ನ್ಯೂಸ್

ಡಾಲಿ ಧನಂಜಯ್ ಅಜ್ಜಿ ಮಲ್ಲಮ್ಮ ನಿಧನ

ಹಾಸನ: ಸ್ಯಾಂಡಲ್​​ವುಡ್​​ ನಟ ಡಾಲಿ ಧನಂಜಯ  ಅಜ್ಜಿ ಮಲ್ಲಮ್ಮ (95) ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಮಲ್ಲಮ್ಮ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಹಾಸನದ ಅರಸೀಕೆರೆಯ ಕಾಳೇನಹಳ್ಳಿಯಲ್ಲಿರುವ ನಿವಾಸದಲ್ಲಿ ಮಲ್ಲಮ್ಮ ಮೃತಪಟ್ಟಿದ್ದಾರೆ.

ಲಿಂಗದೇವರಾಜೇಗೌಡರ ಪತ್ನಿಯಾಗಿದ್ದ ಮಲ್ಲಮ್ಮ ಅವರಿಗೆ ಒಟ್ಟು ಐವರು ಮಕ್ಕಳು. ಇವರ ಎರಡನೇ ಪುತ್ರ ಅಡವಿಸ್ವಾಮಿ ಅವರ ಮಗನೇ ಡಾಲಿ ಧನಂಜಯ್.ಪ್ರತಿ ಬಾರಿ ಚುನಾವಣಾ ಸಂದರ್ಭದಲ್ಲಿ ಮೊಮ್ಮಗ ಡಾಲಿ ಧನಂಜಯ ಜತೆ ತೆರಳಿ ತಪ್ಪದೇ ಮತದಾನ ಮಾಡುತ್ತಿದ್ದರು.

‘ವೀಕೆಂಡ್ ವಿತ್ ರಮೇಶ್ ಸೀಸನ್​ 5’ರಲ್ಲಿ ಡಾಲಿ (Daali) ಅಜ್ಜಿ ಮಲ್ಲಮ್ಮ ಕೂಡ ವೇದಿಕೆ ಏರಿದ್ದರು. ಅವರು ಧನಂಜಯ್ ಮದುವೆ ಬಗ್ಗೆ ಮಾತನಾಡಿದ್ದರು.

ಧನಂಜಯ್​ಗೆ ಮದುವೆ ಮಾಡಬೇಕು. ನಾನು ಇದ್ದಾಗಲೇ ವಿವಾಹ ಮಾಡಬೇಕು ಎಂದು ಹೇಳಿದ್ರೆ, ‘ಆಗೋಣ ತಗೋಳಜ್ಜಿ’ ಎಂದು ಹೇಳುತ್ತಾನೆ. ಎಲ್ಲರ ಮದುವೆಯನ್ನೂ ಮಾಡಿದ್ದೇನೆ. ನಾವು ಹುಡುಕಿದ ಹುಡುಗಿಯನ್ನು ಅವನು ಒಪ್ಪಿಕೊಳ್ಳಬೇಕಲ್ಲ. ಅವನು ಒಪ್ಪಿಕೊಂಡು ಬಂದ್ರೆ ನಾನೇ ಮದುವೆ ಮಾಡ್ತೀನಿ’ ಎಂದಿದ್ದರು ಅಜ್ಜಿ ಮಲ್ಲಮ್ಮ. . ‘ನನ್ನ ಅಜ್ಜಿಗೆ 95 ವರ್ಷ. ಇನ್ನೂ ಐದು ವರ್ಷ ಅವರು ಇರ್ತಾರೆ. ಹಾಗಾಗಿ, ಆರಮಾಗಿ ಆಗ್ತೀನಿ’ ಎಂದಿದ್ದರು ಡಾಲಿ.