ಬೆಂಗಳೂರು; ನಟಿ ಭಾವನಾ ರಾಮಣ್ಣ ಅವರು ಐವಿಎಫ್ ಚಿಕಿತ್ಸೆ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಲು ಸಜ್ಜಾಗಿದ್ದರು. ಆದರೆ ದುರಾದೃಷ್ಟವಶತ್ ಇದೀಗ ಇಬ್ಬರು ಮಕ್ಕಳ ಪೈಕಿ ಒಂದು ಮಗು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಭಾವನಾಗೆ ಎರಡು ವಾರದ ಹಿಂದೆ ಹೆರಿಗೆ ಆಗಿದ್ದು, ಹೆರಿಗೆ ಸಂದರ್ಭದಲ್ಲೇ ಒಂದು ಮಗು ಮೃತಪಟ್ಟಿದೆ.
ಇದನ್ನೂ ಓದಿ: ಬೃಹತ್ ಮಾದಕ ವಸ್ತು ಉತ್ಪಾದನ ಜಾಲ ಪತ್ತೆ; ಐಟಿ ತಜ್ಞ ಸೇರಿ 12 ಮಂದಿ ಬಂಧನ; 12 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ವಶ| Drug Racket
ಒಂದು ಮಗುವಿನಲ್ಲಿ ಏಳು ತಿಂಗಳ ನಂತ್ರ ಸಮಸ್ಯೆ ಕಾಣಿಸಿಕೊಂಡ ಕಾರಣ 8 ತಿಂಗಳಿಗೆ ವೈದ್ಯರ ಸೂಚನೆಯಂತೆ ಹೆರಿಗೆ ಮಾಡಿಸಲಾಗಿದೆ. ಸದ್ಯ ತಾಯಿ ಹಾಗೂ ಮತ್ತೊಂದು ಮಗು ಕ್ಷೇಮವಾಗಿದೆ.
ಸಿನಿಮಾ ರಂಗ ಮಾತ್ರವಲ್ಲದೇ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಭಾವನಾ, ಆಗಾಗ್ಗೆ ತಮ್ಮ ಖಡಕ್ ಹೇಳಿಕೆಗಳಿಂದ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದರು. ಕಳೆದ ಹಲವು ತಿಂಗಳುಗಳಿಂದ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಳ್ಳದ ನಟಿ ಕಳೆದ ಕೆಲ ದಿನಗಳ ಹಿಂದೆ ತಾವು ತಾಯಿಯಾಗುತ್ತಿರುವ ಸಂತಸವನ್ನು ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ಹಂಚಿಕೊಂಡಿದ್ದರು.
(ಏಜೆನ್ಸೀಸ್)