ಬೆಂಗಳೂರು: ಕಿರುತೆರೆಯ ಜನಪ್ರಿಯ ಧಾರಾವಾಹಿಯಾದ ಜೊತೆ ಜೊತೆಯಲ್ಲಿ ಸೀರಿಯಲ್ ಮುಗಿಯುತ್ತಿದ್ದಂತೆ ನಟಿ ಮೇಘಾ ಶೆಟ್ಟಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾ ತುಂಬಾ ವೈರಲ್ ಆಗಿವೆ.
ವೈಟ್ ಆ್ಯಂಡ್ ವೈಟ್ ಡ್ರೆಸ್ನಲ್ಲಿ ಕಾಣಿಸಿಕೊಂಡಿರುವ ಮೇಘಾ ಶೆಟ್ಟಿ ಅವರು ಹಾಟ್ ಫೋಟೋಸ್ ಕೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದೆ.
ಮೇಘಾ ಶೆಟ್ಟಿ, 'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರಿಗೆ ಪರಿಚಯವಾದ ಚೆಲುವೆ. ಮೊದಲ ಧಾರಾವಾಹಿ ಮೂಲಕವೇ ಮೇಘಾ ಶೆಟ್ಟಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಆರೂರ್ ಜಗದೀಶ್ ನಿರ್ದೇಶನದ ಈ ಕೌಟುಂಬಿಕ ಧಾರಾವಾಹಿ ಮೂಲಕ ಮನೆಮಾತಾಗಿರುವ ನಟ ಕಿರುತೆರೆ ಧಾರಾವಾಹಿ ಮತ್ತು ಕಿರುತೆರೆಗೆ ವಿದಾಯ ಹೇಳಿದ್ದಾರೆ. ಜೊತೆ ಜೊತೆಯಲ್ಲಿ ಮೇಘಾ ಶೆಟ್ಟಿ ಜೆತೆಗಿನ ನಾಲ್ಕು ವರ್ಷಗಳ ಪಯಣ ಮುಗಿದಿದೆ. ಈ ಹಿಂದೆ ಗಣೇಶ್ ಜೊತೆ ಟ್ರಿಬಲ್ ರೈಡಿಂಗ್ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಮೇಘಾ ನಂತರ ಕೃಷ್ಣ ಜೊತೆ ದಿಲ್ ಪಸಂದ್ ಚಿತ್ರದಲ್ಲಿ ನಟಿಸಿದರು. ಇದೀಗ ಹೊಸ ಸಿನಿಮಾ ಮೂಲಕವಾಗಿ ಸಿನಿಪ್ರಿಯರನ್ನು ರಂಜಿಸಲು ಸಿದ್ಧರಾಗಿದ್ದಾರೆ.