ನ್ಯೂಸ್

ಮಲಮಗನ ಜತೆ ಮದ್ವೆ, 2ನೇ ಮಗುವಿಗೆ ಜನ್ಮ! ಸಾಕಿದ ಪುತ್ರನನ್ನೇ ಮೋಹಿಸಿದ ಬ್ಲಾಗರ್ ಕರಾಳ ಕತೆಯಿದು…​

ಮಾಸ್ಕೋ: ವಿದೇಶಿ ಸಂಸ್ಕೃತಿ ನಿಜಕ್ಕೂ ವಿಚಿತ್ರಗಳ ಆಗರವಾಗಿದೆ. ಅಲ್ಲಿ, ಕೌಟುಂಬಿಕ ಸಂಬಂಧಗಳಿಗೆ ಅರ್ಥವೇ ಇರುವುದಿಲ್ಲ ಎನ್ನುವುದಕ್ಕೆ ಮತ್ತೊಂದು ತಾಜಾ ಉದಾಹರಣೆ ಇಲ್ಲಿದೆ. 7 ವರ್ಷದ ಮಗುವನ್ನು ದತ್ತು ಪಡೆದಿದ್ದ ಮಹಿಳೆ, ಅದೇ ಮಗು ಬೆಳೆದು ದೊಡ್ಡವನಾದ ಬಳಿಕ ಮದುವೆ ಆಗಿ ಎಲ್ಲರ ಹುಬ್ಬೇರಿಸಿದ್ದಳು. ಇದೀಗ ಆತನ ಎರಡನೇ ಮಗುವಿಗೆ ತಾಯಿಯಾಗಿದ್ದಾಳೆ.

ರಷ್ಯಾದ ಬ್ಲಾಗರ್ 37 ವರ್ಷದ​ ಮರಿನಾ ಬಲ್ಮಶೇವಾ ಎಂಬಾಕೆ ತನ್ನ ಮಲಮಗ 23 ವರ್ಷದ ವ್ಲಾಡಿಮಿರ್​ ವೋವಾ ಶ್ಯಾವರಿನ್​ ಎಂಬಾತನನ್ನೇ ಮದುವೆಯಾಗಿ ಸುದ್ದಿಯಾಗಿದ್ದಳು. ಈಗಾಗಲೇ ಇಬ್ಬರಿಗೂ ಒಲ್ಗಾ ಹೆಸರಿನ ಹೆಣ್ಣು ಮಗಳಿದ್ದಾಳೆ. 2021ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದರು. ಇದೀಗ ಎರಡನೇ ಮಗುವಿಗೆ ಬಲ್ಮಶೇವಾ ಜನ್ಮ ನೀಡಿದ್ದಾಳೆ.

ಬಲ್ಮಶೇವಾ, ಅಲ್ಯಾಕ್ಸೆ ಶ್ಯಾವರಿನ್​ ಎಂಬುವವರ ಜತೆ ಮದುವೆಯಾಗಿದ್ದಳು. ಅಲ್ಯಾಕ್ಸೆ ಅವರಿಗೆ ಮೊದಲ ಪತ್ನಿಯಿಂದ ವ್ಲಾಡಿಮಿರ್​ ವೋವಾ ಶ್ಯಾವರಿನ್​ ಎಂಬ ಮಗ ಇದ್ದ. ಸಂಬಂಧದಲ್ಲಿ ವ್ಲಾಡಿಮಿರ್​ಗೆ ಬಲ್ಮಶೇವಾ ತಾಯಿಯಾಗಬೇಕು. ಮೊದಲ ಬಾರಿಗೆ ಗರ್ಭಿಣಿಯಾದಾಗ ಅಲ್ಯಾಕ್ಸೆ ಶ್ಯಾವರಿನ್​ನನ್ನು ತೊರೆದಿದ್ದಳು. ಆದರೆ, ಆತನ ಮಗ ವ್ಲಾಡಿಮಿರ್ 7ನೇ ವಯಸ್ಸಿನಲ್ಲಿದ್ದಾಗ ಬಲ್ಮಶೇವಾ ದತ್ತು ಪಡೆದು ತಾನೇ ಸಾಕಿದ್ದಳು.

ನನ್ನ ಪ್ಲಾಸ್ಟಿಕ್ ಸರ್ಜರಿಯಿಂದಾಗುವ ಸಮಸ್ಯೆಗಳು, ವಯಸ್ಸಿಗೆ ಸಂಬಂಧಿಸಿದ ಸೌಂದರ್ಯ ಸಮಸ್ಯೆಗಳು ಮತ್ತು ವ್ಯಕ್ತಿತ್ವ ಬದಲಾವಣೆಗಳಂತಹ ನನ್ನ ಎಲ್ಲಾ ಸಮಸ್ಯೆಗಳನ್ನು ತಿಳಿದುಕೊಂಡು ಆತ (ವ್ಲಾಡಿಮಿರ್​ ವೋವಾ) ನನ್ನನ್ನು ಪ್ರೀತಿಸುತ್ತಿದ್ದನು. ನಾನು ನನ್ನಂತೆಯೇ ಬದುಕಬೇಕು ಎಂದು ಆತನ ಬಯಸಿದ್ದನು ಎಂದು ಬಲ್ಮಶೇವಾ ಹೇಳಿದ್ದಾರೆ.

ಬಲ್ಮಾಶೇವಾ ತನ್ನ ದತ್ತುಪುತ್ರನಿಗಾಗಿ ತನ್ನ ದೇಹಕ್ಕೆ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿದ್ದಾಳೆ ಮತ್ತು ಅವನನ್ನು ಮೆಚ್ಚಿಸಲು ಪ್ಲಾಸ್ಟಿಕ್ ಸರ್ಜರಿ ಸಹ ಮಾಡಿಸಿಕೊಂಡಿದ್ದಾಳೆ ಎಂದು ಮಾಜಿ ಪತಿ ಅಲೆಕ್ಸಿ ಶ್ಯಾವರಿನ್ ಆರೋಪ ಮಾಡಿದ್ದಾರೆ.

ನಾನು ಮನೆಯಲ್ಲಿದ್ದಾಗಲೂ ಇಬ್ಬರು ಸೆಕ್ಸ್ ಮಾಡುತ್ತಿದ್ದರು. ಅವಳು ನನ್ನ ಮಗನನ್ನು ಮೋಹಿಸಿದಳು. ನಾನು ಮಲಗಿರುವಾಗ ನನ್ನ ಮಗನ ಕೋಣೆಗೆ ಹೋಗುತ್ತಿದ್ದಳು ಮತ್ತು ಏನೂ ಆಗಿಲ್ಲವೆಂಬಂತೆ ಬಂದು ನನ್ನ ಪಕ್ಕದಲ್ಲಿ ಮಲಗುತ್ತಿದ್ದಳು. ನನ್ನ ಮಗನ ಬದಲು ಬೇರೆಯವರೊಂದಿಗೆ ಸಂಬಂಧ ಹೊಂದಿದ್ದರೂ ನಾನು ಅವಳನ್ನು ಕ್ಷಮಿಸುತ್ತಿದ್ದೆ ಎಂದು ಅಲೆಕ್ಸಿ ಶ್ಯಾವರಿನ್​ ಆಕ್ರೋಶ ಹೊರಹಾಕಿದ್ದಾರೆ. (ಏಜೆನ್ಸೀಸ್​)