ನ್ಯೂಸ್

ಕಂಪನಿಯ ನಿರ್ದೇಶಕನಿಂದಲೇ ಖ್ಯಾತ ಬಾಲಿವುಡ್ ನಟನ ಪತ್ನಿಗೆ ವಂಚನೆ...?

ಮುಂಬೈ: ಖ್ಯಾತ ಬಾಲಿವುಡ್​ ನಟನ ಪತ್ನಿ ತನಗೆ 58 ಲಕ್ಷ ರೂ. ವಂಚನೆ ಆಗಿದೆ ಎಂದು ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ, ನಿಷೇಧಾಜ್ಞೆ ಜಾರಿ

ಬಾಲಿವುಡ್​ನ ಹಿರಿಯ ನಟ ಜಾಕಿ ಶ್ರಾಫ್ ಪತ್ನಿ ಆಯೇಶಾ ಶ್ರಾಫ್ ಆರೋಪಿ ಅಲನ್ ಫೆರ್ನಾಂಡಿಸ್ ವಿರುದ್ಧ ಐಪಿಸಿ ಸೆಕ್ಷನ್ 420, 408, 465, 467 ಮತ್ತು 468 ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈಗಾಗಲೇ ಈ ಕುರಿತು ನಡೆಸುತ್ತಿದ್ದಾರೆ.

ಏನಿದು ಘಟನೆ?
ನಟ ಟೈಗರ್​ ಶ್ರಾಫ್​ ಹಾಗೂ ಆಯೇಶಾ ಶ್ರಾಫ್​ ಒಡೆತನದ MMA ಮ್ಯಾಟ್ರಿಕ್ಸ್ ಜಿಮ್​ನ ನಿರ್ದೇಶಕರಾಗಿ 2018ರ ನವೆಂಬರ್ 20ರಂದು ಅಲನ್​ನ್ನು ಕಂಪನಿಯ ನಿರ್ದೇಶಕರಾಗಿ ನೇಮಿಸಲಾಗಿತ್ತು. ಇಬ್ಬರು ನಟರಾಗಿದ್ದರಿಂದ ಕಂಪನಿಯ ಎಲ್ಲ ಚಟುವಟಿಕೆಗಳನ್ನು ಅಲನ್​ ನೋಡಿಕೊಳ್ಳುತ್ತಿದ್ದರು.

ಕಂಪನಿಯ ಬ್ಯಾಂಕ್ ಖಾತೆಯಲ್ಲಿ ಡಿಸೆಂಬರ್ 2018ರಿಂದ ಜನವರಿ 2023ರವರೆಗೆ ಒಟ್ಟು 58,53,591 ರೂಪಾಯಿಗಳನ್ನು ಸಂಗ್ರಹಿಸಲಾಗಿತ್ತು. ಅಲ್ಲದೆ, ಆರೋಪಿಯು ಕಂಪನಿಯ ಮೂಲಕ ಭಾರತ ಮತ್ತು ಭಾರತದ ಹೊರಗೆ ಒಟ್ಟು 11 ಪಂದ್ಯಾವಳಿಗಳನ್ನು ಆಯೋಜಿಸಲು ಸಾಕಷ್ಟು ಹಣವನ್ನು ತೆಗೆದುಕೊಂಡು ವಂಚಿಸಿದ್ದಾರೆ ಎಂದು ಆಯೇಶಾ ಆರೋಪಿಸಿದ್ದಾಳೆ.(ಏಜೆನ್ಸೀಸ್​)