Actress Mohini: ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ “ಶ್ರೀರಾಮಚಂದ್ರ” ಚಿತ್ರದ ಮೂಲಕ ಕನ್ನಡ ಸಿನಿರಸಿಕರ ಮನಗೆದ್ದಿದ್ದ ನಟಿ ಮೋಹಿನಿ, ಕನ್ನಡದಲ್ಲಿ ಬೆರಳೆಣಿಕೆ ಚಿತ್ರಗಳಲ್ಲಿ ಅಭಿನಯಿಸಿದರೂ ಕೂಡ ಕನ್ನಡಿಗರಿಗೆ ಚಿರಪರಿಚಿತರೆ. 90ರ ದಶಕದಲ್ಲಿ ದಕ್ಷಿಣ ಭಾರತ ಸಿನಿಮಾಗಳಲ್ಲಿ ಮಿಂಚಿದ ನಟಿ ಮೋಹಿನಿ, ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲಿ ಹಲವಾರು ಸ್ಟಾರ್ಗಳೊಂದಿಗೆ ಕೆಲಸ ಮಾಡಿರುವ ಸ್ಟಾರ್ ಹೀರೋಯಿನ್. 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ, ಚಿತ್ರಪ್ರೇಮಿಗಳ ಮನಗೆದ್ದಿರುವ ಈಕೆ, ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ತಮಗಾದ ಕಹಿ ಅನುಭವವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: 6,6,6,6,6,6… ಏಷ್ಯಾಕಪ್ ಟಿ20 ಇತಿಹಾಸದಲ್ಲಿ ಅತಿಹೆಚ್ಚು ರನ್ ದಾಖಲಿಸಿದ ಬ್ಯಾಟ್ಸ್ಮನ್ಗಳಿವರು | Asia Cup T20
"'ಅವಲ್ ವಿಕಟನ್' ಎಂಬ ತಮಿಳು ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ವೃತ್ತಿಜೀವನದಲ್ಲಿ ನಡೆದ ಅತ್ಯಂತ ಅಹಿತಕರ ಅನುಭವಗಳಲ್ಲಿ ಇದೂ ಒಂದು ಎಂದು ತಿಳಿಸಿದ್ದಾರೆ. ತಮಿಳಿನ 'ಕಣ್ಮಣಿ' ಚಿತ್ರದಲ್ಲಿನ 'ಉಡಲ್ ತಝುವಾ' ಹಾಡಿನ ಚಿತ್ರೀಕರಣದ ಸಂದರ್ಭ ಅದು. ಈ ಹಾಡಿಗಾಗಿ ನಾನು ಬಿಕಿನಿ ಧರಿಸಬೇಕಾಯಿತು. ಸ್ವಿಮ್ ಸ್ಯೂಟ್ ಹಾಕಿಕೊಂಡು ಮಾಡಬೇಕು ಎಂಬ ವಿಷಯ ಅಸಲಿಗೆ ನನ್ನ ಗಮನಕ್ಕೆ ಬಂದೇ ಇರಲಿಲ್ಲ" ಎಂದರು.
"ನನ್ನ ಒಪ್ಪಿಗೆಯಿಲ್ಲದೆ, ನನ್ನನ್ನು ಅತಿಯಾಗಿ ಗ್ಲಾಮರಸ್ ಆಗಿ ತೋರಿಸಲಾದ ಏಕೈಕ ಚಿತ್ರವದು. ನನಗೆ ಈಜುವುದು ಹೇಗೆಂದೂ ಸಹ ಗೊತ್ತಿಲ್ಲ. ಈ ಹಾಡಿನಲ್ಲಿ ಕಾಣಿಸಿಕೊಳ್ಳಲು ನಾನು ಒಪ್ಪಲಿಲ್ಲ. ಆದರೆ, ಚಿತ್ರತಂಡ ನನ್ನಿಂದ ದೃಶ್ಯವನ್ನು ಮಾಡುವಂತೆ ಒತ್ತಾಯಿಸಿತು. ಇದಕ್ಕಾಗಿ ಅರ್ಧ ದಿನ ಶೂಟಿಂಗ್ ಮಾಡಿ, ಅವರು ಕೇಳಿದ್ದನ್ನು ಮಾಡಿಕೊಟ್ಟೆ. ನಂತರ, ಅದೇ ದೃಶ್ಯವನ್ನು ಊಟಿಯಲ್ಲಿ ಚಿತ್ರೀಕರಿಸಬೇಕೆಂದು ಅವರು ಹೇಳಿದಾಗ, ಯಾವುದೇ ಕಾರಣಕ್ಕೂ ಮಾಡುವುದಿಲ್ಲ ಎಂದು ನಿರಾಕರಿಸಿದೆ" ಎಂದರು.
"ಹೀಗೆಂದ ಕೂಡಲೇ ಅವರು, ಹಾಗಿದ್ದರೆ, ಚಿತ್ರೀಕರಣ ಮುಂದುವರಿಯುವುದಿಲ್ಲ ಎಂದರು. ನಾನು, 'ಅದು ನಿಮ್ಮ ಸಮಸ್ಯೆ, ನನ್ನದಲ್ಲ. ನೀವು ಮೊದಲು ನನ್ನನ್ನು ಒತ್ತಾಯಿಸಿದ್ದು ಸರಿಯಲ್ಲ. ಇದೆಲ್ಲವೂ ಈಗಾಗಲೇ ಮುಗಿದಿದೆ' ಎಂದು ಹೇಳಿದೆ. ಪೂರ್ಣ ಒಪ್ಪಿಗೆಯಿಲ್ಲದೆ ನಾನು ನಟಿಸಿದ ಏಕೈಕ ಚಿತ್ರವೆಂದರೆ ಅದು 'ಕಣ್ಮಣಿ' ಮಾತ್ರ" ಎಂದಿದ್ದಾರೆ. ನಟಿಯ ಅಭಿನಯಕ್ಕಿಂತ ಹುಟ್ಟಿಕೊಂಡ ವಿವಾದಗಳೇ ಅಂದು ಭಾರೀ ಚರ್ಚೆಗೆ ಗ್ರಾಸವಾಗಿತ್ತು,(ಏಜೆನ್ಸೀಸ್).