Khushboo : ಕನ್ನಡ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ಯಾರಿಗೆ ಗೊತ್ತಿಲ್ಲ ಹೇಳಿ. ಸದಾ ಒಂದಂಲ್ಲೊಂದು ಸುದ್ದಿಯಲ್ಲಿರುವ ಖುಷ್ಬೂ, ಇದೀಗ ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಅವರ ತಂದೆ ವೀರಸ್ವಾಮಿ ಸಹಾಯ ಮಾಡಿದ್ದರ ಬಗ್ಗೆ ಸಂದಶರ್ನವೊಂದರಲ್ಲಿ ಗದ್ಗದಿತರಾಗಿದ್ದಾರೆ. ನಟಿ ಮಾತನಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು, ರವಿಚಂದ್ರನ್ ಮತ್ತು ಖುಷ್ಬೂ 90ರ ದಶಕದ ಜೋಡಿ. ರಣಧೀರ ಮತ್ತು ಅಂಜದಗಂಡು ಸಿನಿಮಾಗಳ ಮೂಲಕ ಕನ್ನಡ ಜನತೆಗೆ ಮೆನೆ ಮಾತಾದ ಖುಷ್ಬೂ, ಇಂದಿಗೂ ಅವರ ಜೋಡಿ ಮರೆಯುವಂತಿಲ್ಲ. ಬರಿ ಸಿನಿಮಾದಲ್ಲಿ ಮಾತ್ರವಲ್ಲ, ಅದಂರಿಂದಾಚೆಗೂ ರವಿಚಂದ್ರನ್ ಮತ್ತು ಖುಷ್ಬೂ ಒಳ್ಳೆಯ ಸ್ನೇಹಿತರು. ಸ್ನೇಹದ ಬಗ್ಗೆ ಈ ಮುಂಚೆ ರವಿಚಂದ್ರನ್ ಹಾಗೂ ಖುಷ್ಬೂ ಹಲವು ಬಾರಿ ಹೇಳಿಕೊಂಡಿದ್ದಾರೆ. ಇದೀಗ ರವಿಚಂದ್ರನ್ ಮತ್ತು ಅವರ ತಂದೆ ವೀರಸ್ವಾಮಿ ಸಹಾಯ ಮಾಡಿದ್ದರ ಬಗ್ಗೆ ಸಂದಶರ್ನವೊಂದರಲ್ಲಿ ಖುಷ್ಬೂ ಹೇಳಿಕೊಂಡಿದ್ದಾರೆ.
ವೀರಸ್ವಾಮಿ ಸಹಾಯ ಬಗ್ಗೆ ಮಾತನಾಡಿರುವ ಖುಷ್ಬೂ, '' ನನಗೆ ಅಗ ಇನ್ನು 17 ವರ್ಷ ಇದ್ದವು. ಮನೆಯಲ್ಲಿ ನನ್ನ ತಾಯಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇತ್ತ ಶೂಟಿಂಗ್ ಕೂಡ ಮಿಸ್ ಮಾಡುವಂತಿರಲಿಲ್ಲ. ಹೇಗೊ ಮಾಡಿ ತಾನೊಬ್ಬಳೇ ತಾಯಿಯನ್ನು ಆಸ್ಪತ್ರೆಗೆ ದಾಖಲು ಮಾಡಿ ಶೂಟಿಂಗ್ಗೆ ಹೊರಟು ಹೋದೆ. ಅಂದು ಆಸ್ಪತ್ರೆಯ ಬಿಲ್ 36 ಸಾವಿರ ರೂ. ಆಗಿತ್ತು. ನನ್ನ ಬಳಿ ದುಡ್ಡು ಕೂಡ ಇರಲಿಲ್ಲ. ಸಿದಾ ಶೂಟಿಂಗ್ ಸ್ಪಾಟ್ಗೆ ಹೋದೆ. ಅಲ್ಲಿ ಸುಮ್ನೆ ಯಾರ ಬಳಿ ಮಾತನಾಡದೇ ಕೂತೆ. ಇದನ್ನು ಗಮನಿಸಿದ ರವಿಚಂದ್ರನ್ ಮತ್ತು ಅವರ ತಂದೆ ವೀರಸ್ವಾಮಿ, ನನ್ನ ವಿಚಾರಿಸುವಂತೆ ರವಿಚಂದ್ರನ್ ಅವರನ್ನು ಕಳುಹಿಸಿದರು. ನನ್ನ ಕಷ್ಟದ ಸಮಯನ್ನು ಆಗ ನಾನು ಹಂಚಿಕೊಂಡೆ. ಶೂಟಿಂಗ್ ಮುಗಿಯುವ ಮುಂಚೆ ನನ್ನ ತಾಯಿಯನ್ನು ಆಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡಿಕೊಂಡು ಬಂದಿದ್ದರು.
ನಂತರ ಶೂಟಿಂಗ್ ಸೆಟ್ ನಲ್ಲಿ ನನ್ನ ಬಳಿ ಬಂದ ರವಿಚಂದ್ರನ್ ಮತ್ತು ವೀರಸ್ವಾಮಿ ನಿಮ್ಮ ತಾಯಿಗೆ ಹುಷಾರಿಲ್ಲದ ವಿಚಾರವನ್ನು ಏಕೆ ತಿಳಿಸಲಿಲ್ಲ ಎಂದು ಬೈದರಂತೆ. ಆಗ ನನಗೆ ಯಾರ ಹತ್ರ ನನ್ನ ಕಷ್ಟ ಹೇಳಿಕೊಳ್ಳಬೇಕು. ಹಣ ಕೇಳುವುದು ಹೇಗೆ ಎಂದೇ ಗೊತ್ತಿರಲಿಲ್ಲ. ಏಕೆಂದರೆ ಆಗ ನಾನು 17 ವರ್ಷದ ಹುಡುಗಿ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಅವರ ತಂದೆ ವೀರಸ್ವಾಮಿ ಸಹಾಯ ಮಾಡಿದ್ದರ ಬಗ್ಗೆ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.