ನ್ಯೂಸ್

ಜಡ್ಜ್​​ ಮುಂದೆ ಚಿಕ್ಕಣ್ಣ ಫುಲ್​ ನರ್ವಸ್​​; ಸಾಕ್ಷಿ ಹೇಳಲು ತಡಬಡಿಸಿದ ನಟ, ಯಶಸ್ ಸೂರ್ಯ​ ಏನೆಲ್ಲ ಹೇಳಿದ್ರು?..Renukaswamy Murder Case

  • ರೇಣುಕಾಸ್ವಾಮಿ ಕೊಲೆ ಕೇಸ್ ಬೆಂಗಳೂರಿನ 59ನೇ CCH ಕೋರ್ಟ್​ನಲ್ಲಿ ​ ಸಾಕ್ಷಿಗಳ ವಿಚಾರಣೆ

  • ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್ ಪಾರ್ಟಿಯಲ್ಲಿದ್ದ ಚಿಕ್ಕಣ್ಣ ಪ್ರಕರಣದ CW80 ಸಾಕ್ಷಿ

  • ಘಟನೆ ದಿನ ಎಲ್ಲಿದ್ದರು ಎನ್ನುವ ಬಗ್ಗೆ ಹೇಳಿಕೆ ನೀಡುವಾಗ ಗಾಬರಿಯಾದ ನಟ ಚಿಕ್ಕಣ್ಣ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಪ್ರದೋಷ್​​ ಮಾಫಿ ಸಾಕ್ಷಿ ಆದ ನಂತರ ಪ್ರಕರಣಕ್ಕೆ ಸಾಕಷ್ಟು ತಿರುವು ಸಿಕ್ಕಿದೆ. ಇದರ ಭಾಗವಾಗಿ, ಪ್ರಕರಣದ ಪ್ರಮುಖ ಸಾಕ್ಷಿಗಳಾದ ನಟ ಚಿಕ್ಕಣ್ಣ ಮತ್ತು ಯಶಸ್​ ಸೂರ್ಯ ಇಂದು 59ನೇ ಸಿಸಿಎಚ್​​ ನ್ಯಾಯಾಲಯಕ್ಕೆ ಹಾಜಾರಾಗಿದ್ದರು. ಘಟನೆ ನಡೆದ ದಿನ ದರ್ಶನ್ ಜೊತೆಗೆ ಪಾರ್ಟಿಯಲ್ಲಿದ್ದ ಕಾರಣ ಇಬ್ಬರನ್ನು ಸಾಕ್ಷಿಗಳಾಗಿ ಪರಿಗಣಿಸಿದ್ದು, ಕೋರ್ಟ್​ಗೆ ಹಾಜರಾಗಲು ನೋಟಿಸ್ ನೀಡಲಾಗಿತ್ತು.

59ನೇ CCH ಕೋರ್ಟ್​ನಲ್ಲಿ ​ ಜಡ್ಜ್​ ಮುಂದೆ CW80 ಸಾಕ್ಷಿ ನಟ ಚಿಕ್ಕಣ್ಣ ಹಾಜಾರಾದರು. ಘಟನೆ ಬಗ್ಗೆ ಸಾಕ್ಷಿ ಹೇಳುವಾಗ ತೀರಾ ನರ್ವಸ್​ ಆಗಿ ತಡಬಡಾಯಿಸಿದ್ದಾರೆ. ಅವರು ಮಾತನಾಡಲು ಕಷ್ಟ ಪಡುತ್ತಿರುವುದು, ಆತಂಕಕ್ಕೊಳಗಾಗಿರುವುದನ್ನು ಕಂಡ ನ್ಯಾಯಮೂರ್ತಿಗಳು, 'ಯಾಕೆ ಸಹಜವಾಗಿ ಮಾತನಾಡುತ್ತಿಲ್ಲ. ಗಾಬರಿಯಾಗ್ತಿದ್ದೀರಿ' ಎಂದು ಪ್ರಶ್ನೆ ಮಾಡಿದರು.

ತಡಬಡಾಯಿಸಿದ ಚಿಕ್ಕಣ್ಣ

ಆಗ ತಮಗೆ 'ನರ್ವಸ್​ ಮತ್ತು ಟೆನ್ಶನ್'​ ಆಗುತ್ತಿರುವ ಬಗ್ಗೆ ನಟ ಚಿಕ್ಕಣ್ಣ ಹೇಳಿದರು. ಹೀಗಾಗಿ ನೀರು ಕುಡಿಯಲು, ಹತ್ತು ನಿಮಿಷ ರಿಲಾಕ್ಸ್​​ ಆಗಲು ಸಮಯ ಕೊಟ್ಟರು ಎನ್ನಲಾಗಿದೆ. ಈ ವೇಳೆ ವಕೀಲರು ಸಹ ನೀವೇನು ಕ್ರೈಮ್ ಮಾಡಿಲ್ಲ ಗಾಬರಿಯಾಗ್ಬೇಡಿ ಎಂದು ಧೈರ್ಯ ತುಂಬಿದರು ಎನ್ನಲಾಗಿದೆ. ಪವಿತ್ರಾ ಗೌಡ, ದರ್ಶನ್​ ಅವರು ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ ಹಾಜರಾದಗಲೇ ಈ ಘಟನೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ನಟ ದರ್ಶನ್​ಗೆ ತಪ್ಪದ ಸಂಕಷ್ಟ : ಮಾಫಿ ಸಾಕ್ಷಿ ಪ್ರಶ್ನಿಸಿ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್​| Actor Darshan

ಆನಂತರ ಮಾತನಾಡಿದ ಚಿಕ್ಕಣ್ಣ ತಮಗೂ ಮತ್ತು ದರ್ಶನ್​ ಅವರಿಗೆ ಇರುವ ನಂಟಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. 201ರಲ್ಲಿ ರಿಲೀಸ್​ ಆಗಿದ್ದ ಚಿಂಗಾರಿ ಸಿನಿಮಾದಿಂದ ಹಿಡಿದು, ಚಕ್ರವರ್ತಿ, ಒಡೆಯ ಹಾಗೂ ಗರಡಿ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ ಬಗ್ಗೆ ಚಿಕ್ಕಣ್ಣ ಮಾತನಾಡಿದರು. ಘಟನೆ ನಡೆದ ದಿನ ಸ್ಟೋನಿ ಬ್ರೂಕ್​​ನಲ್ಲಿ ಭೇಟಿಯಾಗಿದ್ದೆವು. ಅಲ್ಲಿ ಸಿನಿಮಾ ಬಗ್ಗೆ ಮಾತನಾಡಿಕೊಂಡಿದ್ದೆವು. ಊಟ ಮಾಡಿದ ಬಳಿಕ ನಾವು ಅಲ್ಲಿಂದ ಹೊರಟು ಹೋದೆವು ಎಂದು ಯಶಸ್​​ ಸೂರ್ಯ ಸ್ಪಷ್ಟಪಡಿಸಿದರು.

ಅ.14ರಂದು ವಿಚಾರಣೆ

ಚಿಕ್ಕಣ್ಣ ನರ್ವಸ್​ ಆದ ನಂತರ ಇಬ್ಬರಿಗೂ ಅವಕಾಶ ನೀಡಲಾಯಿತು. ನಂತರ ಯಶಸ್​ ಸೂರ್ಯ ಅವರ ಹೇಳಿಕೆ ದಾಖಲಿಸಿಕೊಳ್ಳಲಾಯಿತು. ಅದೇ ಸಮಯದಲ್ಲಿ ಎಸ್​ಪಿಪಿ ಯಶಸ್​ ಕ್ರಾಸ್​ ಎಕ್ಸಾಮಿನೇಷನ್​ಗೆ ಅನುಮತಿ ಕೋರಿದ್ದು ಕೋರ್ಟ್​​ ಇದಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದೆ.

ರಿಲಾಕ್ಸ್ ಬಳಿಕವೂ ಟೆನ್ಶನ್​ ಆದ ಚಿಕ್ಕಣ್ಣ

15 ನಿಮಿಷಗಳ ವಿಶ್ರಾಂತಿ ಬಳಿಕವೂ ಮಾತನಾಡಲು ಸಾಧ್ಯವಾಗುತ್ತಿಲ್ಲ.ಟೆನ್ಶನ್ ಆಗ್ತಿದೆ ಎಂದು ಚಿಕ್ಕಣ್ಣ ಪ್ರತಿಕ್ರಿಯಿಸಿದ ಹಿನ್ನೆಲೆ ಚಿಕ್ಕಣ್ಣ ಸಾಕ್ಷ್ಯ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ. ನಾಳೆ ಅಂದರೆ,ಅ.14ರಂದು ಯಶಸ್​ ಸೂರ್ಯ ಅವರ ಕ್ರಾಸ್​ ಎಕ್ಸಾಮಿನೇಷನ್​, ಚಿಕ್ಕಣ್ಣ ಹೇಳಿಕೆ ದಾಖಲು ಪ್ರಕ್ರಿಯೆ ಮುಂದೂಡಲಾಗಿದೆ, (ಏಜೆನ್ಸೀಸ್).