ನ್ಯೂಸ್

ಆದಿಪುರುಷ್​ ಸಿನಿಮಾಗೆ ಮತ್ತೊಂದು ಸಂಕಷ್ಟ: ಚಿತ್ರ ಪ್ರದರ್ಶನಕ್ಕೆ ತಡೆ

ನೇಪಾಳ: ಈ ವರ್ಷದ ಬಹುನಿರೀಕ್ಷಿತ ಚಿತ್ರ ಆದಿಪುರುಷ್​ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಆದರೆ ಚಿತ್ರದ ಸಂಭಾಷಣೆಗೆ ಸಂಬಂಧಿಸಿದಂತೆ ನೇಪಾಳದಲ್ಲಿ ಕಠ್ಮಂಡುವಿನಲ್ಲಿ ಚಿತ್ರ ಪ್ರದರ್ಶನಕ್ಕೆ ತಡೆ ಒಡ್ಡಲಾಗಿದೆ.

ಇದನ್ನೂ ಓದಿ: ದ.ಕ ನೂತನ ಜಿಲ್ಲಾಧಿಕಾರಿಯಾಗಿ ಮುಲ್ಲೈ ಮುಹಿಲನ್ ನೇಮಕ

ಪ್ರಭಾಸ್ ರಾಮನಾಗಿ ನಟಿಸಿರುವ ರಾಮಾಯಣದ ಕುರಿತಾದ ಆದಿಪುರುಷ್​ ಚಿತ್ರದ ನಿರ್ಮಾಪಕರು ಸೀತೆಯನ್ನು ಭಾರತದ ಮಗಳು ಎಂದು ವಿವರಿಸುವ ಸಂಭಾಷಣೆಯ ಸಾಲನ್ನು ಒಳಗೊಂಡಿದೆ. ಸೀತಾಳನ್ನು ನೇಪಾಳದ ಮಗಳು ಎಂದು ಪರಿಗಣಿಸಲಾಗಿದೆ. ವೇಳಾಪಟ್ಟಿಯ ಪ್ರಕಾರ ಚಿತ್ರ ಬಿಡುಗಡೆಯಾಗಬೇಕೆಂದು ನಿರ್ಮಾಪಕರು ಬಯಸಿದರೆ ಈ ಸಾಲನ್ನು ಬದಲಾಯಿಸಲು ಮೂರು ದಿನಗಳ ಕಾಲಾವಕಾಶವಿದೆ. ಇಲ್ಲದಿದ್ದರೆ ಕಠ್ಮಂಡು ನಗರದಲ್ಲಿ ಯಾವುದೇ ಹಿಂದಿ ಚಲನಚಿತ್ರವನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಟ್ವೀಟ್​​ ಮಾಡಿದ್ದಾರೆ.

ಇದನ್ನೂ ಓದಿ: ನಿಮಗೆ ತಾಕತ್ತಿದ್ದರೆ ನಮ್ಮನ್ನು ಮುಟ್ಟಿ ನೋಡಿ: ಸಿಎಂ ಸ್ಟಾಲಿನ್​ಗೆ ಅಣ್ಣಾಮಲೈ ಸವಾಲು

ಸೀತೆ ಭಾರತದ ಮಗಳು ಎಂಬ ವಿವಾದಾತ್ಮಕ ಸಂಭಾಷಣೆಯನ್ನು ಚಲನಚಿತ್ರದಿಂದ ತೆಗೆದುಹಾಕಿದ ನಂತರ ನೇಪಾಳ ಸೆನ್ಸಾರ್ ಮಂಡಳಿಯು ಚಲನಚಿತ್ರವನ್ನು ಅಂಗೀಕರಿಸಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಅಪಾಯವನ್ನುಂಟು ಮಾಡುವ ಕಾರಣದಿಂದ ನೇಪಾಳದಲ್ಲಿ, ಶುಕ್ರವಾರ ಬೆಳಿಗ್ಗೆ ಆದಿಪುರುಷ್​ ಚಿತ್ರದ ಬೆಳಗಿನ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ.(ಏಜೆನ್ಸೀಸ್​)