ಮುಂಬೈ: ಶಾರೂಖ್ ಖಾನ್ ಜತೆಗೆ 'ಜವಾನ್' ಸಿನಿಮಾದಲ್ಲಿ ನಟಿಸುವ ಮುಖೇನ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ ಬಹುಭಾಷಾ ನಟಿ ನಯನತಾರ, ಬಾಲಿವುಡ್ನ ಸ್ಟಾರ್ ನಿರ್ದೇಶಕ ಮತ್ತು ನಿರ್ಮಾಪಕರ ಚಿತ್ರಗಳಿಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿಗಳು 'ಜವಾನ್' ರಿಲೀಸ್ ಆದ ಬೆನ್ನಲ್ಲೇ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಸುದ್ದಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಲೇಡಿ ಸೂಪರ್‌ಸ್ಟಾರ್ ಎಂದೇ ಖ್ಯಾತರಾದ ನಯನತಾರ 'ಜವಾನ್' ಸಕ್ಸಸ್ ನಂತರದಲ್ಲಿ ಮತ್ತೊಂದು ಬಾಲಿವುಡ್ ಚಿತ್ರಕ್ಕೆ ಸದ್ದಿಲದ್ದಂತೆ ಸಹಿ ಹಾಕಿದ್ದಾರೆ ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡಿದೆ. ಸಂಜಯ್ ಲೀಲಾ ಬನ್ಸಾಲಿಯವರ ಮುಂಬರುವ ಪ್ರಾಜೆಕ್ಟ್ ಬೈಜು ಬಾವ್ರಾದಲ್ಲಿ ನಾಯಕಿಯಾಗಿ ನಯನತಾರ ಆಯ್ಕೆಯಾಗಿದ್ದು, ಶೀಘ್ರವೇ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.
ಆದ್ರೆ, ಈ ಬಗ್ಗೆ ಇಲ್ಲಿಯವರೆಗೂ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ. ನಟಿಯ ಮುಂದಿನ ಬಾಲಿವುಡ್ ಚಿತ್ರಕ್ಕೆ ಸದ್ಯ ಅಭಿಮಾನಿಗಳು ತೀವ್ರ ಕುತೂಹಲದಿಂದ ನಿರೀಕ್ಷಿಸುತ್ತಿದ್ದು, ಯಾವಾಗ ಮಾಹಿತಿ ಕೊಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ವದಂತಿಗಳ ನಡುವೆ ನಯನತಾರ ಅಭಿನಯದ ತಮಿಳು ಚಿತ್ರ ಇರೈವನ್ ಇದೀಗ ತೆಲುಗಿನಲ್ಲಿ ದೇವರು ಎಂಬ ಶೀರ್ಷಿಕೆಯಡಿಯಲ್ಲಿ ಅಕ್ಟೋಬರ್ 13, 2023 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ,(ಏಜೆನ್ಸೀಸ್).