ಮುಂಬೈ: ಬಾಲಿವುಡ್ ನಟಿ ನೋರಾ ಫತೇಹಿ ಬಾಲಿವುಡ್ನಲ್ಲಿ ಐಟಂ ಸಾಂಗ್ ಹೆಜ್ಜೆ ಹಾಕುವ ಮೂಲಕವಾಗಿ ಜನಮನ್ನಣೆ ಗಳಿಸಿದ್ದಾರೆ. ಬಾಲಿವುಡ್‌ನ ಬೆಲ್ಲಿ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಕಾರ್ಯಕ್ರವೊಂದರ ವೇದಿಕೆ ಮೇಲೆ ಹಾಟ್ ಡಾನ್ಸ್ ಮಾಡುವ ಮೂಲಕವಾಗಿ ಇಂದಿನ ಹಾಟ್ ಟಾಫಿಕ್ ಆಗಿದ್ದಾರೆ.
ನೂರ ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸ್ ಪ್ಲಸ್ 'ನಲ್ಲಿ ಕಾಣಿಸಿಕೊಂಡರು. ಈ ವೇಳೆ ನಟಿ ಮೈ ಚಳಿ ಬಿಟ್ಟು ಕುಣಿದು ಕುಪ್ಪಳಿಸಿದ್ದಾರೆ. ನಟಿಯ ಈ ಮಾದಕ ಡಾನ್ಸ್ಗೆ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಕೆಲವು ನಟಿ ಡಾನ್ಸ್ ಕುರಿತಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೆಮೋ ಡಿಸೋಜಾ, ಶಕ್ತಿ ಮೋಹನ್, ಪುನಿತ್ ಪಾಠಕ್ ಮತ್ತು ರಾಘವ್ ಜುಯಲ್ ತೀರ್ಪುಗಾರರಾಗಿರುವ ಈ ಶೋದಲ್ಲಿ ನೋರಾ ಅಶ್ಲೀಲ ಡ್ಯಾನ್ಸ್ ಮೂವ್ಸ್ ತೋರಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?: ದೇಹಕ್ಕೆ ಅಂಟಿಕೊಂಡ ಮೆಟಾಲಿಕ್ ಡ್ರೆಸ್‌ನಲ್ಲಿ ನೋರಾ ಫತೇಹಿ ತನ್ನ ಹಾಡಿನ ನಾಚ್ ಮೇರಿ ರಾಣಿ ಸಾಂಗ್ಗೆ ವೇದಿಕೆಯ ಪ್ರದರ್ಶನ ನೀಡಿದ್ದಾರೆ. ತನ್ನ ಸೊಂಟದ ಮೇಲೆ ನೀರನ್ನು ಸುರಿದುಕೊಳ್ಳುತ್ತಾ ವೇದಿಕೆಯ ಕಡೆ ತಿರುಗಿದಳು. ನೋರಾಳ ಈ ಸ್ಟೆಪ್‌ಗೆ ಅಲ್ಲಿದ್ದವರೆಲ್ಲ ಏದುಸಿರು ಬಿಡುವಂತೆ ಮಾಡಿದೆ.
ಅಶ್ಲೀಲ ಡ್ಯಾನ್ಸ್ ಮೂವ್ಸ್‌ನಿಂದಾಗಿ ಜನರ ಆಕ್ರೋಶಕ್ಕೆ ಒಳಗಾಗಿದ್ದಾರೆ. ಕುಟುಂಬ ನೋಡುವಂಥ ಶೋನಲ್ಲಿ ಹೇಗಿರಬೇಕು ಎಂಬ ಸೆನ್ಸ್ ಇಲ್ಲ ಎಂದು ನೆಟ್ಟಿಗರು ಬೈಯ್ಯುತ್ತಿದ್ದಾರೆ. ಆದ್ರೆ ಈ ಡಾನ್ಸ್ ಪಡ್ಡೆ ಹುಡುಗರ ನಿದ್ದೆ ಕೆಡೆಸಿದ್ದಂತೂ ಸುಳ್ಳಲ್ಲ.