ನ್ಯೂಸ್

Gun License ತಾತ್ಕಾಲಿಕ ಅಮಾನತು; ನಟ ದರ್ಶನ್​ಗೆ ಮತ್ತೊಂದು ಆಘಾತ

ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿ ಸದ್ಯ ರೆಗ್ಯೂಲರ್​ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್​ ಸದ್ಯ ಫ್ಯಾಮಿಲಿಯೊಂದಿಗೆ ಕಾಲ ಕಳೆಯುತ್ತಿದ್ದು, ಈಚೆಗೆ ಕುಟುಂಬಸ್ಥರೊಂದಿಗೆ ದಿನಕರ್ ತೂಗುದೀಪ ನಿರ್ದೇಶನದ ರಾಯಲ್​ ಸಿನಿಮಾವನ್ನು ವೀಕ್ಷಿಸಿದ್ದಾರೆ.

ಇನ್ನೂ ನಟ ದರ್ಶನ್​ (Darshan) ಅವರ ಗನ್​ ಲೈಸೆನ್ಸ್​ (Gun License) ರದ್ದು ಮಾಡುವ ವಿಚಾರವಾಗಿ ಪೊಲೀಸರು ನೋಟಿಸ್​ ಜಾರಿ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ನಟ ದರ್ಶನ್​  ನಾನು ಸೆಲೆಬ್ರಿಟಿ, ಹೊರಗಡೆ ಹೋದಾಗ ಸುರಕ್ಷತೆಗೆ ಗನ್ ಬೇಕಾಗುತ್ತದೆ. ನನಗೆ ಗನ್ ಬೇಕು, ಪರವಾನಗಿ ರದ್ದು ಮಾಡಬೇಡಿ ಎಂದು ಪೊಲೀಸರು ನೀಡಿದ್ದ ನೋಟಿಸ್​ಗೆ ಪತ್ರದ ಮೂಲಕ ಉತ್ತರಿಸಿದ್ದರು. ಆದರೆ, ಇದೀಗ ಪೊಲೀಸರು ಗನ್​ ಲೈಸೆನ್ಸ್​ಅನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಬಿ. ದಯಾನಂದ್, ಮೂರು ವರ್ಷಕ್ಕಿಂತ ಮೇಲ್ಪಟ್ಟ ಶಿಕ್ಷೆ ವಿಧಿಸಬಹುದಾದ ಕೇಸ್‍ನಲ್ಲಿ ಆರೋಪಿಯಾಗಿರುವ ವ್ಯಕ್ತಿಯ ಬಳಿ ಲೈಸೆನ್ಸ್ ಇರುವ ಗನ್ ಇದ್ದರೆ ಅದನ್ನು ಕೂಡಲೇ ವಶಕ್ಕೆ ಪಡೆಯಲಾಗುತ್ತದೆ. ಅಲ್ಲದೇ ಗನ್​ಗೆ ನೀಡಲಾಗಿರುವ ಲೈನೆಸ್ಸ್​​ಅನ್ನು (Gun License) ರದ್ದು ಮಾಡಲಾಗುತ್ತದೆ.

ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಿಯೂ ಗನ್​ ಬಳಕೆ ಮಾಡಿರುವುದು ಕಂಡುಬಾರದ ಕಾರಣ ತಾತ್ಕಾಲಿಕವಾಗಿ ಅದರ ಲೈಸೆನ್ಸ್​ಅನ್ನು (Gun License) ರದ್ದುಪಡಿಸಲಾಗಿದೆ. ಅಂದರೆ ಕೇಸ್ ಮುಗಿಯುವ ತನಕ ಅಮಾನತ್ತಿನಲ್ಲಿಡಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್​ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.