ನ್ಯೂಸ್

ಹನಿಟ್ರ್ಯಾಪ್​​ ಮಾಡಲು ನಟಿಯರ ಬಳಕೆ: ಪಾಕ್​ ನಿವೃತ್ತ ಸೇನಾಧಿಕಾರಿಯಿಂದ ಶಾಕಿಂಗ್​ ಸಂಗತಿ ಬಯಲು

ಇಸ್ಲಮಾಬಾದ್​​: ವಿರೋಧಿಗಳನ್ನು ಮೋಹದ ಬಲೆಗೆ ಕೆಡವಿ ಮಹತ್ವದ ಮಾಹಿತಿಗಳನ್ನು ಕಲೆ ಹಾಕಲು ಪಾಕಿಸ್ತಾನದ ಮಿಲಿಟರಿ ನಾಯಕತ್ವವು ಕೆಲವು ನಟಿಯರನ್ನು ಬಳಸಿಕೊಳ್ಳುತ್ತಿದೆ ಎಂದು ನಿವೃತ್ತ ಪಾಕ್​​ ಸೇನಾಧಿಕಾರಿ ಮೇಜರ್​ ಆದಿಲ್​ ರಾಜಾ ಇತ್ತೀಚೆಗೆ ಶಾಕಿಂಗ್​ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

ನಿವೃತ್ತ ಮೇಜರ್​, ನಟಿಯರ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ, ಸೋಲ್ಜರ್​ ಸ್ಪೀಕ್ಸ್​​ ಹೆಸರಿನ ಯೂಟ್ಯೂಬ್​ನಲ್ಲಿ ಆದಿಲ್​ ರಾಜಾ ಅವರು ಕೆಲವು ಸುಳಿವುಗಳನ್ನು ನೀಡಿದ್ದಾರೆ. ಇದರ ಬೆನ್ನಲ್ಲೇ ಪಾಕ್​ ನಟಿ ಸಾಜಲ್​ ಅಲಿ ಪ್ರತಿಕ್ರಿಯೆ ನೀಡಿದ್ದು, ಆರೋಪಗಳೆಲ್ಲ ನಿರಾಧಾರ ಎಂದು ತಳ್ಳಿ ಹಾಕಿದ್ದಾರೆ.

ನಮ್ಮ ದೇಶವು ನೈತಿಕವಾಗಿ ಅಧಃಪತನ ಮತ್ತು ಕೊಳಕು ಆಗುತ್ತಿರುವುದು ತುಂಬಾ ದುಃಖಕರವಾಗಿದೆ. ವ್ಯಕ್ತಿತ್ವದ ಹರಣವು ಅಮಾನವೀಯತೆ ಮತ್ತು ಪಾಪದ ಕೆಟ್ಟ ರೂಪವಾಗಿದೆ ಎಂದು ನಟಿ ಸಾಜಲ್​ ಅಲಿ ಟ್ವೀಟ್ ಮಾಡಿದ್ದಾರೆ.

ಮೇಜರ್ (ನಿವೃತ್ತ) ಆದಿಲ್ ರಾಜಾ ಅವರು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬೆಂಬಲಿಗರಾಗಿದ್ದಾರೆ. (ಏಜೆನ್ಸೀಸ್​)