ನ್ಯೂಸ್

‘ಆಪರೇಷನ್ ಸಿಂಧೂರ’ ಮೆಚ್ಚಿದ ನಟ ಕಿಚ್ಚ ಸುದೀಪ್; ಪ್ರಧಾನಿ ಮೋದಿಗೆ ಸುದೀರ್ಘ ಪತ್ರ| Sudeep

Sudeep| ಆಪರೇಶನ್‌ ಸಿಂಧೂರದ ವಿಜಯಕ್ಕೆ ಧನ್ಯವಾದಗಳನ್ನು ತಿಳಿಸಿ ನಟ ಕಿಚ್ಚ ಸುದೀಪ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.

ಕಿಚ್ಚ ಸುದೀಪ್ ಅವರು ಪಹಲ್ಗಾಮ್ ದಾಳಿಯಾದಾಗ ತೀವ್ರವಾಗಿ ಖಂಡಿಸಿದ್ದರು. ಘಟನೆ ನಡೆದ ನಂತರ ಅವರು ಟ್ವೀಟ್ ಮಾಡಿದ್ದರು. ಇದೀಗ ಆಪರೇಷನ್ ಸಿಂಧೂರ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ ಪ್ರಧಾನಿ ಮೋದಿ ನಾಯಕತ್ವವನ್ನು ಕೊಂಡಾಡಿದ್ದಾರೆ. ‌

ಸುದೀಪ್‌ ಪತ್ರದಲ್ಲೇನಿದೆ?

ನನ್ನ ತಾಯಿ ನಿಧನದ ಸಂತಾಪ ಪತ್ರಕ್ಕೆ ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ಇಂದು ನಾನು ಕೇವಲ ಕೃತಜ್ಞತಾಪೂರ್ವಕ ಮಗನಾಗಿ ಅಲ್ಲದೇ ಹೆಮ್ಮೆಯ ಭಾರತೀಯನಾಗಿ ಪತ್ರ ಬರೆಯುತ್ತಿದ್ದೇನೆ. ಆಪರೇಷನ್ ಸಿಂಧೂರ ವಿಜಯೋತ್ಸವಕ್ಕೆ ನನ್ನ ಮೆಚ್ಚುಗೆ ಇದೆ. ಅದು ಕೇವಲ ಪ್ರತಿಕ್ರಿಯೆಯಾಗಿರಲಿಲ್ಲ. ಈ ಮೂಲಕ ಜಗತ್ತಿಗೆ ಒಂದು ದಿಟ್ಟ, ನಿರ್ಣಾಯಕ ಸಂದೇಶ.

ಭಾರತವು ಹಿಂಜರಿಯುವುದಿಲ್ಲ, ಭಾರತವು ಮರೆಯುವುದಿಲ್ಲ ಮತ್ತು ಭಾರತವು ಯಾವಾಗಲೂ ಮೇಲಿರುತ್ತದೆ. ಕೇವಲ ಪದಗಳಿಂದ ಮಾರ್ಗದರ್ಶನ ಮಾಡದೆ, ದೃಢ ನಿಶ್ಚಯದಿಂದ ಮಾರ್ಗದರ್ಶನ ಮಾಡುವ ನಾಯಕನನ್ನು ನಾವು ನೋಡುತ್ತಿದ್ದೇವೆ. ಪ್ರತಿಯೊಬ್ಬ ಕನ್ನಡಿಗ ಮತ್ತು ಇಡೀ ಕನ್ನಡ ಚಲನಚಿತ್ರೋದ್ಯಮವು ನಿಮ್ಮೊಂದಿಗೆ ದೃಢವಾಗಿ ನಿಂತಿದೆ. ನಿಮ್ಮ ಧೈರ್ಯದಿಂದ ಸ್ಫೂರ್ತಿ ಪಡೆಯುತ್ತೇವೆ. ನಿಮ್ಮ ನಾಯಕತ್ವದಲ್ಲಿ, ನಮ್ಮ ರಕ್ಷಣಾ ಪಡೆಗಳು ಅಪ್ರತಿಮ ನಿಖರತೆ, ಶಿಸ್ತು ಮತ್ತು ಶೌರ್ಯವನ್ನು ಪ್ರದರ್ಶಿಸಿವೆ. ಅವರ ಯಶಸ್ಸು ನಮ್ಮ ಹೆಮ್ಮೆ. ನಾವೆಲ್ಲರೂ ಒಂದೇ, ಧ್ವನಿಯೂ ಒಂದೇ, ಒಂದೇ ರಾಷ್ಟ್ರವಾಗಿ ಒಗ್ಗಟ್ಟಿನಿಂದ ನಿಂತಿದ್ದೇವೆ. ಪ್ರಧಾನಿ ಮೋದಿ ಅವರಿಗೆ ಕಿಚ್ಚ ಸುದೀಪ್‌ ಪತ್ರ ಬರೆದಿದ್ದಾರೆ.

ಉದ್ವಿಗ್ನತೆ ಸಂದರ್ಭದಲ್ಲಿ ದೇಶವನ್ನು ಉತ್ತಮ ನಾಯಕತ್ವದೊಂದಿಗೆ ಪ್ರಧಾನಿ ಮೋದಿ ಮುನ್ನಡೆಸುತ್ತಿದ್ದಾರೆಂಬ ಆಶಯವನ್ನು ಸುದೀಪ್‌ ವ್ಯಕ್ತಪಡಿಸಿದ್ದಾರೆ. ಭಾರತೀಯ ಸೇನೆಯ ಹೋರಾಟಕ್ಕೆ ಸುದೀಪ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.