More

    ಬಸ್ಸುಗಳಲ್ಲಿ 2000 ರೂ. ನೋಟುಗಳನ್ನು ಸ್ವೀಕರಿಸಲಾಗುತ್ತದೆ; ಬಿಎಂಟಿ‌ಸಿ ಸ್ಪಷ್ಟನೆ

    ಬೆಂಗಳೂರು: ದೇಶಾದ್ಯಂತ ಎರಡು ಸಾವಿರ ರೂಪಾಯಿ ನೋಟ್‌ ಚಲಾವಣೆಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಈ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ. 2000 ರೂ. ನೋಟುಗಳನ್ನು ಇನ್ನು ಯಾವುದೇ ವ್ಯವಹಾರಗಳಲ್ಲಿ ಬಳಸುವಂತಿಲ್ವಾ? ಬಸ್​ಗಳಲ್ಲಿ ತೆಗೆದುಕೊಳ್ಳುತ್ತಾರಾ? ಎಂದು ಗೊಂದಲುಗಳು ಮೂಡಿವೆ. ಹೀಗಾಗಿ ಬಿಎಂಟಿಸಿ ಒಂದು ಪ್ರಕಟಣೆಯನ್ನು ಹೊರಡಿಸಿದೆ.

    ಪ್ರಕಟಣೆಯಲ್ಲಿ ಏನಿದೆ?:
    ಬಿಎಂ‌ಟಿಸಿ ಕೇಂದ್ರ ಕಛೇರಿಯಿಂದ ಬಸ್ಸಿನಲ್ಲಿ ನಿರ್ವಾಹಕರು ರೂ. 2000 ನೋಟುಗಳನ್ನು ತೆಗೆದುಕೊಳ್ಳಬಾರದು ಎಂದು ಯಾವುದೇ ಆದೇಶ ಹೊರಡಿಸಿರುವುದಿಲ್ಲ. ಹೊಸ ಕೋಟೆ ಘಟಕದಿಂದ ಮಾತ್ರ ಈ ರೀತಿ ತಪ್ಪಾದ ಆದೇಶ ನೀಡಲಾಗಿದ್ದು, ತದನಂತರ ಈ ಆದೇಶವನ್ನು ಹಿಂಪಡೆಯಲಾಗಿದೆ. ಬಿಎಂಟಿ‌ಸಿ ಬಸ್ಸುಗಳಲ್ಲಿ ರೂ 2000 ನೋಟುಗಳನ್ನು ಸ್ವೀಕರಿಸಲಾಗುತ್ತದೆ.

    ಬಿಎಂಟಿಸಿ ಕೇಂದ್ರ ಕಚೇರಿ ಸಿಬ್ಬಂದಿಗೆ ರೂ. ತೆಗೆದುಕೊಳ್ಳದಂತೆ ಯಾವುದೇ ಆದೇಶ ನೀಡಿಲ್ಲ. 2000 ನೋಟುಗಳನ್ನು ಬಸ್‌ಗಳಲ್ಲಿ ನಾವು ಸ್ವೀಕರಿಸುತ್ತಿದ್ದೇವೆ ಎಂಬುದನ್ನು ದಯವಿಟ್ಟು ಗಮನಿಸಿ ಎಂದು ತಿಳಿಸಲಾಗಿದೆ.

    ಇದನ್ನೂ ಓದಿ: ಫ್ಯಾಷನ್ ಉದ್ಯಮಿಯೊಂದಿಗೆ ಎರಡನೇ ಮದುವೆಯಾದ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ!

    ದೇಶಾದ್ಯಂತ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಈ ವರ್ಷ ಸೆಪ್ಟೆಂಬರ್‌ 30ವರೆಗೂ ನೋಟು ವಿನಿಮಯಕ್ಕೆ ಕಾಲಾವಕಾಶ ನೀಡಲಾಗಿದೆ. ಮೇ 23 ರಿಂದ ಸಮೀಪದ ಬ್ಯಾಂಕ್‌ಗಳಿಗೆ ತೆರಳಿ ಸಾರ್ವಜನಿಕರು ನೋಟು ಬದಲಾವಣೆ ಮಾಡಿಕೊಳ್ಳಬಹುದು. ಇದಕ್ಕಾಗಿ ಬ್ಯಾಂಕ್‌ಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಅಕ್ಟೋಬರ್‌ 1 ರಿಂದ ಈ ನೋಟುಗಳು ಚಲಾವಣೆಯಲ್ಲಿ ಇರುವುದಿಲ್ಲ. ಹೀಗಾಗಿ, ಸೆ.30ರ ಒಳಗೆ ಸಾರ್ವಜನಿಕರು ಬ್ಯಾಂಕ್‌ಗಳಿಗೆ ತೆರಳಿ ನೋಟು ಬದಲಾವಣೆ ಮಾಡಿಕೊಳ್ಳಬೇಕು ” ಎಂದು ಸೂಚನೆ ನೀಡಿದೆ.

    ನನ್ನೊಬ್ಬನನ್ನ ಸೋಲಿಸಲು ಹೋಗಿ ಬಿಜೆಪಿ ತಾನೇ ಸೋತಿದೆ; ಜಗದೀಶ್ ಶೆಟ್ಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts