ಮುಂಬೈ: 'ಎಸಿಯಲ್ಲಿ ಕುಳಿತುಕೊಳ್ಳಬೇಡಿ, ಗುಹೆಗಳಿಗೆ ಹೋಗಿ ವಾಸಿಸಿ' ಎಂದು ಮಾಂಸಾಹಾರದ ಪರವಾಗಿ ವಾದಿಸಿದವರನ್ನು ದ ಕೇರಳ ಸ್ಟೋರಿ ನಟಿ ಅದಾ ಶರ್ಮಾ ಟೀಕಿಸಿದರು.
ಅದಾ ಶರ್ಮಾ ಇತ್ತೀಚೆಗೆ ಮಾಂಸಾಹಾರವನ್ನು ಸೇವಿಸುವಂತೆ ಪ್ರತಿಪಾದಿಸುವವರನ್ನು ತರಾಟೆಗೆ ತೆಗೆದುಕೊಂಡರು. ಅವರು ತಮ್ಮ ಪೂರ್ವಜರು ರಚಿಸಿದ ಆಹಾರ ಸರಪಳಿಯನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಪೇಟಾ ಇಂಡಿಯಾ ಅಭಿಯಾನಕ್ಕಾಗಿ ವಿಶೇಷ ಸಂದರ್ಶನದಲ್ಲಿ ಮಾಂಸಾಹಾರಿಗಳ ಬಗ್ಗೆ ಮೌನ ಮುರಿದ ಈ ಬಾಲಿವುಡ್ ಬೆಡಗಿ, ನೂರಾರು ಸಾವಿರ ವರ್ಷಗಳ ಹಿಂದೆ ನಮ್ಮ ಹೋಮೋ ಸೇಪಿಯನ್ ಪೂರ್ವಜರು ತಿನ್ನುವುದನ್ನು ಮುಂದುವರಿಸಿದ್ದಾರೆ. ಮಾಂಸಾಹಾರಿಗಳು ಗುಹೆಯೊಳಗೆ ಹೋಗಬೇಕು, ಅಲ್ಲಿ ವಾಸಿಸಬೇಕು ಮತ್ತು ತಮ್ಮ ಎಸಿ ಮನೆ ಮತ್ತು ಕಾರನ್ನು ಬಿಡಬೇಕು ಎಂದು ಹೇಳಿದ್ದಾರೆ.
ಈ ಮಾಂಸಾಹಾರಿಗಳು ಕಲ್ಲುಗಳಿಂದ ಆಯುಧಗಳನ್ನು ತಯಾರಿಸಿಕೊಳ್ಳಬೇಕು. ತಮ್ಮ ಕೈಗಳಿಂದ ಮಾತ್ರ ಮಾಂಸವನ್ನು ತಿನ್ನುವುದು ಮತ್ತು ಬೇಟೆಯಾಡಲು ಪ್ರಾರಂಭಿಸಬೇಕು. ಶಿಲಾಯುಗದ ಜನರಂತೆ ಬದುಕು ಶುರು ಮಾಡಬೇಕು ಎಂದು ಅದಾ ಟೀಕಿಸಿದ್ದಾರೆ.
ಪ್ರಾಣಿಗಳನ್ನು ಕೊಂದು ತಿನ್ನದಿದ್ದರೆ ಹೆಚ್ಚಿನ ಪ್ರೋಟೀನ್ ಸಿಗುವುದಿಲ್ಲ ಎಂಬ ಮಾಂಸಾಹಾರಿಗಳ ವಾದದ ಬಗ್ಗೆ ಉತ್ತರಿಸಿದ ನಟಿ, ಇದಕ್ಕೆ, ಎಲ್ಲರಿಗೂ ಎಲ್ಲವೂ ತಿಳಿದಿದೆ. ಹೊರಗೆ ಸಾಕಷ್ಟು ಪರ್ಯಾಯಗಳು ಲಭ್ಯವಿದೆ ಎಂದು ಅದಾ ಹೇಳಿದರು. ನಾನು ಸಸ್ಯಾಹಾರಿಯಾಗಿದ್ದರೂ, ಬಲವಾದ ಸ್ನಾಯುಗಳನ್ನು ಹೊಂದಿದ್ದೇನೆ. ಮಾಂಸಕ್ಕೆ ಸಾಕಷ್ಟು ಪರ್ಯಾಯಗಳು ಮತ್ತು ಆರೋಗ್ಯಕರವಾದವು. ಶೀಘ್ರವಾಗಿ ಜೀರ್ಣವಾಗುತ್ತವೆ ಎಂದು ಹೇಳಿದರು.