ತಮಿಳುನಾಡು: ಇತ್ತೀಚೆಗಷ್ಟೇ ತಮಿಳು ನಟ ಸೂರ್ಯ ತಮ್ಮ ಮುಂಬರುವ ‘ಸೂರ್ಯ 44’ ಸಿನಿಮಾದ ಎರಡನೇ ಶೆಡ್ಯೂಲ್ನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವೇಳೆ ತಲೆಗೆ ಪೆಟ್ಟು ಬಿದ್ದು, ಆಸ್ಪತ್ರೆ ಸೇರಿದ್ದರು. ಸಣ್ಣ ಇಂಜುರಿ ಎಂದು ಹೇಳಿರುವ ನಟ ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಪ್ಯಾನ್ ಇಂಡಿಯಾ 'ಕಂಗುವ' ಸೇರಿದಂತೆ ಕೆಲವು ಸಿನಿಮಾಗಳ ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿರುವ ಸೂರ್ಯ, ತಮಿಳು ಚಿತ್ರರಂಗದಲ್ಲಿ ತಮ್ಮ ಸಿನಿಮಾ ಹಾಗೂ ಆಯ್ದುಕೊಳ್ಳುವ ಪಾತ್ರದಿಂದಲೇ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ.
ಇದನ್ನೂ ಓದಿ: ಪ್ರೊ ಕಬಡ್ಡಿ ಲೀಗ್ ಹರಾಜಿನ ಮೊದಲ ದಿನ 8 ಆಟಗಾರರು ಕೋಟ್ಯಧಿಪತಿಗಳು! ಬೆಂಗಳೂರು ಬುಲ್ಸ್ಗೆ ಸೇರ್ಪಡೆಯಾದ ಸ್ಟಾರ್ ರೈಡರ್
ತಮಿಳು ಚಿತ್ರೋದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್ ನಟರ ಪೈಕಿ ಸೂರ್ಯ ಮುಂಚೂಣಿಯಲ್ಲಿದ್ದಾರೆ. ಬ್ಲಾಕ್ಬಸ್ಟರ್ ಹಿಟ್ ಚಿತ್ರಗಳಾದ 'ಗಜನಿ', '24', 'ಸಿಂಗಂ', 'ಜೈ ಭೀಮ್' ಸೇರಿದಂತೆ ಮುಂತಾದ ವಿಭಿನ್ನ ಕಥಾಹಂದರ ಸಿನಿಮಾಗಳಲ್ಲಿ ಅಭಿನಯಿಸಿ, ಪ್ರೇಕ್ಷಕರಿಂದ ಸೈಎನಿಸಿಕೊಂಡಿರುವ ಸೂರ್ಯ, ಜೀವನದಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿ ತಪ್ಪು ಮಾಡಿಯೇ ಇರುತ್ತಾರೆ. ನಾನು ಕೂಡ ತಪ್ಪು ಮಾಡಿದ್ದೇನೆ. ಅದನ್ನು ನೆನಪಿಸಿಕೊಂಡಾಗ ಪಶ್ಚಾತಾಪ ಕಾಡುತ್ತದೆ ಎಂದಿದ್ದಾರೆ.
ಭಾರತೀಯ ಚಿತ್ರೋದ್ಯಮದಲ್ಲಿ ಅತ್ಯಂತ ಯಶಸ್ವಿ ಹಾಗೂ ಸ್ಟಾರ್ ನಿರ್ದೇಶಕ ಎಂದು ಕರೆಸಿಕೊಳ್ಳುವ ಡೈರೆಕ್ಟರ್ ಎಸ್.ಎಸ್. ರಾಜಮೌಳಿ ಅವರ ನಿರ್ದೇಶನದಲ್ಲಿ ಮೂಡಿಬಂದ ಬ್ಲಾಕ್ಬಸ್ಟರ್, ಸೂಪರ್ಹಿಟ್ 'ಬಾಹುಬಲಿ' ಚಿತ್ರದಲ್ಲಿ ನಟ ಸೂರ್ಯ ಒಂದು ಪ್ರಮುಖ ಪಾತ್ರದಲ್ಲಿ ನಟಿಸುವ ಸುವರ್ಣಾವಕಾಶವನ್ನು ಪಡೆದಿದ್ದರಂತೆ. ಈ ಕುರಿತು ಸ್ವತಃ ಸೂರ್ಯ ಅವರೇ ಮಾತನಾಡಿ, ತಮಗೆ ಬಂದ ಅವಕಾಶ ಏಕೆ ಕೈತಪ್ಪಿತು ಎಂಬುದನ್ನು ಬೇಸರಿಂದಲೇ ವಿವರಿಸಿದ್ದಾರೆ.
ಇದನ್ನೂ ಓದಿ: ಟ್ರೈನಿ ವೈದ್ಯೆ ಅತ್ಯಾಚಾರ-ಹತ್ಯೆ ಕೇಸ್: ಆ. 17ರಂದು ದೇಶವ್ಯಾಪಿ ವೈದ್ಯರ ಮುಷ್ಕರಕ್ಕೆ ಐಎಂಎ ಕರೆ! ಹಲವು ಸೇವೆಗಳು ಸ್ಥಗಿತ
ವರದಿಗಳ ಪ್ರಕಾರ, 2017ರಲ್ಲಿ ನಡೆದ ತಮ್ಮ ಚಿತ್ರದ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ್ದ ಸೂರ್ಯ, "ಜೀವನದಲ್ಲಿ ಎಲ್ಲರೂ ತಪ್ಪು ಮಾಡಿರುತ್ತಾರೆ. ಅದೇ ರೀತಿ ನಾನು ಕೂಡ ಮಾಡಿದೆ. ನನ್ನ ಪಾಲಿಗೆ ಬಂದ ದೊಡ್ಡ ಅವಕಾಶವನ್ನು ನಾನೇ ತಿರಸ್ಕರಿಸುವ ಮೂಲಕ ಕಳೆದುಕೊಂಡೆ. ಅದು ನಿರ್ದೇಶಕ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸಿನಿಮಾ. ಈ ಚಿತ್ರದಲ್ಲಿ ನನಗೆ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶವನ್ನು ರಾಜಮೌಳಿ ನೀಡಿದ್ದರು. ಆದ್ರೆ, ಪಾತ್ರ ತಮಗೆ ಹಿಡಿಸಲಿಲ್ಲ ಎಂಬ ಕಾರಣಗಳಿಂದ ನಟಿಸಲಿಲ್ಲ. ಮುಂದೆ ಅವಕಾಶ ಸಿಕ್ಕರೆ ಖಂಡಿತ ಅವರೊಂದಿಗೆ ಸಿನಿಮಾ ಮಾಡಲು ಬಯಸುತ್ತೇನೆ" ಎಂದು ಹೇಳಿರುವುದಾಗಿ ವರದಿಯಾಗಿದೆ,(ಏಜೆನ್ಸೀಸ್).