ಚೆನ್ನೈ: ಕಡಿಮೆ ಬಜೆಟ್ನಲ್ಲಿ ನಿರ್ಮಾಣಗೊಂಡು ಸ್ಟಾರ್ನಟರ ಸಿನಿಮಾಗಳಿಗೆ ಸೆಡ್ಡು ಹೊಡೆದು 300 ಕೋಟಿ ಕ್ಲಬ್ ಸೇರಿರುವ ಶಿವಕಾರ್ತಿಕೇಯನ್ (Sivakarthikeyan) ನಟನೆಯ ಅಮರನ್ (Amaran) ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈಗಲೂ ಚಿತ್ರ ಹಲವೆಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ರಾಜ್‌ಕುಮಾರ್ ಪೆರಿಯಾಸ್ವಾಮಿ ನಿರ್ದೇಶನದ ಮೇಜರ್ ಮುಕುಂದನ್ (Major Mukundan) ಹಾಗೂ ಅವರ ಪತ್ನಿ ಇಂದೂ ರೆಬೆಕಾ ವರ್ಗಿಸ್ (Indhu Rebecca Varghese) ಅವರ ಜೀವನವನ್ನು ಆಧರಿಸಿ ಮಾಡಲಾದ ಅಮರನ್ ಚಿತ್ರದಲ್ಲಿ ಶಿವಕಾರ್ತಿಕೇಯನ್ (Sivakarthikeyan) ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದರ ಬೆನ್ನಲ್ಲೇ ಶಿವಕಾರ್ತಿಕೇಯನ್ ರಜಿನಿಕಾಂತ್ ನಟನೆಯ ಕೂಲಿ ಸಿನಿಮಾದ ಸೆಟ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಅಮರನ್ ಚಿತ್ರದ ಬಳಿಕ ಶಿವಕಾರ್ತಿಕೇಯನ್ (Sivakarthikeyan) ಅವರ ಮುಂದಿನ ಸಿನಿಮಾ ಯಾವುದೆಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಉತ್ತರವೆಂಬಂತೆ ಶಿವಕಾರ್ತಿಕೇಯನ್ ಲೋಕೇಶ್ ಕನಗರಾಜ್ (Lokesh Kanagaraj) ನಿರ್ದೇಶನದ ಕೂಲಿ ಸಿನಿಮಾದ ಸೆಟ್ನಲ್ಲಿ ಕಾಣಿಸಿಕೊಂಡಿದ್ದು, ಇದರ ಫೋಟೋ ಸಖತ್ ವೈರಲ್ ಆಗಿದೆ. ವೈರಲ್ ಆಗಿರುವ ಸುದ್ದಿಗೆ ಸಂಬಂಧಿಸಿದಂತೆ ಶಿವಕಾರ್ತಿಕೇಯನ್ (Sivakarthikeyan) ಈ ಸಿನಿಮಾಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಪಿಂಕ್ವಿಲ್ಲಾಗೆ (PinkVilla) ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ನಟ ಶಿವಕಾರ್ತಿಕೇಯನ್ (Sivakarthikeyan), ಕೂಲಿ ಸಿನಿಮಾದ ಚಿತ್ರೀಕರಣ ನನ್ನ ಮನೆಯ ಬಳಿಯೇ ನಡೆಯುತ್ತಿದ್ದು, ನಾನು ಮಾವೀರನ್ ನಿರ್ಮಾಪಕ ಅರುಣ್ ವಿಶ್ವ ಮತ್ತು ನಿರ್ದೇಶಕ ಮಡೋನ್ ಅಶ್ವಿನ್ ಅವರೊಂದಿಗೆ ಲೋಕೇಶ್ ಕನಗರಾಜ್ ಅವರನ್ನು ಭೇಟಿ ಮಾಡಲು ಸೆಟ್ಗೆ ಹೋಗಿದ್ದೆ. ಲೋಕೇಶ್ ಕನಗರಾಜ್, ನನ್ನ ಆತ್ಮೀಯ ಗೆಳೆಯ ನಾವೆಲ್ಲ ಆಗಾಗ್ಗೆ ಭೇಟಿ ಆಗುತ್ತಿರುತ್ತೇವೆ. ಇದೇ ಕಾರಣಕ್ಕೆ ನಾನು ಕೂಲಿ ಸೆಟ್ಗೆ ಹೋಗಿದ್ದೆ ಹೊರತು ಬೇರೆ ಕಾರಣಕ್ಕೆ ಅಲ್ಲಾ. ನನಗೂ ಆ ಸಿನಿಮಾಕ್ಕೂ ಸಂಬಂಧ ಇಲ್ಲ. ಇರುವ ಒಂದೇ ಸಂಬಂಧ ಎಂದರೆ ಕೂಲಿ ಸಿನಿಮಾದಲ್ಲಿ ನನ್ನ ತಲೈವಾ (Rajinikanth) ನಟಿಸುತ್ತಿದ್ದಾರೆ. ಇದು ಬಿಟ್ಟರೆ ನನಗೂ ಆ ಸಿನಿಮಾ ತಂಡಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶಿವಕಾರ್ತಿಕೇಯನ್ ಸ್ಪಷ್ಟನೆ ನೀಡಿದ್ದಾರೆ.
ರಾಜ್‌ಕುಮಾರ್ ಪೆರಿಯಸ್ವಾಮಿ ನಿರ್ದೇಶನದ, ನಟ ಕಮಲ್ ಹಾಸನ್ (Kamal Hassan) ನಿರ್ಮಾಣದ ಅಮರನ್ (Amaran) ಸಿನಿಮಾವು ಶಿವಕಾರ್ತಿಕೇಯನ್ (Sivakarthikeyan) ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭುವನ್ ಅರೋರ, ರಾಹುಲ್ ಬೋಸ್, ಶ್ಯಾಮ್ ಪ್ರಸಾದ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದು, ಚಿತ್ರಕ್ಕೆ ದಿನ ಕಳೆದಂತೆ ಸಿನಿಮಾ ಮಂದಿರಗಳಿಂದ ಬೇಡಿಕೆ ಹೆಚ್ಚುತ್ತಿದೆ. ಸದ್ಯ ಅಮರನ್ (Amaran) ಚಿತ್ರದ ಪ್ರಮೋಷನ್ನಲ್ಲಿ ಬ್ಯುಸಿಯಿರುವ ನಟ ಶಿವಕಾರ್ತಿಕೇಯನ್ (Sivakarthikeyan) ಅವರ ಮುಂದಿನ ಚಿತ್ರ ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದೆ.