಹಳೆಯದರಲ್ಲಿ ಇಲ್ಲದೇ ಇರುವ ಆ್ಯಂಟಿ ಟ್ಯಾಂಕ್ ಮೈನ್ಸ್ ಕೂಡ ಅಳವಡಿಸಲಾಗಿದೆ. ಇದು ಸ್ವತಃ ಮೈನ್ಸ್ ಅನ್ನು ಪತ್ತೆ ಹಚ್ಚಿ ಹೊರತೆಗೆಯಬಲ್ಲದು. 12.7 ಇಂಚು ಏರ್ ಡಿಫೆನ್ಸ್ ಗನ್ ಅನ್ನು ಯೋಧರು ಟ್ಯಾಂಕ್ ಒಳಗಿದ್ದುಕೊಂಡೇ ರಿಮೋಟ್ ಕಂಟ್ರೋಲ್ ಮೂಲಕ ಬಳಸಬಹುದಾಗಿದೆ. ಇಂತಹ ಇನ್ನಷ್ಟು ವಿಶೇಷಗಳು ಈ ಟ್ಯಾಂಕ್ನಲ್ಲಿವೆ ಎಂದು ಬಾಲಗುರು ತಿಳಿಸಿದ್ದಾರೆ.
ಇದನ್ನೂ ಓದಿ: ಟಿಫನ್ ಬಾಕ್ಸ್ನಲ್ಲೇನಿರಬಹುದು ಗೆಸ್ ಮಾಡಿ!
ಸೇನೆ ಈಗಾಗಲೇ ಜೈಸಲ್ಮೇರ್ನ ಮರುಭೂಮಿ ವ್ಯಾಪ್ತಿಯಲ್ಲಿ ಪಾಕಿಸ್ತಾನದ ಗಡಿಯುದ್ದಕ್ಕೂ 124 ಅರ್ಜುನ್ ಟ್ಯಾಂಕ್ಗಳನ್ನು ನಿಯೋಜಿಸಿದೆ. ಇನ್ನೂ 118 ಅರ್ಜುನ್ ಮಾರ್ಕ್ 1 ಎ ಟ್ಯಾಂಕ್ಗಳಿಗೆ ಆದೇಶ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)