ನ್ಯೂಸ್

‘ಮಗಳು ಜಾನಕಿ’ಯ ಸಂಜನಾಗೆ ಮದುವೆ ಆಯ್ತು...

ಚಿತ್ರದುರ್ಗ: ‘ಮಗಳು ಜಾನಕಿ’ ಧಾರಾವಾಹಿಯ ಸಂಜನಾ ಪಾತ್ರ ಖ್ಯಾತಿಯ ಕಿರುತೆರೆ ನಟಿ ಸುಪ್ರಿಯಾ ಅವರ ವಿವಾಹವು ಸಾಫ್ಟ್‌ವೇರ್ ಇಂಜಿನಿಯರ್ ವಿಜಯ್ ಅವರೊಂದಿಗೆ ನಡೆಯಿತು.

ತಾಲೂಕಿನ ಜಾನುಕೊಂಡ ಗ್ರಾಮ ಸಮೀಪದ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯದಲ್ಲಿ ಮೊನ್ನೆ ಈ ಮದುವೆಯು ಸರಳವಾಗಿ ನಡೆಯಿತು.

ಕರೊನಾ ಲಾಕ್‌ಡೌನ್ ಕಾರಣಕ್ಕೆ ವಧು, ವರ ಹಾಗೂ ಅವರ ಕುಟುಂಬದವರು ಸೇರಿದಂತೆ 20 ಮಂದಿ ಮಾತ್ರ ಈ ಶುಭ ಸಂದರ್ಭದಲ್ಲಿ ಹಾಜರಿದ್ದರು.

ದೇವಾಲಯದ ಪುರೋಹಿತರ ಸಾನ್ನಿಧ್ಯದಲ್ಲಿ ಅರ್ಧ ತಾಸಿನೊಳಗೆ ವಿವಾಹಕ್ಕೆ ಸಂಬಂಧಿಸಿದ ಶಾಸ್ತ್ರ, ಸಂಪ್ರದಾಯಗಳು ನೆರವೇರಿದವು. ಲಕ್ಷಾಂತರ ರೂ. ವೆಚ್ಚದಲ್ಲಿ ಅದ್ಧೂರಿಯಿಂದ ಜರುಗಬೇಕಿದ್ದ ಮದುವೆ, ಹತ್ತಾರು ಸಾವಿರ ರೂ. ಖರ್ಚಿಗೆ ಮಾತ್ರ ಸೀಮಿತಗೊಂಡಿತ್ತು.