ನ್ಯೂಸ್

ನಮ್ಮ ನಡುವೆ ಪ್ರೀತಿಯೇ ಇರಲಿಲ್ಲ; ರಿಸ್ಕ್​ ಇದ್ದರೂ ಮದುವೆಯಾದೆ ಎಂದಿದ್ದೇಕೆ ರೇಖಾ | Actress Rekha

ಮುಂಬೈ: ಬಾಲಿವುಡ್​ ನಟಿ ರೇಖಾ(Actress Rekha) ಅವರ ವಿಷಯ ಬಂದಾಗಲೆಲ್ಲಾ 'ಮಿಸ್ಟರಿ ವುಮೆನ್' ಎಂಬ ಟ್ಯಾಗ್ ಅವರನ್ನು ಸೇರಿಕೊಂಡಿದೆ. ಅವರ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಾದಷ್ಟು ವೃತ್ತಿಜೀವನದ ಬಗ್ಗೆ ಹೆಚ್ಚು ಚರ್ಚೆಯಾಗಲಿಲ್ಲ. ಅದು ಅಮಿತಾಭ್​​​ ಬಚ್ಚನ್ ಅವರೊಂದಿಗಿನ ಸಂಬಂಧವಾಗಿರಬಹುದು ಅಥವಾ ಉದ್ಯಮಿ ಮುಖೇಶ್ ಅಗರ್​ವಾಲ್​​ ಅವರೊಂದಿಗಿನ ವಿವಾಹ ಮತ್ತು ಅವರ ಆತ್ಮಹತ್ಯೆಯ ವಿಚಾರವೆ ಆಗಿರಬಹುದು.

ಅವರ ಪತಿಯ ಆತ್ಮಹತ್ಯೆ ನಂತರ ರೇಖಾ ಅವರಿಗೆ 'ವ್ಯಾಂಪ್' ಮತ್ತು 'ಮಾಟಗಾತಿ' ಎಂಬ ಟೀಕೆಗಳು ಅಂಟಿಕೊಂಡಿದ್ದು ಮಾತ್ರ ಸುಳ್ಳಲ್ಲ. ಬಾಲಿವುಡ್​​ನ ಹಲವು ಸೆಲೆಬ್ರಿಟಿಗಳು ರೇಖಾ ಅವರನ್ನು ನೋಡಿದಾಗ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕೆಲವು ವಿಡಿಯೋಗಳಲ್ಲಿ ನೋಡಿದ್ದೇವೆ. ಆದರೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅದರಲ್ಲೂ ಪತಿಯ ಮರಣದ ನಂತರ ಅನುಭವಿಸಿದ ಸ್ಥಿತಿಯನ್ನು ನಟಿ ರೇಖಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ನಟಿ ರೇಖಾ ಅವರು ಉದ್ಯಮಿ ಮುಖೇಶ್​ ಅಗರ್​ವಾಲ್​ ಅವರನ್ನು 1990ರಲ್ಲಿ ವಿವಾಹವಾದರು. ಆದರೆ ಮದುವೆಯಾದ 7 ತಿಂಗಳ ನಂತರ ಅವರ ಪತಿ ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಲಾಗುತ್ತದೆ. ತಮ್ಮ ಮದುವೆ ಬಗ್ಗೆ ರೇಖಾ ಅವರು ಮಾತನಾಡಿದ ಥ್ರೋಬ್ಯಾಕ್​ ವಿಡಿಯೋವೊಂದು ಸದ್ಯ ಜಾಲತಾಣದಲ್ಲಿ ಹರಿದಾಡುತ್ತಿದೆ. ನನ್ನ ಮದುವೆ ಅರೇಂಜ್ಡ್ ಮ್ಯಾರೇಜ್ ಆಗಿತ್ತು. ಇದರಲ್ಲಿ ನನ್ನ ಮತ್ತು ನನ್ನ ಪತಿಯ ನಡುವೆ ಪ್ರೀತಿಯೇ ಇರಲಿಲ್ಲ. ಸಾಮಾಜಿಕ ವ್ಯವಸ್ಥೆಗಾಗಿ ಆಗಿದ್ದ ವಿವಾಹ ಎಂದು ಹೇಳಿದರು.

ಮುಖೇಶ್​​ ಅಗರ್​ವಾಲ್​ ಅವರನ್ನು ಮದುವೆಯಾಗುವ ಮುನ್ನ ಒಮ್ಮೆ ಭೇಟಿಯಾಗಿದ್ದೆ. ಅವರನ್ನು ಮದುವೆಯಾಗುವುದು ಅಪಾಯ ಎಂದು ತಿಳಿದಿದ್ದರು, ಅದೃಷ್ಟವನ್ನು ಪರಿಗಣಿಸಿ ಆ ಅಪಾಯವನ್ನು ಸ್ವೀಕರಿಸಿದೆ. ಆದರೆ ಮುಖೇಶ್​ ಆತ್ಮಹತ್ಯೆ ಮಾಡಿಕೊಂಡ ಬಳಿಕ ತುಂಬಾ ಕಷ್ಟಕರವಾಗಿತ್ತು. ಈ ಪ್ರಪಂಚದಲ್ಲಿ ಅವರಿಲ್ಲ ಎಂಬುವುದನ್ನು ನಂಬಲು ಸಾಧ್ಯವಾಗಲಿಲ್ಲ. ಅವರ ಸಾವನ್ನು ಒಪ್ಪಿಕೊಳ್ಳುವುದ ನನ್ನಿಂದ ಆಗಲಿಲ್ಲ. ನಿರಾಕರಿಸುತ್ತಲೇ ಇದ್ದೆ ಆದರೆ ನಾನು ಆಘಾತಕ್ಕೊಳಗಾಗಿದ್ದೆ ಎಂದು ತಿಳಿಸಿದರು.

ನಾನು ಯಾವತ್ತು ತಪ್ಪು ಮಾಡಿಲ್ಲ. ಯಾರನ್ನೂ ನೋಯಿಸಿಲ್ಲ, ಆದರೂ ನನಗೆ ಮಾತ್ರ ಏಕೆ ಹೀಗಾಗುತ್ತಿದೆ ಎಂದು ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದೆ. ನಂತರ ನಾನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ, ಆದರೆ ಏನನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಈ ವಿಚಾರವಾಗಿ ಯಾರು ನಿಮ್ಮೊಂದಿಗೆ ವ್ಯವಹರಿಸುವುದಿಲ್ಲ, ನಿಮ್ಮೊಂದಿಗೆ ನೀವೆ ಹೋರಾಡಬೇಕು. ಅವಕಾಶ ನೀಡಿದರೆ ಇಡೀ ಘಟನೆಯು ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದರು. (ಏಜೆನ್ಸೀಸ್​)