ಮುಂಬೈ: 'ಇಷ್ಕ್ಬಾಜ್' ಧಾರಾವಾಹಿ ಖ್ಯಾತಿಯ ನೇಹಾ ಲಕ್ಷ್ಮಿ ಅಯ್ಯರ್ ಕೆಲವೇ ದಿನಗಳಲ್ಲಿ ತಮ್ಮ ಬಹುಕಾಲದ ಗೆಳೆಯ ರುದ್ರಯಾಶ್ ಜೋಶಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆಗೂ ಮುನ್ನ ನಟಿ ನೇಹಾ ಲಕ್ಷ್ಮಿ ತಮ್ಮ ಸ್ನೇಹಿತರೊಂದಿಗೆ ಬ್ಯಾಚಿಲ್ಲೋರೆಟ್ ಪಾರ್ಟಿ ಮಾಡಿದ್ದು, ಅದರ ವಿಡಿಯೋಗಳು ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
'ಇಷ್ಕ್ಬಾಜ್'ನಲ್ಲಿ ಸೌಮ್ಯಾ ಕಪೂರ್ ಪಾತ್ರವನ್ನು ನಿರ್ವಹಿಸುವ ಮೂಲಕ ನೇಹಾ ಲಕ್ಷ್ಮಿ ಸಾಕಷ್ಟು ಹೆಸರು ಮತ್ತು ಖ್ಯಾತಿಯನ್ನು ಗಳಿಸಿದರು. ಅಂದಹಾಗೆ ನೇಹಾ ಲಕ್ಷ್ಮಿ ಅವರ ಬ್ಯಾಚುಲರ್ ಪಾರ್ಟಿಯಲ್ಲಿ ಜನಪ್ರಿಯ ಕಿರುತೆರೆ ನಟಿ, ನಾಗಿನ್ ಖ್ಯಾತಿಯ ಸುರಭಿ ಚಂದನಾ ಕೂಡ ಭಾಗವಹಿಸಿದ್ದು, ಈ ಪಾರ್ಟಿಯಲ್ಲಿ ಮೋಜು ಮಾಡುತ್ತಿರುವುದು ಕಂಡುಬಂದಿದೆ.
ನೇಹಾ ಲಕ್ಷ್ಮಿಯ ಐವರು ಸ್ನೇಹಿತರು ಅವರ ಬ್ಯಾಚಿಲ್ಲೋರೆಟ್ ಪಾರ್ಟಿಯಲ್ಲಿ ಮೋಜು ಮಾಡುತ್ತಿದ್ದಾರೆ. ಶ್ರೇಣು ಪಾರಿಖ್, ಮಾನ್ಸಿ ಶ್ರೀವಾಸ್ತವ, ಮೃಣಾಲ್ ದೇಶರಾಜ್ ಮತ್ತು ಸುರಭಿ ಚಂದನಾ ಅವರಲ್ಲದೆ, ಕುನಾಲ್ ಜೈಸಿಂಗ್ ಕೂಡ ಇಲ್ಲಿ ಸೇರ್ಪಡೆಗೊಂಡರು. ಸುರಭಿ ಚಂದನಾ ಬೋಲ್ಡ್ ಲುಕ್ ಫೋಟೋಗಳಲ್ಲಿ ಪಾರ್ಟಿಯಲ್ಲಿ ಅವರ ಸ್ನೇಹಿತರೆಲ್ಲಾ ಒಂದೇ ರೀತಿಯ ಡ್ರೆಸ್ ಕೋಡ್ ಅಂದರೆ ಗುಲಾಬಿ ಬಣ್ಣದ ದಿರಿಸನ್ನು ಧರಿಸಿರುವುದು ನೋಡಬಹುದು. ಆದರೆ ವಧು ಮಾತ್ರ ಕಪ್ಪು ಉಡುಪಿನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಎಲ್ಲಾ ನಟಿಯರೂ ಒಟ್ಟಿಗೆ ಪೋಸ್ ಕೊಡುವುದನ್ನು ಕಾಣಬಹುದು. ಸದ್ಯ ಇಷ್ಕ್ಬಾಜ್ ಪ್ರಸಾರವಾಗುತ್ತಿಲ್ಲ. ಆದರೂ ಇಡೀ ತಾರಾ ಬಳಗ ಇನ್ನೂ ಒಟ್ಟಿಗೆ ಇದ್ದಾರೆ. ಸುರಭಿ ಚಂದನಾಗಿಂತ ಮೊದಲು ನೇಹಾ ಲಕ್ಷ್ಮಿ ಮದುವೆಯಾಗಲಿದ್ದಾರೆ. ಈ ಫೋಟೋಗಳಲ್ಲಿ ಸುರಭಿ ಚಂದನಾ ಅವರ ಬೋಲ್ಡ್ ಲುಕ್ ಅನ್ನು ಸಹ ಕಾಣಬಹುದು.
ಸುರಭಿ ಚಂದನಾ ವಿವಾಹ ನಟಿ ನೇಹಾ ಲಕ್ಷ್ಮಿ ನಂತರ ಸುರಭಿ ಚಂದನಾ ಕೂಡ ಮುಂದಿನ ತಿಂಗಳು ಮಾರ್ಚ್‌ನಲ್ಲಿ ತಮ್ಮ ಬಹು ಕಾಲದ ಗೆಳೆಯನನ್ನು ವರಿಸಲಿದ್ದಾರೆ. ಮಾರ್ಚ್ 1 ಮತ್ತು 2 ರಂದು ಉದ್ಯಮಿ, ಗೆಳೆಯ ಕರಣ್ ಶರ್ಮಾ ಅವರೊಂದಿಗೆ ಸುರಭಿ ಜೈಪುರದಲ್ಲಿ ವಿವಾಹವಾಗಲಿದ್ದಾರೆ.