ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಸ್ಟಾರ್ ನಟ ನಾನಿ ಮತ್ತು ನಟಿ ಮೃಣಾಲ್ ಠಾಕೂರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಹಾಯ್ ನನ್ನ' ಚಿತ್ರದ ಪ್ರಿ-ರಿಲೀಸ್ ಇವೆಂಟ್ನಲ್ಲಿ ಪತ್ರಕರ್ತರೊಬ್ಬರು ಕೇಳಿದ ಲಿಪ್ ಲಾಕ್ ಪ್ರಶ್ನೆಗೆ ನಾನಿ ಕೊಟ್ಟ ಉತ್ತರ ಏನು? ಎಂಬುದೇ ಸದ್ಯ ಹಲವರ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಜಡೆಯಲ್ಲಿ ಮೊದಲ ಬಾರಿ ದುರ್ಗಾದೇವಿ ಪ್ರತಿಷ್ಠಾಪನೆ
ಇತ್ತೀಚೆಗಷ್ಟೇ ಬಿಡುಗಡೆಗೊಂಡ ಟೀಸರ್ ನೋಡಿದ ನಾನಿ ಅಭಿಮಾನಿಗಳು ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ, ಚಿತ್ರದ ಕೆಲವು ದೃಶ್ಯಗಳಲ್ಲಿ ನಟಿ ಮೃಣಾಲ್ ಠಾಕೂರ್ ಜತೆಗೆ ನಾನಿ ಲಿಪ್-ಲಾಕ್ ಮಾಡಿರುವ ಸೀನ್ಗಳು ಇದೀಗ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.
ಸದ್ಯ ಟಾಲಿವುಡ್ನಲ್ಲಿ ಬಹುಬೇಡಿಕೆಯ ನಟರ ಪೈಕಿ ನಾನಿ ಕೂಡ ಒಬ್ಬರಾಗಿದ್ದು, ಈ ಹಿಂದಿನಿಂದಲೂ ತಾವು 'ಹಾಯ್ ನನ್ನ' ಚಿತ್ರದಲ್ಲಿ ಬ್ಯುಸಿಯಾಗಿರುವುದಾಗಿ ನಟ ಹಲವು ಬಾರಿ ತಮ್ಮ ಸಾಮಾಜಿಕ ಜಾಲತಾಣದ ಮುಖೇನ ತಿಳಿಸಿದ್ದರು. ಈಗ ಚಿತ್ರದ ಟೀಸರ್ ಅಧಿಕೃತವಾಗಿ ಬಿಡುಗಡೆಗೊಂಡಿದ್ದು, ಪ್ರಿ-ರಿಲೀಸ್ ಇವೆಂಟ್ನಲ್ಲಿ ನಟ ನಾನಿಗೆ ಪತ್ರಕರ್ತರೊಬ್ಬರು ಲಿಪ್ ಲಾಕ್ ಸೀನ್ಗಳ ಬಗ್ಗೆ ಬಹಿರಂಗವಾಗಿ ಪ್ರಶ್ನಿಸಿದರು.
ತಮ್ಮ ಸಿನಿಮಾಗಳಲ್ಲಿ ಕಿಸ್ಸಿಂಗ್ ಸೀನ್ಗಳು ಸ್ಕ್ರಿಪ್ಟ್ಗೆ ಅಗತ್ಯವಿರುವ ಕಾರಣ ಮಾಡುತ್ತಿರೋ ಅಥವಾ ನೀವೇ ನಿರ್ದೇಶಕರನ್ನು ಕೇಳಿ ಈ ಸೀನ್ ಹಾಕಿಸಿಕೊಳ್ಳುತ್ತಿರೋ ಎಂದು ಪ್ರಶ್ನೆ ಮುಂದಿಟ್ಟರು. ಈ ಪ್ರಶ್ನೆ ತೀವ್ರ ಮುಜುಗರ ಉಂಟು ಮಾಡಿದರೂ ಕೂಡ ಉತ್ತರಿಸಿದ ನಾನಿ, ಎಲ್ಲಾ ಸಿನಿಮಾಗಳಲ್ಲಿ ಚುಂಬನದ ದೃಶ್ಯಗಳನ್ನು ಒಳಗೊಂಡಿಲ್ಲ. 'ಸುಂದರನಿಕಿ' ಮತ್ತು 'ದಸರಾ' ಚಿತ್ರಗಳಲ್ಲಿ ಯಾವುದೇ ಚುಂಬನದ ದೃಶ್ಯಗಳಿಲ್ಲ ಎಂದು ಹೇಳಿದರು.
ಸ್ಕ್ರಿಪ್ಟ್‌ನಲ್ಲಿ ಕಿಸ್ಸಿಂಗ್ ದೃಶ್ಯಗಳು ಇದ್ದರೆ ಅದನ್ನು ಮಾಡಬೇಕಾಗಬಹುದು. ನಟನಾಗಿ ನಿರ್ದೇಶಕರ ದೃಷ್ಟಿಗೆ ನಾವು ನಿಷ್ಠರಾಗಿರಬೇಕಾಗುತ್ತದೆ. ಅದು ನನ್ನ ವೈಯಕ್ತಿಕ ಆಯ್ಕೆಯಾಗಿರುವುದಿಲ್ಲ ಎಂದು ಶಾಂತ ಸ್ವಭಾವದಿಂದಲೇ ನಾನಿ ಉತ್ತರಿಸಿದ್ದಾರೆ,(ಏಜೆನ್ಸೀಸ್).