ನ್ಯೂಸ್

ಆ ಒಂದು ಕೆಲಸಕ್ಕೆ ಮಾಡಿದ್ದಕ್ಕೆ ನನ್ನ ವೇಶ್ಯೆ ಅಂತ ಕರೆದರು ಎಂದ್ರು ಅಪ್ಪು ಜತೆ  'ರಣವಿಕ್ರಮ'ದಲ್ಲಿ ನಟಿಸಿದ್ದ ಆದಾ ಶರ್ಮಾ

ಬೆಂಗಳೂರು:  ದಿ ಕೇರಳ ಸ್ಟೋರಿ ಸಿನಿಮಾದ ಮೂಲಕ  ಸದ್ದು ಮಾಡಿದ್ದ ನಟಿ ಆದಾ ಶರ್ಮಾ. ತೆಲುಗು, ಕನ್ನಡ, ಹಿಂದಿ ಸಿನಿಮಾಗಳಲ್ಲಿ ಮಿಂಚಿದ್ದ ಈ ನಟಿ ಸಿನಿಮಾ ವಿಚಾರವಾಗಿ ಸಖತ್​ ಸುದ್ದಿಯಲ್ಲಿರುತ್ತಾರೆ. ನಟಿ ತನಗೆ ಬರುತ್ತಿರುವ ನೆಗಿಟಿವ್​ ಕಾಮೆಂಟ್​ಗಳ ಕುರಿತಾಗಿ ಮಾತನಾಡಿದ್ದಾರೆ.

ದಿ ಕೇರಳ ಸ್ಟೋರಿ ಸಿನಿಮಾದ ಮೂಲಕ ಹಿಟ್ ಮಾಡಿದ್ದ ಆದಾ ಈಗ ಬಸ್ತಾರ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಆದರೆ ಗಲ್ಲಾ ಪೆಟ್ಟಿಗೆಯಲ್ಲಿ ಸೌಂಡ್​​ ಮಾಡಲು ಸಾಧ್ಯವಾಗಲಿಲ್ಲ. ಆದರೆ ಆದಾ ಶರ್ಮಾ ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಮತ್ತೊಮ್ಮೆ ಪ್ರಶಂಸೆ ಪಡೆದರು. ಆದರೆ ಕೆಲವು ಈ ಸಿನಿಮಾಗಳಿಂದಾಗಿಯೆ ನಟಿ ಕುರಿತಾಗಿ ಟೀಕೆ ಮಾಡಿದ್ದರು.

ಇತ್ತೀಚೆಗೆ ಆದಾ ಶರ್ಮಾ  ಸಂದರ್ಶನವೊಂದರಲ್ಲಿ, ಕೆಲವು ಚಿತ್ರವನ್ನು ಒಪ್ಪಿಕೊಂಡಿದ್ದಕ್ಕಾಗಿ ಕೆಲವರು ಕೆಟ್ಟದಾಗಿ ಟ್ರೋಲ್ ಮಾಡಿದ್ದಾರೆ ಎಂದು ಬಹಿರಂಗಪಡಿಸಿದರು. ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಕಾಮೆಂಟ್​​ಗಳು ಈ ಚಿತ್ರವನ್ನು ಗುರಿಯಾಗಿಟ್ಟುಕೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಬಸ್ತಾರ್ ಪೋಸ್ಟರ್ ಬಿಡುಗಡೆ ಸಮಯದಲ್ಲಿ, ಚಿತ್ರಕ್ಕೆ ಇನ್ನೂ ನನ್ನ ಆಯ್ಕೆ ಮಾಡಿರಲಿಲ್ಲ. ಹೀಗಾಗಿ ಅದರಲ್ಲಿ ಫೋಟೋ ಇರಲಿಲ್ಲ . ನಂತರ ಚಿತ್ರದ ಹೆಸರನ್ನು ಮಾತ್ರ ಅನೌನ್ಸ್ ಮಾಡಲಾಯಿತ್ತು. ಆದರೆ ಇದರಲ್ಲಿ ನಟಿಸಲಿರುವ ನಟರ ವಿವರ ಇನ್ನೂ ಬಹಿರಂಗವಾಗಿರಲಿಲ್ಲ. ಆದರೆ ಆಗಾಗಲೇ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದರೊಂದಿಗೆ ತನ್ನನ್ನು ಗುರಿಯಾಗಿಸಿಕೊಂಡು ಕಾಮೆಂಟ್ ಮಾಡಲು ಆರಂಭಿಸಿದ್ದರು ಎಂದು ಕಳವಳ ವ್ಯಕ್ತಪಡಿಸಿದರು.

‘ದಿ ಕೇರಳ ಸ್ಟೋರಿ’ ಸಿನಿಮಾದ ಚಿತ್ರೀಕರಣದ ವೇಳೆ ಕೆಲವರು ಸಿನಿಮಾವನ್ನು ನೋಡದೇ ಮಾತನಾಡಿದ್ದರು. ಈಗ ನಿಮಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುವ ಸ್ವಾತಂತ್ರ್ಯವಿದೆ. ಬಸ್ತಾರ್‌ನಂತಹ ಚಿತ್ರ ಮಾಡುವ ಹಕ್ಕು ನಮಗಿದೆ. ಅದು ನಿಮಗೆ ಏಕೆ ಅರ್ಥವಾಗುತ್ತಿಲ್ಲ?. ನಾನು ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಘೋಷಿಸಿದ ನಂತರ, ನನಗೆ ಹೆಚ್ಚು ನಕಾರಾತ್ಮಕ ಕಾಮೆಂಟ್‌ಗಳು ಬಂದವು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಸುಂದರವಾದ ಹೂವುಗಳ ಫೋಟೋವನ್ನು ಪೋಸ್ಟ್ ಮಾಡಿದರೂ, ಅವರು ಮುಜುಗರದ ಕಾಮೆಂಟ್ಗಳನ್ನು ಮಾಡುತ್ತಾರೆ. ವೇಶ್ಯೆಯಂತಹ ಪದಗಳನ್ನು ಬಳಸಿ ಟ್ರೋಲ್ ಮಾಡುತ್ತಿದ್ದಾರೆ. ಸಿನಿಮಾ ನೋಡುವ ಮುನ್ನ ಜಡ್ಜ್‌ ಮಾಡುವ ಜನರ ಯೋಚನೆ ಸಿಟ್ಟು ತರುತ್ತದೆ. ಆಮೇಲೆ ನಿಧಾನವಾಗಿ ಆ ಸಿಟ್ಟು ಕಡಿಮೆಯಾಯಿತು. ಈಗ ಯಾವ ಕಾಮೆಂಟ್‌ಗಳಿಗೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ನಟಿ ಆದಾ ಶರ್ಮಾ ಚತುರ್ಭಾಷಾ ತಾರೆ. ಕನ್ನಡ, ತೆಲುಗು, ಹಿಂದಿ, ತಮಿಳು ಭಾಷೆಯ ಸಿನಿಮಾಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಸದ್ಯ ಬಾಲಿವುಡ್‌ನಲ್ಲಿ ಅವರು ಸಕ್ರಿಯರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಬೋಲ್ಡ್ ಫೋಟೋಶೂಟ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.