ನ್ಯೂಸ್

Chai-Sam Divorce ಬಳಿಕ KTR ವಿರುದ್ಧ ಹೊಸ ಆರೋಪ ಮಾಡಿದ ಸಚಿವೆ ಕೊಂಡಾ ಸುರೇಖಾ

ಹೈದರಾಬಾದ್​: ನಾಗಚೈತನ್ಯ-ಸಮಂತಾ ವಿಚ್ಛೇದನದ (Chai-Sam Divorce ) ಕುರಿತು ಮಾತನಾಡುವ ಮೂಲಕ ವ್ಯಾಪಕ ಖಂಡನೆಗೆ ಗುರಿಯಾಗಿದ್ದ ತೆಲಂಗಾಣ ಕಾಂಗ್ರೆಸ್​ ಸರ್ಕಾರದ ಸಚಿವೆ ಕೊಂಡಾ ಸುರೇಖಾ ಅವರು ಇದೀಗ ಮಾಜಿ ಸಿಎಂ ಕೆಸಿಆರ್​ ಕಾಣಿಸಿಕೊಳ್ಳದಿರುವುದಕ್ಕೆ ಅವರ ಪುತ್ರ, ಭಾರತ ರಾಷ್ಟ್ರ ಸಮಿತಿ ಪಕ್ಷದ ನಾಯಕ ಕೆಟಿಆರ್​ ಕಾರಣ ಎಂದು ಆರೋಪಿಸುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಗಜ್ವೇಲ್​ನಲ್ಲಿ ಈ ಬಗ್ಗೆ ಮಾತನಾಡಿದ ಸುರೇಖಾ, ಕಳೆದ ಕೆಲ ದಿನಗಳಿಂದ ಕೆಸಿಆರ್​ ನಾಪತ್ತೆಯಾಗಿದ್ದು, ಅವರನ್ನು ಹುಡುಕಲು ಕೂಡಲೇ ಪ್ರಕರಣವನ್ನು ದಾಖಲಿಸಬೇಕು. ಕೆಸಿಆರ್ ಅವರ ಪತ್ನಿ ಶೋಭಾ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಭಾಗವಹಿಸುತ್ತಿರುವ ಫೋಟೋಗಳನ್ನು ರಾವ್ ಕುಟುಂಬ ಬಿಡುಗಡೆ ಮಾಡಿದ ಒಂದು ದಿನದ ನಂತರ ಸಚಿವೆ ಸುರೇಖಾ ಹೇಳಿಕೆ ನೀಡಿದ್ದು, ಮತ್ತೊಂದು ಸುತ್ತಿನ ವಿವಾದವನ್ನು ಹುಟ್ಟು ಹಾಕಿದೆ.

ನಾಗ ಚೈತನ್ಯ- ಸಮಂತಾ ಬೇರೆಯಾಗಲು Ktr ಕಾರಣ

ಬಾಪುಘಾಟ್‌ನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಟಾಲಿವುಡ್ ರಿಯಲ್ ಲೈಫ್ ಜೋಡಿ ನಾಗ ಚೈತನ್ಯ ಮತ್ತು ಸಮಂತಾ ತಮ್ಮ ವಿಚ್ಛೇದನಕ್ಕೆ ಕೆಟಿಆರ್ ಕಾರಣ ಎನ್ನಲಾಗುತ್ತಿದೆ ನಾನು ಇದನ್ನು ಬಹಿರಂಗವಾಗಿ ಹೇಳುತ್ತಿದ್ದೇನೆ. ಕೆಟಿಆರ್ ಅವರು ಸಚಿವರಾಗಿದ್ದ ಅವಧಿಯಲ್ಲಿ ಹಲವು ಸಿನಿಮಾ ನಾಯಕಿಯರ ಜೀವನದೊಂದಿಗೆ ಆಟವಾಡಿದ್ದಾರೆ, ನಾಯಕಿಯರ ಫೋನ್ ಕದ್ದಾಲಿಕೆ ಮಾಡಿ ನಾಯಕಿಯರನ್ನು ಡ್ರಗ್ಸ್ ಚಟಕ್ಕೆ ಸಿಲುಕಿಸಿ ಅವರ ಜೀವನವನ್ನೇ ನಾಶ ಮಾಡಿದ್ದಾರೆ. ನಾಯಕಿಯರು ಬೇಗ ಮದುವೆಯಾಗದೇ ಇರಲು ಕಾರಣ ಕೆಟಿಆರ್. ಕೆಟಿಆರ್ ನಾಯಕಿಯರ ಜೀವನ ಹಾಳು ಮಾಡಿದ್ದು ಟಾಲಿವುಡ್ ನ ಹಿರಿಯರೆಲ್ಲರಿಗೂ ಗೊತ್ತು ಎಂದು ಸಾಲುಸಾಲು ಆರೋಪ ಮಾಡಿ ಆಕ್ರೋಶ ಹೊರ ಹಾಕಿದ್ದರು.

ಎನ್ ಕನ್ವೆನ್ಷನ್​ ಕಟ್ಟಡ ಒಡೆಯಬಾರದು ಎಂದರೆ ಸಮಂತಾಳನ್ನು ನನ್ನ ಬಳಿ ಕಳಿಸಿ ಎಂದು ನಾಗಾರ್ಜುನಗೆ ಕೆ.ಟಿ. ರಾಮ ರಾವ್ ಹೇಳಿದ್ದರು. ಕೆ.ಟಿ. ರಾಮ ರಾವ್ ಬಳಿ ಹೋಗು ಎಂದು ಸಮಂತಾಗೆ ನಾಗಾರ್ಜನ ಒತ್ತಾಯ ಮಾಡಿದರು. ಆದರೆ ಸಮಂತಾ ಒಪ್ಪಿಕೊಳ್ಳಲಿಲ್ಲ. ಒಪ್ಪದಿದ್ದರೆ ಮನೆ ಬಿಟ್ಟುಹೋಗು ಎಂದು ನಾಗಾರ್ಜುನ ಹೇಳಿದರು. ಅದಕ್ಕಾಗಿ ನಾಗ ಚೈತನ್ಯಗೆ ಸಮಂತಾ ಡಿವೋರ್ಸ್​ ನೀಡಿದರು ಎಂದು ಸಚಿವೆ ಸುರೇಖಾ ಸಾಲು ಸಾಲು ಆರೋಪಗಳನ್ನು ಮಾಡುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದರು.