ನ್ಯೂಸ್

"ನನಗೆ ಕಿಂಚಿತ್ತು ಆಸಕ್ತಿಯಿಲ್ಲ...." ಟ್ರೋಲ್​ಗಳಿಗೆ ನಟಿ ಆಯೇಶಾ ತಿರುಗೇಟು

ಮುಂಬೈ: ಇತ್ತೀಚೆಗಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಬಾಲಿವುಡ್​ ನಟಿ ಆಯೇಶಾ ಟಾಕಿಯಾ ಒಂದೇ ಒಂದು ಫೋಟೋದಿಂದ ವ್ಯಾಪಕ ಟ್ರೋಲ್​ಗಳಿಗೆ ಗುರಿಯಾದರು. ಪ್ಲಾಸ್ಟಿಕ್ ಸರ್ಜರಿಯಿಂದ ಮುಖ ಹಾಳು ಮಾಡಿಕೊಂಡ ನಿಮಗೆ ಇದೆಲ್ಲಾ ಬೇಕಿತ್ತಾ ಎಂದ ನೆಟ್ಟಿಗರು, ಪ್ಲಾಸ್ಟಿಕ್​ ಸರ್ಜರಿಯಿಂದ ಮುಖದಲ್ಲಿ ಭಾರೀ ಬದಲಾವಣೆ ಕಂಡುಬಂದಿದೆ ಎಂದು ಅನೇಕರು ಕಮೆಂಟ್ ಮಾಡಿ ವ್ಯಂಗ್ಯವಾಡಿದ್ದರು. ಇದಕ್ಕೆ ನಟಿ ಖಡಕ್ ಪ್ರತಿಕ್ರಿಯೆ ನೀಡುವ ಮುಖೇನ ಉತ್ತರಿಸಿದ್ದರು. ಆದರೆ, ಈಗ ತನ್ನ ಸಿನಿಮಾ ರಂಗದ ಬಗ್ಗೆ ಹರಿದಾಡುತ್ತಿರುವ ಟ್ರೋಲ್​ಗಳಿಗೆ ಆಯೇಷಾ ಕೊಟ್ಟ ತಿರುಗೇಟು ಹೀಗಿದೆ.

"ನನ್ನ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಎದುರಾಗಿತ್ತು. ನನ್ನ ಸಹೋದರಿ ಆಸ್ಪತ್ರೆಯಲ್ಲಿದ್ದರು. ಇದಕ್ಕಾಗಿ ನಾನು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿದ್ದೇ. ಈ ವೇಳೆ ಕ್ಯಾಮೆರಾಗಳ ಕಣ್ಣಿಗೆ ಬಿದ್ದೆ, ಅವರಿಗೆ ಫೋಟೋ ಕೊಟ್ಟು ನಾನು ಹಿಂತಿರುಗಿದೆ. ಇದೊಂದು ವಿಷಯವನ್ನು ಮುಂದಿಟ್ಟು ದೊಡ್ಡ ಚರ್ಚೆಯಂತೆ ನಡೆಸಿದ್ದಾರೆ. ಇದನ್ನು ಹೊರತುಪಡಿಸಿದರೆ ಇವರಿಗೆ ದೇಶದಲ್ಲಿ ಬೇರೆ ಯಾವುದೇ ಪ್ರಮುಖ ಸಮಸ್ಯೆಗಳೇ ಇಲ್ಲ ಅನಿಸುತ್ತದೆ ಎಂದಿದ್ದಾರೆ.

ಇನ್ನು ಚಿತ್ರರಂಗಕ್ಕೆ ನೀವು ಎಂಟ್ರಿ ಕೊಡ್ತೀರಾ? ಸಿನಿಮಾಗೆ ವಾಪಾಸ್ ಬರಲ್ವಾ ಎಂದು ಟ್ರೋಲ್​ ಮಾಡಿದವರಿಗೆ ಉತ್ತರಿಸಿದ ಆಯೇಷಾ, ನಾನು ಬಾಲಿವುಡ್‌ಗೆ ಹಿಂತಿರುಗುವುದಿಲ್ಲ. ಚಿತ್ರರಂಗಕ್ಕೆ ಬರುವುದಕ್ಕೆ ನನಗೆ ಕಿಂಚಿತ್ತು ಆಸಕ್ತಿಯಿಲ್ಲ. ನನ್ನ ಜೀವನವನ್ನು ಸಂತೋಷದಿಂದ ಜೀವಿಸುತ್ತಿರುವೆ, ಯಾವುದೇ ಖ್ಯಾತಿಯ ಬಗ್ಗೆ ಇಂಟ್ರೆಸ್ಟ್​ ಇಲ್ಲ. ದಯವಿಟ್ಟು ನನ್ನ ಬಗ್ಗೆ ಕಾಳಜಿ ವಹಿಸುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ,(ಏಜೆನ್ಸೀಸ್).