ನ್ಯೂಸ್

ಉಡುಪಿ ಶ್ರೀ ಕೃಷ್ಣನ ದಶರ್ನ ಪಡೆದ ನಟಿ ಸಾಯಿ ಪಲ್ಲವಿ

ಉಡುಪಿ: ನಟಿ ಸಾಯಿ ಪಲ್ಲವಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತಾದ ಕೆಲವು ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಖಾಸಗಿ ಕಾರ್ಯ ನಿಮಿತ್ತ ಕರಾವಳಿಗೆ ಬಂದಿರುವ ಚಿತ್ರನಟಿ ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದೇವರ ದರ್ಶನ ಪಡೆದಿದ್ದಾರೆ.ನಂತರ ಕಾಣಿಯೂರು ಮಠಕ್ಕೆ ತೆರಳಿ ಶ್ರೀ ವಿದ್ಯಾ ವಲ್ಲಭ ತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.

ಮಠಕ್ಕೆ ಭೇಟಿ ನೀಡಿದ ಸಾಯಿ ಪಲ್ಲವಿ ಅವರನ್ನು ಶ್ರೀ ಕೃಷ್ಣ ಮಠದ ವತಿಯಿಂದ ಗೌರವಿಸಲಾಯಿತು.

‘ರಾಕಿಂಗ್​ ಸ್ಟಾರ್​’ ಯಶ್​  ಅವರು ಟಾಕ್ಸಿಕ್’ ಸಿನಿಮಾ ಅನೌನ್ಸ್​ ಮಾಡಿದ ಬಳಿಕ ಹಲವು ಅಂತೆ-ಕಂತೆಗಳು ಹುಟ್ಟಿಕೊಂಡಿವೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್​ ಅವರು ‘ಟಾಕ್ಸಿಕ್​’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಟೈಟಲ್​ ಅನಾವರಣ ಮಾಡುವ ಸಲುವಾಗಿ ಬಿಡುಗಡೆ ಮಾಡಿದ ಟೀಸರ್​ ಗಮನ ಸೆಳೆದಿದೆ. ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಸಾಯಿ ಪಲ್ಲವಿ ಮತ್ತು ಶ್ರುತಿ ಹಾಸನ್​ ಅವರನ್ನು ಚಿತ್ರತಂಡ ಸಂಪರ್ಕಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.