ಬೆಂಗಳೂರು: ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಸಾಲುಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜತೆಗೆ ಫಿಟ್‌ನೆಸ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ನಟಿ ಇದೀಗ ತಮ್ಮ ಬ್ಯೂಟಿ ಸಿಕ್ರೇಟ್ನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿ ಕೊಂಡಿದ್ದಾರೆ.
ಐಸ್ ನೀರಿನಲ್ಲಿ ಪ್ರತಿದಿನ ಮೂರು ನಿಮಿಷ ಮುಖವನ್ನಿಟ್ಟುಕೊಳ್ಳಿ. ಹೀಗೆ ಮಾಡುವುದು ಸ್ವಲ್ಪ ಕಷ್ಟವೇ. ಆದರೆ ಪ್ರತಿದಿನವೂ ಹೀಗೆ ಮಾಡಿದರೆ ಆಗುವ ಅಭೂತಪೂರ್ವ ಬದಲಾವಣೆಯನ್ನು ನೀವು ನೋಡಬಹುದು. ಇದಕ್ಕೆ ನಾನು ಚಾಲೆಂಜ್ ಮಾಡುತ್ತೇನೆ ಎಂದು ಬರೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಸೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಅತೀ ಉದ್ದದ ಗಡ್ಡದಿಂದ ಗಿನ್ನಿಸ್ ದಾಖಲೆ ಬರೆದ ಮಹಿಳೆ
ವಿಡಿಯೋದಲ್ಲಿ ಏನಿದೆ?: ಐಸ್ ವಾಟರ್ ಫೇಶಿಯಲ್ ಮಾಡಲು ಒಂದು ಬೌಲ್ ನಲ್ಲಿ 10 ಐಸ್ ಕ್ಯೂಬ್ ತೆಗೆದುಕೊಂಡು ಬಟ್ಟಲಿಗೆ ಸ್ವಲ್ಪ ನೀರು ಸೇರಿಸಿ ಮತ್ತು ಐಸ್ ತುಂಡುಗಳು ಕರಗಲು ಬಿಡಬೇಕು. ನಂತರ ಅದರಲ್ಲಿ ಮುಖವನ್ನು ಅದ್ದಿ ತೆಗೆದರೆ ಪ್ರಯೋಜನಕಾರಿ ಎನ್ನುವಂತೆ ಅವರ ಈ ವಿಡಿಯೋ ತೋರಿಸುತ್ತದೆ.
ರಾಗಿಣಿ ದ್ವಿವೇದಿ ಅವರ ಬ್ಯೂಟಿ ಸಿಕ್ರೇಟ್ ಕೇಳಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಕೆಲವರು ಇದು ನಿಜಾನಾ..? ಸಮಸ್ಯೆ ಇಲ್ವಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಐಸ್ ವಾಟರ್ ಮುಖಕ್ಕೆ ಹಾಗೂ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಕಣ್ಣುಗಳ ಕೆಳಗೆ ಪಫಿನೆಸ್ ಮತ್ತು ಕಪ್ಪು ವಲಯ ನಿವಾರಣೆಗೆ ಐಸ್ ಕ್ಯೂಬ್ ಸಹಕಾರಿ ಎನ್ನಲಾಗುತ್ತದೆ. ನಿದ್ರೆಯ ಕೊರತೆಯಿಂದ ಕಣ್ಣುಗಳು ಊದಿಕೊಂಡಿದ್ದ ಸಂದರ್ಭದಲ್ಲಿ ಕಪ್ಪು ವರ್ತುಲ ಉಂಟಾಗುತ್ತದೆ. ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಐಸ್ ಫೇಶಿಯಲ್ ಮಾಡಬೇಕು ಎಂದು ಬ್ಯೂಟಿಷಿಯನ್ ಟಿಪ್ಸ್ ನೀಡುತ್ತಾರೆ.
ಇದನ್ನೂ ಓದಿ: 77ನೇ ಸ್ವಾತಂತ್ರ್ಯ ದಿನಾಚರಣೆಗೆ ವೇದಿಕೆ ಸಜ್ಜು; ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಐಸ್ ಫೇಶಿಯಲ್ ತ್ವಚೆಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಸನ್ ಬರ್ನ್, ಟ್ಯಾನಿಂಗ್, ರಕ್ತ ಪರಿಚಲನೆ ಹೆಚ್ಚಿಸಿ, ನೈಸರ್ಗಿಕವಾಗಿ ಹೊಳೆಯುವಂತೆ ಕಾಣುತ್ತದೆ ಎನ್ನಲಾಗುತ್ತದೆ.