ಮುಂಬೈ: ಬಾಲಿವುಡ್ ನಟಿ ಶಮಾ ಸಿಕಂದರ್ ಅವರು ಇತ್ತೀಚೆಗೆ ತಮ್ಮ ಜೀವನದಲ್ಲಿ ಎದುರಿಸಿದ ಕಠಿಣ ಪರಿಸ್ಥಿತಿಗಳ ಬಗ್ಗೆ ಮಾತನಾಡಿದ್ದಾರೆ. ಅವರು 15 ವರ್ಷಗಳ ಹಿಂದೆ ತೀವ್ರ ಮಾನಸಿಕ ಅಸ್ವಸ್ಥತೆಯನ್ನು ಎದುರಿಸಿದ್ದರು ಎಂದು ಅವರು ಹೇಳಿದ್ದಾರೆ.
ಯೇ ಮೇರಿ ಲೈಫ್ ಹೈ, ಬಲ್ ವೀರ್, ಮನ್ ಮೇ ಹೈ ವಿಶ್ವಾಸ್ ಮುಂತಾದ ಧಾರಾವಾಹಿಗಳನ್ನು ಮಾಡಿದ್ದಾರೆ. ಆ ನಂತರ ಪ್ರೇಮ್ ಅಗ್ಗನ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದರು.. ಹಲವು ಚಿತ್ರಗಳಲ್ಲಿ ನಟಿಸಿದ್ದರು. ಅವರು 2019 ರಲ್ಲಿ ಬೈಪಾಸ್ ರೋಡ್ ಚಿತ್ರದಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶವೊಂದರಲ್ಲಿ ಶಮಾ ಸಿಕಂದರ್ ಮಾತನಾಡಿ, ತುಂಬಾ ಖಿನ್ನತೆಗೊಳಗಾಗಿದ್ದೇನು. ಸಾಯಲು ಅನೇಕ ಬಾರಿ ಪ್ರಯತ್ನಿಸಿದೆ. ತನಗೆ ಈ ಜೀವನ ಬೇಡವಾಗಿತ್ತು. ಸಾವಿನ ನಂತರ ಮತ್ತೊಂದು ಜನ್ಮಕ್ಕಾಗಿ ದೇವರನ್ನು ಪ್ರಾರ್ಥಿಸಿದೆ. ತಾನು ಆತ್ಮಹತ್ಯೆ ಮಾಡಿಕೊಳ್ಳಲು ನಿದ್ರೆ ಮಾತ್ರೆ ಸೇವಿಸಿದ್ದೆ. ನನ್ನ ಸಹೋದರನಿಗೆ ಬ್ಯಾಂಕ್ ವಿವರಗಳನ್ನು ಕಳುಹಿಸಿದೆ. ನನ್ನ ಸಹೋದರ ನನ್ನ ತಾಯಿಯನ್ನು ಕರೆದರು ಮತ್ತು ಅವರು ನನ್ನನ್ನು ಎಬ್ಬಿಸಲು ಪ್ರಯತ್ನಿಸಿದರು. ತಕ್ಷಣ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ನನ್ನ ದೇಹದಿಂದ ವಿಷವನ್ನು ಹೊರಹಾಕಿದರು ಮತ್ತು ನಾನು ಬದುಕುಳಿದೆ ಎಂದಿದ್ದಾರೆ.
ನಂತರ ಎರಡು- ಮೂರು ವರ್ಷಗಳು ನನಗೆ ತುಂಬಾ ಕಷ್ಟಕರವಾಗಿತ್ತು. ಕೋಣೆಯಿಂದ ಆಚೆ ಬರಲಿಲ್ಲ. ನನ್ನ ಕೋಣೆಯಲ್ಲಿ ಒಬ್ಬಳೆ ಕುಳಿತು ಅಳುತ್ತಿದ್ದೆ. ಬಹಳ ಸಮಯದ ನಂತರ ನಾನು ತಪ್ಪು ದಾರಿಯಲ್ಲಿ ಹೋಗುತ್ತಿದ್ದೇನೆ ಎಂದು ಅರ್ಥಮಾಡಿಕೊಂಡಿದ್ದೇನೆ ಮತ್ತು ಅದರಿಂದ ಹೊರಬಂದೆ ಎಂದು ಶಮಾ ಸಿಕಂದರ್ ಹೇಳಿದ್ದಾರೆ.