ನ್ಯೂಸ್

ಸೂಪರ್ ಟರ್ಮ್ ಪ್ಲಾನ್ ಪರಿಚಯಿಸಿದ ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಶೂರೆನ್ಸ್ | Aditya Birla Capital

Aditya Birla Capital: ಆದಿತ್ಯ ಬಿರ್ಲಾ ಕ್ಯಾಪಿಟಲ್​ನ ಜೀವನ ವಿಮಾ ಅಂಗಸಂಸ್ಥೆಯಾಗಿರುವ ಮತ್ತು ಭಾರತದ ಪ್ರಮುಖ ಆರ್ಥಿಕ ಸೇವೆಗಳ ಕಂಪನಿ ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (“ಎಬಿಎಸ್ಎಲ್ಐ”) ಇದೀಗ ಎಬಿಎಸ್ಎಲ್ಐ ಸೂಪರ್ ಟರ್ಮ್ ಪ್ಲಾನ್‌ ಅನ್ನು ಬಿಡುಗಡೆಗೊಳಿಸಿದೆ.

ಈ ಆಲ್-ಇನ್-ಒನ್ ಟರ್ಮ್ ಇನ್ಶೂರೆನ್ಸ್ ಗುರಿ ಆಧರಿತ ಸೂಕ್ತ ಆರ್ಥಿಕ ಭದ್ರತೆ ಒದಗಿಸಲು ಮತ್ತು ಆರೋಗ್ಯ ನಿರ್ವಹಣಾ ಸೇವೆಗಳನ್ನು ನೀಡಲೆಂದೇ ಡಿಸೈನ್ ಮಾಡಲಾಗಿದೆ. ಈ ಹೊಸ ಉತ್ಪನ್ನವು ಕಂಪನಿಯ ಗ್ರಾಹಕರೇ ಮೊದಲು ಎಂಬ ವಿಧಾನ ಮತ್ತು ಪಾಲಿಸಿದಾರರ ಒಟ್ಟಾರೆ ಯೋಗಕ್ಷೇಮವನ್ನು ಬೆಂಬಲಿಸುವ ಬದ್ಧತೆಗೆ ಪೂರಕವಾಗಿ ಪರಿಚಯಿಸಲಾಗಿದೆ.

ಎಬಿಎಸ್ಎಲ್ಐ ಸೂಪರ್ ಟರ್ಮ್ ಪ್ಲಾನ್ ಕಸ್ಟಮೈಸ್ ಮಾಡಲಾದ ಮೂರು ಕವರೇಜ್ ಆಯ್ಕೆಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ, ಆ ಆಯ್ಕೆಗಳು ಈ ಕೆಳಗಿನಂತಿವೆ:

1. ಲೆವೆಲ್ ಕವರ್

2. ಇನ್‌ಕ್ರೀಸಿಂಗ್ ಕವರ್

3. ಲೆವೆಲ್ ಕವರ್ ವಿತ್ ರಿಟರ್ನ್ ಆಫ್ ಪ್ರೀಮಿಯಂ

ಈ ಕುರಿತು ಮಾತನಾಡಿರುವ ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್​ನ ಎಂಡಿ ಮತ್ತು ಸಿಇಓ ಕಮಲೇಶ್ ರಾವ್, “ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ದೀರ್ಘಕಾಲದವರೆಗೆ ರಕ್ಷಣೆ ಮತ್ತು ಮಾನಸಿಕ ಶಾಂತಿಯನ್ನು ಒದಗಿಸುವ ವಿಮಾ ಉತ್ಪನ್ನಗಳನ್ನು ನೀಡಲು ಎಬಿಎಸ್ಎಲ್ಐ ಸಂಸ್ಥೆ ಬದ್ಧವಾಗಿದೆ. ಎಬಿಎಸ್ಎಲ್ಐ ಸೂಪರ್ ಟರ್ಮ್ ಪ್ಲಾನ್ ಅನ್ನು ಸೂಕ್ತ ಸೌಲಭ್ಯ, ಅಂತರ್ನಿರ್ಮಿತ ಆರೋಗ್ಯ ನಿರ್ವಹಣಾ ಸೇವೆಗಳ ಒದಗಿಸುವುದರ ಜೊತೆಗೆ, ಕ್ರಿಟಿಕಲ್ ಇಲ್ ನೆಸ್ (ಗಂಭೀರ ಕಾಯಿಲೆ) ಹಾಗೂ ಅಂಗವೈಕಲ್ಯ ಸೇರಿದಂತೆ ಜೀವನದ ಅನಿಶ್ಚಿತ ಸಂದರ್ಭಗಳಲ್ಲಿ ರಕ್ಷಣೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ” ಎಂದು ಹೇಳಿದ್ದಾರೆ.