ನ್ಯೂಸ್

ಅವ್ರು ಹೇಳಿದ್ದಕ್ಕೆ ಮಾಡಿದೆ, ಆದ್ರೆ ಈಗ ಪಶ್ಚಾತ್ತಾಪ ಪಡುತ್ತಿದ್ದೇನೆ; ನಟಿ ಕಿರಣ್​ ರಾಥೋಡ್

ಮುಂಬೈ: ಬಹುಭಾಷಾ ನಟಿ ಕಿರಣ್​ ರಾಥೋಡ್.  ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದ ಈ ನಟಿ ಕನ್ನಡ ಸಿನಿಮಾ ಇಂಡಸ್ಟ್ರಿಗೂ ಚಿರಪರಿಚಿತರು. ಈ ನಟಿ ತನಗೆ ಬಂದಿದ್ದ ಅವಕಾಶಗಳ ಕುರಿತಾಗಿ ಮಾತನಾಡಿದ್ದಾರೆ.

ಕ್ಷಣ ಕ್ಷಣ, ಗನ್​ ಮತ್ತು ಮಾಣಿಕ್ಯ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಿರಣ್​ ರಾಥೋಡ್ ಕನ್ನಡಿಗರಿಗೂ ಪರಿಚಿತರು. ಒಂದು ಹಂತದಲ್ಲಿ ಕಿರಣ್​ ಸ್ಟಾರ್​ ನಟರ ಜತೆ ತೆರೆ ಹಂಚಿಕೊಳ್ಳುತ್ತಿದ್ದರು. ಕೆಲವು ಬಾರಿ ಸಿನಿಮಾದಲ್ಲಿ ಒಂದೇ ಹಾಡಿನಲ್ಲಿ ಹಾಗೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಿರುವಾಗ 2016ರ ನಂತರ ಅವರಿಗೆ ದೊಡ್ಡ ಸಿನಿಮಾ ಅವಕಾಶಗಳು ಸಿಗಲಿಲ್ಲ. ಅವರು ಎಷ್ಟು ಆಕರ್ಷಕವಾಗಿದ್ದರೂ, ಅವರಿಗೆ ಹೆಚ್ಚಿನ ಚಲನಚಿತ್ರ ಅವಕಾಶಗಳು ಬರುವುದಿಲ್ಲ. ಈ ಕುರಿತಾಗಿ ನಟಿ ಈ ಹಿಂದೆ ಸಂದರ್ಶಮದಲ್ಲಿ ಬೇಸರ ವ್ಯಕ್ತಪಡಿಸಿದ್ದರು.

2015ರಲ್ಲಿ ಖ್ಯಾತ ನಿರ್ದೇಶಕ ಸುಂದರ್ ಸಿ ನಿರ್ದೇಶನದಲ್ಲಿ ತೆರೆಕಂಡ ಅಂಬಲ ಸಿನಿಮಾದ ಬಗ್ಗೆ ಕಿರಣ್ ಖಾಸಗಿ ಯೂಟ್ಯೂಬ್ ಚಾನೆಲ್ ನಲ್ಲಿ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ.

ನಿರ್ದೇಶಕ ಸುಂದರ್ ಸಿ ನನಗೆ ಅಣ್ಣನಿದ್ದಂತೆ, ಅವರಿಂದಲೇ ನಾನು ಅಂಬಾಲ ಸಿನಿಮಾದಲ್ಲಿ  ನಟಿಸಿದ್ದೇನೆ. ಕೆಲವು ಸಿನಿಮಾಗಳಲ್ಲಿ ಪಾತ್ರದಲ್ಲಿ ಸೆಟ್ ಪ್ರಾಪರ್ಟಿಯಂತೆ ಬಂದು ಹೋಗುತ್ತಿದ್ದೆ. ಅವರು  ಹೇಳಿದ್ದಕ್ಕೆ ನಾನು ಆ ಪಾತ್ರ ಮಾಡಿದ್ದೇನೆ. ನಿಜವಾಗಿ ಆ ಸಿನಿಮಾ ನನಗೆ ತುಂಬಾ ದುಃಖ ಕೊಟ್ಟಿತು. ಸುಂದರ್ ಸಿ ಆ ಪಾತ್ರಕ್ಕೆ ಕೈ ಹಾಕುವಂತೆ ಹೇಳಿದ್ದರೂ ಆ ಚಿತ್ರದಲ್ಲಿ ನಟಿಸಿದ್ದಕ್ಕೆ ಪಶ್ಚಾತ್ತಾಪ ಪಡುತ್ತೇನೆ ಎಂದಿದ್ದಾರೆ.

ನನ್ನ ವೈವಾಹಿಕ ಜೀವನವೂ ಅಷ್ಟೊಂದು ಚೆನ್ನಾಗಿಲ್ಲ , ಪ್ರೀತಿಯನ್ನು ಮೂರ್ಖತನದಿಂದ ನಂಬುವ ಮಹಿಳೆಯರಲ್ಲಿ ನಾನೂ ಒಬ್ಬಳು ಎಂದು ಹೇಳಿದ್ದಾರೆ.

ತಮ್ಮ ಬೋಲ್ಡ್​ ಪಾತ್ರಗಳಿಂದಲೂ ಕಿರಣ್​ ಖ್ಯಾತಿ ಪಡೆದಿದ್ದರು. ಸಿನಿಮಾ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವಾಗಲೇ ಕಿರಣ್​ ಇದ್ದಕ್ಕಿದ್ದಂತೆ ನಾಪತ್ತೆಯಾದರು. ಅಂದಿನಿಂದ ಸಿನಿಮಾ ಅವಕಾಶಗಳು ಸಹ ಕಿರಣ್​ ಕೈತಪ್ಪಿ ಹೋದವು. 2016ರಲ್ಲಿ ತೆರೆಕಂಡ ‘ಯೋಳ ಊಂಜಾಲ್’ ಚಿತ್ರದ ನಂತರ ಕಳೆದ 8 ವರ್ಷಗಳಿಂದ ಸಿನಿಮಾದಲ್ಲಿ ನಟಿಸಿರಲಿಲ್ಲ.