ಬೆಂಗಳೂರು: ಕನ್ನಡ ಚಿತ್ರರಂಗದ ಹೆಸರಾಂತ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ(44) ಸಾವಿಗೆ ನಟಿ, ಮಾಜಿ ಸಚಿವೆ ಜಯಮಾಲಾ ಸಂತಾಪ ಸೂಚಿಸಿದ್ದಾರೆ.
ಸ್ಪಂದನಾ ಮತ್ತು ವಿಜಯ್ನನ್ನೂ ನೋಡಿದಾಗಲೆಲ್ಲಾ ಆದರ್ಶ ದಂಪತಿ ಎನ್ನಿಸುತ್ತಿದ್ದರೂ. ಇವರ ಅನ್ಯೋನ್ಯತೆ ನೋಡಿ ತುಂಬಾ ಖುಷಿಯಾಗುತ್ತಿತ್ತು. ಅವರ ಕುಟುಂಬದವರೂ ಯಾರಿಗೂ ಕೇಡು ಬಗೆದವರಲ್ಲ. ದೇವರು ಈ ರೀತಿ ಮಾಡಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಸ್ಪಂದನಾ ಅವರ ತಾಯಿ ಬಳಿ ಮಾತನಾಡುವಾಗ ವಿಜಯ್ ಇನ್ನು ಮುಂದೆ ಬದುಕುತ್ತಾನೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದ್ದು ಕರಳು ಹಿಂಡುವಂತೆ ಆಗಿದೆ. ದೇವರಿಗೆ ಒಳ್ಳೆಯವರನ್ನೂ ತುಂಬಾ ಇಷ್ಟಪಡುತ್ತಾನೆ ಅಂತರವನ್ನು ಬೇಗ ಕರೆದುಕೊಳ್ಳುತ್ತಾನೆ ಎಂದು ಭಾವುಕರಾಗಿದ್ದಾರೆ.
ಸ್ಪಂದನಾ ಸಾವಿನ ನೋವನ್ನೂ ಭರಿಸುವ ಶಕ್ತಿ ಆ ಪರಮಾತ್ಮ ಅವರ ಕುಟುಂಬಸ್ಥರಿಗೆ ನೀಡಲಿ. ನಮ್ಮ ಮಗು ಅದು ದೇವರನ್ನೂ ಶಪಿಸುವುದೋ ಅಥವಾ ನಾವೂ ಪಡೆದುಕೊಂಡೂ ಬಂದಿರುವ ಆಯಸ್ಸು ಇಷ್ಟೇನಾ ಎಂದು ಸ್ಪಂದನಾ ನಿಧನದ ಕುರಿತು ನಟಿ, ಮಾಜಿ ಸಚಿವೆ ಜಯಮಾಲಾ ಸಂತಾಪ ಸೂಚಿಸಿದ್ದಾರೆ.