ರಾಯಚೂರಿನ ಜಿಲ್ಲಾಡಳಿತ ವತಿಯಿಂದ ಕನ್ನಡ ಭವನದಲ್ಲಿ ಮಂಗಳವಾರ ಶ್ರೀ ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು. 
ನ್ಯೂಸ್

ಶ್ರೀ ಶಂಕರಾಚಾರ್ಯರ ಆದರ್ಶ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಿ

Gangavati - Desk - Veeresh S Ullagaddi

ರಾಯಚೂರು: ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಮಂಗಳವಾರ ಕನ್ನಡ ಭವನದಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ ಶಂಕರಾಚಾರ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಆಚಾರ್ಯರಲ್ಲಿ ಶಂಕರಾಚಾರ್ಯರು ಮೊದಲಿಗರಾಗಿದ್ದಾರೆ. ಅವರ ಆದರ್ಶಗಳನ್ನು ಅಳವಡಿಸಿಕೊಂಡು ಸಮಾಜ ಅಭಿವೃದ್ಧಿಗೆ ಕಾರ್ಯದಲ್ಲಿ ಮುಂದಾಗಬೇಕು ಎಂದರು.

ಜಿಲ್ಲಾಡಳಿತ ಇಲಾಖೆ ಸಿಬ್ಬಂದಿ ರಮೇಶ, ಇಸ್ಮಾಯಿಲ್, ಶ್ರೀದೇವಿ, ವಿನೋದಕುಮಾರ, ಶಿಕ್ಷಕ ದಂಡಪ್ಪ ಬಿರಾದರ, ಪ್ರಮುಖರಾದ ಕೃಷ್ಣಮೂರ್ತಿ ಹೆಗನೂರು, ಹನುಮಂತರಾವ್, ಸಿ.ವಸಂತರಾವ್, ಉದಯಶಂಕರ ದೇಸಾಯಿ, ಸದಾನಂದ ಹಿಮಗಿರಿ, ಈಶ್ವರ ಹೆಗಡೆ, ಶ್ರೀಪಾದ ದೇಸಾಯಿ ಇತರರಿದ್ದರು.