ನ್ಯೂಸ್

ತೆಲುಗು ನಟನೊಂದಿಗೆ ಲಿಪ್​ಲಾಕ್​​ ಮಾಡಿದ ಖ್ಯಾತ ಮಲಯಾಳಂ ಬೆಡಗಿ! ನಟಿಯ ಬೋಲ್ಡ್​ ಅವತಾರಕ್ಕೆ ಫ್ಯಾನ್ಸ್ ಶಾಕ್​

ಆಂಧ್ರಪ್ರದೇಶ: ಟಾಲಿವುಡ್​ನಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳು ತೆರೆಕಾಣಲು ಸಿದ್ಧಗೊಂಡಿದ್ದು, ಈ ವರ್ಷದ ಪ್ರಾರಂಭದಲ್ಲಿ ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾದ ರೀತಿಯಲ್ಲೇ ಈ ಬಾರಿಯೂ ಕೂಡ ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಎಂಟ್ರಿ ಕೊಡಲು ಮುಂಚೂಣಿಯಲ್ಲಿವೆ. ಈ ಪೈಕಿ ಸಿಕ್ಕಾಪಟ್ಟೆ ಹಾಟ್​ ದೃಶ್ಯಗಳನ್ನು ಒಳಗೊಂಡಿರುವ ಸಿನಿಮಾವೊಂದು ಸದ್ಯ ಟಾಲಿವುಡ್​ ಅಂಗಳದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸಿನಿಪ್ರೇಕ್ಷಕರ ಹುಬ್ಬೇರಿಸುವಂತೆ ಮಾಡಿದೆ.

ಮಲಯಾಳಂ, ತೆಲುಗು ನಟಿ ಅನುಪಮಾ ಪರಮೇಶ್ವರನ್ ಮತ್ತು ನಟ ಸಿದ್ಧು ಮುಖ್ಯಭೂಮಿಕೆಯಲ್ಲಿರುವ 'ಟಿಲ್ಲು ಸ್ಕ್ವೇರ್‌' ಚಿತ್ರದ ಟ್ರೇಲರ್​ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದು, ಸಿನಿಮಾದಲ್ಲಿನ ಬೋಲ್ಡ್​ ದೃಶ್ಯಗಳು ನೋಡುಗರನ್ನು ಭಾರೀ ಅಚ್ಚರಿಗೆ ದೂಡಿದೆ. ಟ್ರೇಲರ್​ನ ಹಲವು ಭಾಗಗಳಲ್ಲಿ ನಟಿ ಅನುಪಮಾ ಸಿಕ್ಕಾಪಟ್ಟೆ ಹಾಟ್​​ ಆಗಿ ಕಾಣಿಸಿಕೊಂಡಿದ್ದು, ಸಿದ್ದು ಜತೆಗೆ​ ಲಿಪ್​ಲಾಕ್​ ಸೀನ್​ಗಳು ಮಾಡಿದ್ದಾರೆ.

ಈ ಮೂಲಕ ಇದೀಗ ಸಿನಿಪ್ರೇಕ್ಷಕರು ಹಾಗೂ ಅವರ ಅಭಿಮಾನಿಗಳ ಕಾತರವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಚಿತ್ರದಲ್ಲಿ ಅನುಪಮಾ ಬೋಲ್ಡ್​ ಅವತಾರವು ನೋಡುಗರನ್ನು ಬೆಚ್ಚಿಬೀಳಿಸಿದ್ದು, ಸದ್ಯ ಕಥಾಹಂದರದ ಬಗ್ಗೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿದೆ. ಮಲಿಕ್ ರಾಮ್ ನಿರ್ದೇಶನದ ಟಿಲ್ಲು ಸ್ಕ್ವೇರ್ ಇದೇ ಮಾರ್ಚ್ 29ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ,(ಏಜೆನ್ಸೀಸ್).