ನ್ಯೂಸ್

ಮನೆಕೆಲಸದವಳಿಗೆ ಕಿರುಕುಳ: ನಟಿ ಡಿಂಪಲ್​ ಹಯಾತಿ ದಂಪತಿ ವಿರುದ್ಧ ಕೇಸ್​ ದಾಖಲು! Dimple Hayathi

Dimple Hayathi: ಮನೆ ಕೆಲಸದಾಕೆಗೆ ಕಿರುಕುಳ, ಹಲ್ಲೆ ಮತ್ತು ನಿಂದನೆಯ ಆರೋಪದ ಹಿನ್ನಲೆ ತಮಿಳು ಮತ್ತು ತೆಲಗು ಚಿತ್ರನಟಿ ಟಿ ಡಿಂಪಲ್​ ಹಯಾತಿ ಮತ್ತು ಆಕೆಯ ಪತಿ ಡೇವಿಡ್​ ವಿರುದ್ಧ ಹೈದ್ರಬಾದ್​ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಸುದ್ದಿಮೂಲಗಳ ಪ್ರಕಾರ, ದೂರುದಾರೆ ಒಡಿಶಾದ ರಾಯಗಡದ ನಿವಾಸಿ ಪ್ರಿಯಾಂಕ (22) ಸೆಪ್ಟೆಂಬರ್​ 22 ರಂದು ಕೆಲಸ ಹರಿಸಿ ಹೈದ್ರಬಾದ್​ಗೆ ಬಂದಿದ್ದು, ಅದೇ ದಿನ ಅವರನ್ನು ಶೈಕ್​ಪೇಟೆಯ ವಂಶಿರಾವ್​ ಅವರ ವೆಸ್ಟ್​ವುಡ್​ ಅಪಾರ್ಟ್​ಮೆಂಟ್​ನಲ್ಲಿರುವ ಡಿಂಪಲ್​ ಹಯಾತಿ ಮನೆಗೆ ಸೇವಕಿಯಾಗಿ ಸೇರಿಕೊಂಡಳು ಎಂದು ತಿಳಿಸಿದ್ದಾರೆ.

ಪ್ರಿಯಾಂಕ ತಮ್ಮ ಹೇಳಿಕೆಯಲ್ಲಿ ಕೆಲಸಕ್ಕೆ ಸೇರಿದಾಗಿನಿಂದಲೂ ನಿರಂತರ ಅವಮಾನಕ್ಕೊಳಗಾಗಿದ್ದೆ, ನನಗೆ ಸರಿಯಾದ ಆಹಾರವನ್ನು ನೀಡುತ್ತಿರಲಿಲ್ಲ. ಪದೇ ಪದೇ ನಿಂದಿಸಲಾಗುತ್ತಿತ್ತು. ಇನ್ನು ಅನೇಕ ರೀತಿಯಲ್ಲಿ ಅವಮಾನಿಸಲಾಗುತ್ತಿತ್ತು ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ಸೋಮವಾರ (ಸೆ.29) ಅವರಿಬ್ಬರ ನಡುವೆ ವಿವಾದ ಭುಗಿಲೆದ್ದಿತು. ಈ ವಿವಾದವನ್ನು ರೆಕಾರ್ಡ್​ ಮಾಡಲು ಪ್ರಯತ್ನಿಸಿದಾಗ ನನ್ನ ಮೊಬೈಲ್​ನ್ನು ಕಸಿದುಕೊಂಡರು ಹಾಗೆ ನನ್ನ ತಂದೆ-ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು, ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಜಗಳದಲ್ಲಿ ನನ್ನ ಬಟ್ಟೆ ಕೂಡ ಹರಿದು ಹೋಗಿದ್ದವು. ಕೂದಲೆಳೆಯಲ್ಲಿ ನಾನು ತಪ್ಪಿಸಿಕೊಂಡು ಬಂದಿದ್ದೇನೆ ಎಂದು ಹೇಳಿಕೆ ನೀಡಿದ್ದಾಳೆ.

ಆಕೆಯ ದೂರಿನ ಆಧಾರದ ಮೇಲೆ, ಫಿಲ್ಮ್‌ನಗರ ಪೊಲೀಸರು ಐಪಿಸಿ ಸೆಕ್ಷನ್ 74, 79, 351(2), ಮತ್ತು 324(2) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಸೂಕ್ತ ತನಿಖೆಯೊಂದಿಗೆ ವಿಚಾರಣೆ ನಡೆಸುತ್ತಿದ್ದಾರೆ.

ಡಿಂಪಲ್ ಹಯಾತಿ ಯಾರು?

27 ವರ್ಷದ ನಟಿ 2017 ರಲ್ಲಿ ತೆಲುಗು ಚಿತ್ರ ಗಲ್ಫ್ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. 2021 ರಲ್ಲಿ, ಅವರು ಆನಂದ್ ಎಲ್ ರಾಯ್ ಅವರ ಅತ್ರಂಗಿ ರೇ ಚಿತ್ರದಲ್ಲಿ ನಟಿಸಿದರು. ಈ ಚಿತ್ರದಲ್ಲಿ ಧನುಷ್, ಸಾರಾ ಅಲಿ ಖಾನ್ ಮತ್ತು ಅಕ್ಷಯ್ ಕುಮಾರ್ ಕೂಡ ನಟಿಸಿದ್ದಾರೆ. ಚಿತ್ರದಲ್ಲಿ, ಅವರು ಧನುಷ್ ಅವರ ಮಾಜಿ ನಿಶ್ಚಿತ ವರ ಮಂದಾಕಿನಿ ಪಾತ್ರವನ್ನು ನಿರ್ವಹಿಸಿದ್ದಾರೆ. (ಏಜೆನ್ಸೀಸ್​)