ನ್ಯೂಸ್

ಮಂಗಳೂರಲ್ಲಿ ಕುಕ್ಕರ್ ಬಾಂಬ್ ಸ್ಫೋಟ: ರಾಜ್ಯದ ಜನರಿಗೆ ಮಹತ್ವದ ಸಲಹೆ ಕೊಟ್ಟು ಎಚ್ಚರಿಸಿದ ಅಲೋಕ್​ ಕುಮಾರ್​

ಬೆಂಗಳೂರು: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. ಶಂಕಿತ ಉಗ್ರ ಶಾರೀಕ್​, ಮೈಸೂರಲ್ಲಿ ಹಿಂದು ಯುವಕನೆಂದು ಹೇಳಿಕೊಂಡು ನಕಲಿ ಆಧಾರ್​ ಇಟ್ಟುಕೊಂಡು ಓಡಾಡುತ್ತಿದ್ದ. ಅಷ್ಟೇ ಅಲ್ಲ, ಟೆಕ್ಕಿಯೊಬ್ಬರ ಹೆಸರಲ್ಲಿ ಸಿಮ್​ ಕೂಡ ಪಡೆದಿದ್ದ. ಫೋನ್​ ತರಬೇತಿಗೂ ನಕಲಿ ದಾಖಲೆ ಕೊಟ್ಟಿದ್ದ... ಇಂತಹ ಆಘಾತಕಾರಿ ಸಂಗತಿಗಳು ಒಂದೊಂದೇ ಬಯಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಸಾರ್ವಜನಿಕರಿಗೆ ಮಹತ್ವದ ಸಲಹೆ ಕೊಟ್ಟು ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.

ಟ್ವಿಟ್ ಮೂಲಕ ಸಾರ್ವಜನಿಕರಿಗೆ ಅಲೋಕ್​ ಕುಮಾರ್​ ಅವರು ನೀಡಿರುವ ಸಲಹೆ ಇಲ್ಲಿದೆ...

- ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಕಳೆದುಕೊಂಡರೆ ಜಾಗರೂಕರಾಗಿರಿ

- ಯುಐಡಿಎಐ ಸೈಟ್‌ನ ದುರುಪಯೋಗ ತಡೆಯಲು ಲಭ್ಯವಿರುವ ಲಾಕ್ ಮತ್ತು ಅನ್‌ಲಾಕ್ ಸೌಲಭ್ಯವನ್ನು ಬಳಸಿ

- ಅಪರಿಚಿತರಿಗೆ ಮನೆ ಬಾಡಿಗೆಗೆ ಕೊಡುವ ಮುನ್ನ ಅವರ ಪೂರ್ವಾಪರಗಳನ್ನು ಪರಿಶೀಲಿಸಿ. ಗುರತಿನ ಚೀಟಿಗಳ ಒಂದು ಪ್ರತಿ ಪಡೆದಿಟ್ಟುಕೊಳ್ಳಿ.

- ನಿಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬುದರ ಬಗ್ಗೆ ನಿಗಾ ಇಡಿ