ನ್ಯೂಸ್

ಕಾಟೇರ ಸಕ್ಸಸ್​; ಫ್ರೆಂಡ್ಸ್​-ಫ್ಯಾಮಿಲಿ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಚಾಲೆಂಜಿಂಗ್​ ಸ್ಟಾರ್​

ಬೆಂಗಳೂರು: 2023ರ ಅಂತ್ಯದಲ್ಲಿ ತೆರೆಕಂಡು ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದ್ದ ಕಾಟೇರ ಚಿತ್ರದ ಯಶಸ್ಸಿನ ಗುಂಗಿನಲ್ಲಿರುವ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್​ರೊಟ್ಟಿಗೆ ತಿರುಪತಿ ಹಾಗೂ ಶ್ರೀಕಾಳಹಸ್ತಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನಟ ದರ್ಶನ್​ ಅವರ ಹುಟ್ಟುಹಬ್ಬ ಸನಿಹದಲ್ಲಿದ್ದು, ಹೊಸ ಚಿತ್ರದ ಶೂಟಿಂಗ್​ ಸಹ ಪ್ರಾರಂಭವಾಗಲಿದೆ. ಇದರ ನಡುವೆಯೇ ಅವರು ತಿರುಪತಿ ಹಾಗೂ ಶ್ರೀಕಾಳಹಸ್ತಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇವರೊಟ್ಟಿಗೆ ಆಪ್ತರಾದ ಸಚ್ಚಿದಾನಂದ ಸೇರಿದಂತೆ ಹಲವರು ಉಪಸ್ಥಿತರಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಫೆಬ್ರವರಿ-16 ರಂದು ದರ್ಶನ್ ಜನ್ಮ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡೆವಿಲ್ ದಿ ಹೀರೋ ಚಿತ್ರದ ಒಂದು ವಿಡಿಯೋ ತುಣುಕು ರಿಲೀಸ್ ಆಗುತ್ತಿದೆ. ಡೆವಿಲ್​ ಚಿತ್ರದ ಮುಕ್ತಾಯದ ನಂತರ ದರ್ಶನ್​ ಪ್ರೇಮ್​ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದು, ಇದಕ್ಕಾಗಿ ಈಗಾಗಲೇ ತಯಾರಿ ಆರಂಭಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಆಪ್ತೆ ಪವಿತ್ರಾ ಗೌಡ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಟೀಕೆ ವ್ಯಕ್ತವಾಗಿತ್ತು. ವಿವಾದದ ಬೆನ್ನಲ್ಲೇ ಪವಿತ್ರಾ ಗೌಡ, ದರ್ಶನ್ ಜೊತೆಗಿನ ತಮ್ಮ ಚಿತ್ರಗಳನ್ನು ಹಂಚಿಕೊಂಡಿದ್ದರು. ಆದರೆ ಈಗ ದರ್ಶನ್, ಪತ್ನಿ ಹಾಗೂ ಪುತ್ರನೊಟ್ಟಿಗೆ ದೇವಾಲಯಗಳಿಗೆ ಭೇಟಿ ನೀಡಿ ಪರೋಕ್ಷ ಸಂದೇಶ ರವಾನಿಸಿದ್ದಾರೆ.