ನ್ಯೂಸ್

ಆಸ್ಟ್ರೇಲಿಯಾ ಪೌರತ್ವ ಪಡೆದ ಚಿಂಗಾರಿ ಸಿನಿಮಾ ನಟಿ ದೀಪಿಕಾ ಕಾಮಯ್ಯ

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ದೀಪಿಕಾ ಕಾಮಯ್ಯ ಅವರು ಬೆರಳೆಣಿಕೆಯಷ್ಟು ಸಿನಿಮಾದಲ್ಲಿ ನಟಿಸಿದ್ದರು ತನ್ನದೇ ಆಗಿರುವ ಅಭಿಮಾನಿ ಬಳಗಳವನ್ನು ಸಂಪಾದಿಸಿಕೊಂಡಿದ್ದಾರೆ. ಇದೀಗ ಈ ನಟಿ ಆಸ್ಟ್ರೇಲಿಯಾ ಪೌರತ್ವ ಪಡೆಯುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ. ಈ ವಿಚಾರವನ್ನು ದೀಪಿಕಾ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕೆಲವು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದೇನೆ. ಇಲ್ಲಿನ ಸರ್ಕಾರ ನನಗೆ ಈ ದೇಶದ ಪೌರತ್ವ ನೀಡಿದೆ ಎಂದು ದೀಪಿಕಾ ಸಂತೋಷ ವ್ಯಕ್ತಪಡಿಸಿದ್ದಾರೆ. ಸಿಟಿಜನ್‌ಶಿಪ್‌ ಕಾರ್ಯಕ್ರಮದ ಫೋಟೋಗಳನ್ನು ದೀಪಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಹೌದು ಚಿಂಗಾರಿ ಚಿತ್ರದಲ್ಲಿ ದರ್ಶನ್‌ಗೆ ನಾಯಕಿಯಾಗಿ ನಟಿಸುವ ಮೂಲಕ ಈಕೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೊತೆ ಚಿಂಗಾರಿ, ಜಗ್ಗುದಾದ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ದೀಪಿಕಾ ಕಾಮಯ್ಯ ಆಸ್ಟ್ರೇಲಿಯಾ ದೇಶದ ಪೌರತ್ವ ಪಡೆದಿದ್ದಾರೆ. ಈ ಕುರಿತಾದ ಕೆಲವು ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿವೆ.

2017 ರಲ್ಲಿ ದೀಪಿಕಾ ಅವರು ಸುಮಂತ್‌ ಗೋಪಿ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರದ್ದು ಲವ್‌ ಮ್ಯಾರೇಜ್‌ ಆಗಿದೆ. ಸುಮಂತ್‌ ಗೋಪಿ ಆಸ್ಟ್ರೇಲಿಯಾದಲ್ಲಿ ಉದ್ಯೋಗದಲ್ಲಿದ್ದು, ಮದುವೆ ನಂತರ ದೀಪಿಕಾ ಪತಿ ಜತೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. 5 ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ದೀಪಿಕಾಗೆ ಅಲ್ಲಿನ ಸರ್ಕಾರ ತನ್ನ ದೇಶದ ಪೌರತ್ವ ನೀಡಿದೆ.