ನ್ಯೂಸ್

Photos: ನಾಗರಹೊಳೆ ಅಭಯಾರಣ್ಯದಲ್ಲಿ ನಿಖಿಲ್​ಕುಮಾರ್ ದಂಪತಿ

ಕರೊನಾ ಲಾಕ್​ಡೌನ್​ ಸಡಿಲಿಕೆ ಆಗುತ್ತಿದ್ದಂತೆ ಸ್ಯಾಂಡಲ್​ವುಡ್​ ನಟ ನಿಖಿಲ್​ ಕುಮಾರ್​ ತಮ್ಮ ಪತ್ನಿ ರೇವತಿ ಜತೆ ಸುತ್ತಾಟ ಆರಂಭಿಸಿದ್ದಾರೆ. ಇಷ್ಟು ದಿನ ಫಾರ್ಮ್​ಹೌಸ್​ನಲ್ಲಿ ತಂಗಿದ್ದ ಅವರು, ಇದೀಗ ನಾಗರಹೊಳೆಗೆ ತೆರಳಿದ್ದಾರೆ. ಅಲ್ಲಿನ ಆನೆಗಳ ಬಿಡಾರಕ್ಕೆ ಭೇಟಿಕೊಟ್ಟು, ಆನೆಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಬಂದಿದ್ದಾರೆ. ಈ ವಿಚಾರವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡು, ‘ನಾಗರಹೊಳೆ ಅಭಯಾರಣ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾದ ಅಂಬಾರಿ ಹೊರುವ ಗಜಪಡೆಯ ನಾಯಕ ಅರ್ಜುನ ಹಾಗೂ ದುರ್ಗಾ ಪರಮೇಶ್ವರಿಯೊಂದಿಗೆ’ ಎಂದು ಬರೆದುಕೊಂಡಿದ್ದಾರೆ. ಆ ಫೋಟೋಗಳು ಇಲ್ಲಿವೆ.