ಬಂದರು, ಗಣಿ, ಸ್ವಚ್ಛ ಇಂಧನ, ಏರ್ಪೋರ್ಟ್ ನಿರ್ವಹಣೆ ಇನ್ನಿತರ ಕಂಪನಿಗಳನ್ನು ಒಳಗೊಂಡ ಅದಾನಿ ಸಮೂಹಗಳ ಒಡೆಯ ಗೌತಮ್ ಅದಾನಿ 2021ರಲ್ಲಿ ಏಷ್ಯಾದ ಅತಿ ಶ್ರೀಮಂತ ಎಂಬ ಹೆಗ್ಗಳಿಕೆಗೆ ಮತ್ತೆ ಪಾತ್ರರಾಗಿದ್ದಾರೆ. ಭಾರತದವರೇ ಆದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಮೊದಲಿಗರಾಗಿದ್ದಾರೆ ಎಂದು ಬ್ಲೂಮ್ಗ್ ಬಿಲಿಯನೇರ್ ಇಂಡೆಕ್ಸ್ ಹೇಳಿದೆ.
- ಗೌತಮ್ ಅದಾನಿ ಒಟ್ಟು ಸಂಪತ್ತಿನ ಮೌಲ್ಯ 6.61 ಲಕ್ಷ ಕೋಟಿ ರೂ. (88.50 ಮಿಲಿಯನ್ ಡಾಲರ್).
- 2021ರಲ್ಲಿ ಅದಾನಿ ವೈಯಕ್ತಿಕ ಆದಾಯದಲ್ಲಿ ಹೆಚ್ಚಳ 89,689 ಕೋಟಿ ರೂ. (12 ಬಿಲಿಯನ್ ಡಾಲರ್).
- ಎರಡು ವರ್ಷದಲ್ಲಿ ಅದಾನಿ ಸಮೂಹ ಕಂಪನಿಗಳ ಒಟ್ಟಾರೆ ಷೇರು ಮೌಲ್ಯ ಶೇ. 600ರಷ್ಟು ಏರಿಕೆ.
- ಸ್ವಚ್ಛ ಇಂಧನದ ಉದ್ಯಮದಲ್ಲಿ ಅದಾನಿ 2030ರೊಳಗೆ 5.23 ಲಕ್ಷ ಕೋಟಿ ರೂ. (70 ಬಿಲಿಯನ್ ಡಾಲರ್) ಹೂಡಿಕೆಯನ್ನು ಘೋಷಿಸಿದ್ದಾರೆ.
- ಅದಾನಿ ಸಮೂಹದಲ್ಲಿ ಟೋಟಲ್ ಎಸ್ಇ, ವಾರ್ಬರ್ಗ್ ಪಿಂಕಸ್ ಎಲ್ಎಲ್ಸಿಗಳು ಹೂಡಿಕೆ ಮಾಡಿವೆ.
- ಕಳೆದ ಮೂರು ವರ್ಷದಿಂದ ಅದಾನಿ ಸಮೂಹವು 7 ಏರ್ಪೋರ್ಟ್ಗಳ ನಿರ್ವಹಣೆಯ ಗುತ್ತಿಗೆ ಪಡೆದಿದೆ.
- ಮುಕೇಶ್ ಅಂಬಾನಿ ಒಟ್ಟು ಸಂಪತ್ತಿನ ಮೌಲ್ಯ 6.56 ಲಕ್ಷ ಕೋಟಿ ರೂ. (87.90 ಬಿಲಿಯನ್ ಡಾಲರ್).
- 2020ರಲ್ಲಿ ಮುಕೇಶ್ ಅವರ ರಿಲಯನ್ಸ್ ಸಮೂಹವು ಶತಲಕ್ಷ ಕೋಟಿ ರೂಪಾಯಿಗಳ ಲಾಭವನ್ನು ದಾಖಲಿಸಿತ್ತು.
- ಸ್ವಚ್ಛ ಇಂಧನದಲ್ಲಿ ಅಂಬಾನಿ ಮುಂದಿನ 3 ವರ್ಷದಲ್ಲಿ 75 ಕೋಟಿ ರೂ. (10 ಬಿಲಿಯನ್ ಡಾಲರ್) ಹೂಡಿಕೆ ಮಾಡಲಿದ್ದಾರೆ.